ಮಾತುಕತೆಗಳ ನಂತರವೇ ಹಿಟ್-ಅಂಡ್-ರನ್ ಕಾನೂನು ಜಾರಿಗೆ ನಿರ್ಧಾರ : ದೇಶಾದ್ಯಂತ ಮುಷ್ಕರ ಹಿಂಪಡೆದ ಟ್ರಕ್‌ ಚಾಲಕರು

ನವದೆಹಲಿ : ಹಿಟ್‌ ಅಂಡ್‌ ರನ್‌ ವಿರುದ್ಧ ಕಾನೂನನ್ನು ಜಾರಿಗೊಳಿಸುವ ಮೊದಲು ಮಧ್ಯಸ್ಥಗಾರರ ಜತೆ ಸಮಾಲೋಚನೆ ನಡೆಸುವುದಾಗಿ ಸರ್ಕಾರ ಭರವಸೆ ನೀಡಿದ ನಂತರ ದೇಶಾದ್ಯಂತ ಟ್ರಕ್‌ ಚಾಲಕರ ಮುಷ್ಕರವನ್ನು ಹಿಂಪಡೆಯಲಾಗಿದೆ. ಸರ್ಕಾರದ ಜೊತೆ ಸುದೀರ್ಘ ಮಾತುಕತೆಯ ನಂತರ, ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಮುಷ್ಕರವನ್ನು ಹಿಂಪಡೆಯಿತು.
“ನಾವು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ್ದೇವೆ… ಹೊಸ ನಿಯಮವನ್ನು ಇನ್ನೂ ಜಾರಿಗೆ ತಂದಿಲ್ಲ ಎಂದು ಸರ್ಕಾರ ಹೇಳಲು ಬಯಸಿದೆ. ಭಾರತೀಯ ನ್ಯಾಯ ಸಂಹಿತಾ 106/2 ಅನ್ನು ಜಾರಿಗೊಳಿಸುವ ಮೊದಲು ನಾವು ಚರ್ಚೆ ನಡೆಸುತ್ತೇವೆ. ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಪ್ರತಿನಿಧಿಗಳೊಂದಿಗೆ ಚರ್ಚಿಸಿದ ನಂತರ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮಂಗಳವಾರ ಹೇಳಿದ್ದಾರೆ.

“ಹೊಸ ಕಾನೂನುಗಳನ್ನು ಜಾರಿಗೆ ತರಲಾಗಿಲ್ಲ. ಆಲ್ ಇಂಡಿಯಾ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್‌ನೊಂದಿಗೆ ಸಮಾಲೋಚಿಸಿದ ನಂತರವೇ ಇದನ್ನು ಜಾರಿಗೊಳಿಸಲಾಗುವುದು” ಎಂದು ಎಐಎಂಟಿಸಿಯ ಕೋರ್ ಕಮಿಟಿ ಅಧ್ಯಕ್ಷ ಬಾಲ ಮಲ್ಕಿತ್ ಖಚಿತಪಡಿಸಿದ್ದಾರೆ.
ಪ್ರತಿಭಟನೆಯು ಭಾರತೀಯ ನ್ಯಾಯ ಸಂಹಿತಾ ಅಥವಾ BNS ನ ಸೆಕ್ಷನ್ 106(2) ಅನ್ನು ವಿರೋಧಿಸಿ ನಡೆದಿತ್ತು. ಇದು ಹಿಟ್-ಅಂಡ್-ರನ್ ಪ್ರಕರಣಗಳಲ್ಲಿ ಕಟ್ಟುನಿಟ್ಟಾದ ದಂಡನೆಗೆ ನಿಬಂಧನೆಗಳನ್ನು ಹೊಂದಿದೆ. ಟ್ರಕ್ಕರ್‌ಗಳು ಅಖಿಲ ಭಾರತ ಮುಷ್ಕರವನ್ನು ನಡೆಸುವುದಾಗಿ ಬೆದರಿಕೆ ಹಾಕಿದರು, ಇಂಧನ ಮತ್ತು ಅಗತ್ಯ ವಸ್ತುಗಳ ಕೊರತೆಯ ಭೀತಿಗೆ ಕಾರಣವಾಯಿತು.

ಪ್ರಮುಖ ಸುದ್ದಿ :-   ಪವಿತ್ರಾ ಜಯರಾಮ ಸಾವಿನ ಬೆನ್ನಲ್ಲೇ ಗೆಳೆಯ-ಕಿರುತೆರೆ ನಟ ಚಂದು ಆತ್ಮಹತ್ಯೆ

ಜಮ್ಮು ಮತ್ತು ಕಾಶ್ಮೀರ, ಬಿಹಾರ, ಪಂಜಾಬ್, ಮಹಾರಾಷ್ಟ್ರ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಛತ್ತೀಸ್‌ಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ವ್ಯಾಪಿಸಿತ್ತು. ಟ್ರಕ್ ಚಾಲಕರ ಮುಷ್ಕರ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಸಾಗಣೆಗೆ ಅಡ್ಡಿ ಉಂಟಾಗಿತ್ತು. ಎಲ್ಲಿ ಇಂಧನ ಸಿಗುವುದಿಲ್ಲವೋ ಎಂಬ ಭೀತಿಯಿಂದ ಬಂಕ್​ಗಳಿಗೆ ಮುಗಿಬಿದ್ದ ಜನರು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್ ಖರೀದಿಸಿದ್ದರು.
ಹೊಸ ಕಾನೂನಿನ ಅಡಿಯಲ್ಲಿ, ಹಿಟ್ ಅಂಡ್ ರನ್ ಪ್ರಕರಣಗಳಿಗೆ 10 ವರ್ಷಗಳವರೆಗೆ ಜೈಲು ಮತ್ತು ₹ 7 ಲಕ್ಷ ದಂಡ ವಿಧಿಸಬಹುದು — ಪ್ರಸ್ತುತ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಲಘು ದಂಡ ಮಾತ್ರ ಇತ್ತು. ಅಪರಾಧಿಯು ದುಡುಕಿನ ಚಾಲನೆಯ ಮೂಲಕ ಸಾವನ್ನು ಉಂಟುಮಾಡಿದರೆ ಮತ್ತು ವಿಷಯವನ್ನು ಪೊಲೀಸರಿಗೆ ವರದಿ ಮಾಡದೆಯೇ ನಿರ್ಲಕ್ಷಿಸಿದರೆ ನೂತನ ಕಾನೂನು ಅಡಿ 10 ವರ್ಷಗಳ ಗರಿಷ್ಠ ಶಿಕ್ಷೆ ನೀಡಬಹುದಾಗಿದೆ.
ಟ್ರಕ್‌ ಚಾಲಕರು, ಕ್ಯಾಬ್ ಚಾಲಕರು ಮತ್ತು ವಾಣಿಜ್ಯ ವಾಹನಗಳನ್ನು ನಿರ್ವಹಿಸುವ ಇತರರು ಅಪಘಾತಕ್ಕೀಡಾದ ಸಂದರ್ಭದಲ್ಲಿ ಇಷ್ಟು ದಂಡವನ್ನು ಹೇಗೆ ಪಾವತಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ : ಸ್ವಾತಿ ಮಲಿವಾಲ್ ಹೊಸ ವೀಡಿಯೊ ಬಿಡುಗಡೆ ಮಾಡಿದ ಎಎಪಿ : ನಿಜವಾಗಿ ನಡೆದದ್ದು ಏನು..?

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement