ಏಕದಿನ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾದ ಬ್ಯಾಟರ್‌ ಡೇವಿಡ್ ವಾರ್ನರ್

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟರ್‌ ಡೇವಿಡ್ ವಾರ್ನರ್ ಸೋಮವಾರ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಗೂ ವಿದಾಯ ಹೇಳಿದ್ದಾರೆ.
ಆದರೆ ಅಗತ್ಯವಿದ್ದರೆ 2025 ರ ಚಾಂಪಿಯನ್ಸ್ ಟ್ರೋಫಿಗೆ ಲಭ್ಯವಿರುವುದಾಗಿ ತಿಳಿಸಿದ್ದಾರೆ. 37 ವರ್ಷ ವಯಸ್ಸಿನ ವಾರ್ನರ್‌ ಅವರಿಗೆ ಜ.3ರಿಂದ ಪಾಕಿಸ್ತಾನ ವಿರುದ್ಧ ಸಿಡ್ನಿಯಲ್ಲಿ ನಡೆಯುವ ಪಂದ್ಯವು ವೃತ್ತಿ ಜೀವನದ ಕೊನೆಯ ಟೆಸ್ಟ್ ಪಂದ್ಯವಾಗಲಿದೆ. ವಾರ್ನರ್‌ ಅವರು ಈವರೆಗೆ ಟೆಸ್ಟ್‌ ಗಳಲ್ಲಿ 26 ಶತಕಗಳು ಮತ್ತು 36 ಅರ್ಧ ಶತಕಗಳೊಂದಿಗೆ 44.58 ರ ಸರಾಸರಿಯಲ್ಲಿ 8,695 ರನ್‌ಗಳನ್ನು ಹೊಡೆದಿದ್ದಾರೆ. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಅವರು ಏಕದಿನದ ಪಂದ್ಯಗಳಿಗೂ ನಿವೃತ್ತಿ ಘೋಷಿಸಿದ್ದಾರೆ.

2009 ರಲ್ಲಿ ತಮ್ಮ ಚೊಚ್ಚಲ ಪಂದ್ಯ ಆಡಿದ ಅವರು 2015 ಮತ್ತು 2023 ರಲ್ಲಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
‘ನಾನು ಏಕದಿನ ಕ್ರಿಕೆಟ್‌ನಿಂದಲೂ ನಿವೃತ್ತಿ ಪಡೆಯುತ್ತಿದ್ದೇನೆ. ಇದನ್ನೇ ನಾನು ಭಾರತದಲ್ಲಿ ಹೇಳಿದ್ದು. ಭಾರತದಲ್ಲಿ ವಿಶ್ವಕಪ್ ಗೆದ್ದಿರುವುದು ನಿಜಕ್ಕೂ ದೊಡ್ಡ ಸಾಧನೆ’ ಎಂದು ಅವರು ಹೇಳಿದ್ದಾರೆ.
ವಾರ್ನರ್ 161 ಏಕದಿನ ಪಂದ್ಯಗಳಲ್ಲಿ ಪಂದ್ಯಗಳಲ್ಲಿ 22 ಶತಕಗಳನ್ನು ಗಳಿಸಿದ್ದಾರೆ. 45.30 ರ ಸರಾಸರಿಯಲ್ಲಿ 6,932 ರನ್ ಗಳಿಸಿದ್ದಾರೆ. ಇವರು ಆಸ್ಟ್ರೇಲಿಯದಲ್ಲಿ ಪೈಕಿ ರಿಕಿ ಪಾಂಟಿಂಗ್ (30 ಶತಕ) ನಂತರ ಏಕದಿನದ ಪಂದ್ಯದಲ್ಲಿ ಅತಿ ಹೆಚ್ಚು ಶತಕಗಳಿಸಿದ ಆಟಗಾರರಾಗಿದ್ದಾರೆ.
ಆದರೆ ಅವರು ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದಲ್ಲಿ 2024 ರಲ್ಲಿ ನಡೆಯಲಿರುವ T20- ವಿಶ್ವಕಪ್ ಗೆ ಲಭ್ಯವಿರುತ್ತಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement