ಹಿಜಾಬ್ ವಿಚಾರ : ಸಿದ್ದರಾಮಯ್ಯ ಯಾವುದೇ ಒಂದು ಪಂಗಡದ ಮುಖ್ಯಮಂತ್ರಿಯಲ್ಲ ; ಪೇಜಾವರ ಶ್ರೀ

ಬೆಳಗಾವಿ : ಹಿಜಾಬ್ ಹಿಂಪಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಪೇಜಾವರ ಶ್ರೀಗಳು ಆಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ವಿವಿಧ ಗುಂಪುಗಳಿಗೆ ವಿಭಿನ್ನ ಕಾನೂನುಗಳನ್ನು ಜಾರಿಗೊಳಿಸುವುದು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತದೆ. ನಿರ್ದಿಷ್ಟವಾಗಿ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಇಂಥದ್ದನ್ನು ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರು ಕರ್ನಾಟಕದ ಎಲ್ಲರಿಗೂ ಮುಖ್ಯಮಂತ್ರಿಯಾಗಿದ್ದಾರೆ. ಸಮಾಜದಲ್ಲಿ ಒಂದು ಪಂಗಡವನ್ನು ಗುರಿಯಾಗಿರಿಸಿಕೊಂಡು, ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಒಂದು ನ್ಯಾಯ, ಒಬ್ಬರಿಗೆ ಒಂದು ಕಾನೂನು ಇನ್ನೊಬ್ಬರಿಗೆ ಒಂದು ಕಾನೂನು ಮಾಡುವದು ಸರಿಯಲ್ಲ ಎಂದು ಹೇಳಿದರು. ಅವರು ಒಂದು ನಿರ್ದಿಷ್ಟ ಗುಂಪು ಅಥವಾ ಸಮೂಹಕ್ಕೆ ಮಾತ್ರ ಸೇರಿದವರಲ್ಲ. ಈ ರೀತಿಯ ನಡೆಯು ಸಮಾಜವನ್ನು ನಿಜವಾಗಿಯೂ ಗೊಂದಲಗೊಳಿಸುತ್ತದೆ . ಈ ರೀತಿಯ ನಡವಳಿಕೆ ಸರಿಯಲ್ಲ, ಇದನ್ನ ಯಾರು ಮಾಡಬಾರದು, ಮುಖ್ಯವಾಗಿ ಸಿಎಂ ಆಗಿ ಇವರು ಇಂತಹ ತಪ್ಪು ಮಾಡಬಾರದು ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement