ವೀಡಿಯೊ..| : ಮಹಿಳೆ-ಇಬ್ಬರು ಮಕ್ಕಳ ಮೇಲೆ ಹಾದುಹೋದ ರೈಲು : ಆದ್ರೂ ಪವಾಡಸದೃಶ ರೀತಿಯಲ್ಲಿ ಮೂವರೂ ಪಾರು…!

ಶನಿವಾರ ಬಿಹಾರ ರೈಲು ನಿಲ್ದಾಣದಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳ ಮೇಲೆ ರೈಲು ಹರಿದರೂ ಅವರು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಪ್ಲಾಟ್‌ಫಾರ್ಮ್‌ನಲ್ಲಿರುವ ಜನರು ರೆಕಾರ್ಡ್ ಮಾಡಿದ ಮೈ ಜುಂ ಎನ್ನುವ ವೀಡಿಯೊದಲ್ಲಿ, ನಿಲ್ದಾಣದ ಮೂಲಕ ರೈಲು ವೇಗವಾಗಿ ಸಾಗುತ್ತಿರುವಾಗ ಹಳಿಗಳ ಮೇಲೆ ತಾಯಿ ತನ್ನ ಮಕ್ಕಳೊಂದಿಗೆ ಹಳಿಗಳ ಮೇಲೆ ಬಿದ್ದಾಗ ರೈಲು ಅವರ ಮೇಲೆ ಹಾದುಹೋಗುವುದನ್ನು ತೋರಿಸುತ್ತದೆ. ಆದರೆ ಮೂವರೂ ಯಾವುದೇ ಗಾಯವಿಲ್ಲದೆ ಬದುಕುಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ, ಮಹಿಳೆ ಮತ್ತು ಅವರ ಮಕ್ಕಳು ತಮ್ಮ ಕುಟುಂಬದೊಂದಿಗೆ ದೆಹಲಿಗೆ ವಿಕ್ರಮಶಿಲಾ ಎಕ್ಸ್‌ಪ್ರೆಸ್ ಹತ್ತಲು ಬಿಹಾರದ ಬರ್ಹ್ ರೈಲು ನಿಲ್ದಾಣವನ್ನು ತಲುಪಿದರು. ಒಂದು ದೊಡ್ಡ ಗುಂಪು ರೈಲನ್ನು ಹತ್ತಲು ಪ್ರಾರಂಭಿಸಿತು ಮತ್ತು ಏರುವ ಧಾವಂತದಲ್ಲಿ ಮೂವರೂ ಪ್ಲಾಟ್‌ಫಾರ್ಮ್‌ನಿಂದ ತಳ್ಳಲ್ಪಟ್ಟರು ಮತ್ತು ಹಳಿಗಳ ಮೇಲೆ ಬಿದ್ದರು.
ರೈಲು ನಿಲ್ದಾಣದಿಂದ ಹೊರಡಲು ಪ್ರಾರಂಭಿಸಿದ ನಂತರ ಉದ್ರಿಕ್ತ ಪ್ರಯಾಣಿಕರು ಕುಟುಂಬವನ್ನು ಉಳಿಸಲು ಕಿರುಚಿದರು. ಇದರಿಂದ ಗೊಂದಲವುಂಟಾಯಿತು. ಭಯಭೀತರಾದ ತಾಯಿ ತನ್ನ ಮಕ್ಕಳ ಮೇಲೆ ಅವಚಿಕೊಂಡು ಹಳಿಗಳ ಮೇಲೆ ಮಲಗಿದರು. ಹಾಗೂ ರೈಲು ಹಾದು ಹೋದರೂ ಮಕ್ಕಳನ್ನು ರಕ್ಷಿಸಿದಳು ಹಾಗೂ ತಾನೂ ಬದುಕಿ ಉಳಿದಳು.

ವೇಗದ ರೈಲು ಅವರ ಮೇಲೆ ಹಾದು ಹೋಗುವುದನ್ನು ನೋಡುತ್ತಿದ್ದ ಪ್ರಯಾಣಿಕರನ್ನು ಅವಳು ಪಾರಾದ ರೀತಿಗೆ ಬೆಚ್ಚಿಬಿದ್ದರು.ಕೆಲವೇ ಸೆಕೆಂಡುಗಳಲ್ಲಿ, ರೈಲು ಹೊರಟುಹೋಯಿತು ಮತ್ತು ಮಹಿಳೆಯು ಟ್ರ್ಯಾಕ್‌ನಲ್ಲಿ ಚಲನರಹಿತವಾಗಿದ್ದಳು. ತಕ್ಷಣವೇ ಪ್ರಯಾಣಿಕರ ಗುಂಪು ಮೂವರನ್ನು ಮತ್ತೆ ಪ್ಲಾಟ್‌ಫಾರ್ಮ್‌ಗೆ ಕರೆತರಲು ಧಾವಿಸಿದರು.
ಪತಿ ರೈಲಿನಿಂದ ಹಾರಿ ಮತ್ತೆ ನಿಲ್ದಾಣಕ್ಕೆ ಓಡಿಹೋದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಟುಂಬದವರನ್ನು ವೈದ್ಯಕೀಯ ತಪಾಸಣೆಗಾಗಿ ಸಮೀಪದ ಆಸ್ಪತ್ರೆಗೆ ಕಳುಹಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement