ಇರಾನ್ನಲ್ಲಿ ನಡೆದ ಎರಡು ಸೋಟದಲ್ಲಿ ಕನಿಷ್ಠ 100ಕ್ಕೂ ಹೆಚ್ಚು ಜನರು ಸಾವಿಗೀಡಾದ ಘಟನೆಯ ಹೊಣೆಯನ್ನು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಗುರುವಾರ ಹೊತ್ತುಕೊಂಡಿದೆ.
2020 ರಲ್ಲಿ ಅಮೆರಿಕದ ಡ್ರೋನ್ನಿಂದ ಕೊಲ್ಲಲ್ಪಟ್ಟ ಕಮಾಂಡರ್ ಖಾಸೆಮ್ ಸೊಲೈಮಾನಿಯನ್ನು ಸ್ಮರಣಾರ್ಥ ಇರಾನ್ನ ಕೆರ್ಮನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡು ಬಾಂಬ್ಗಳು ಅನುಕ್ರಮವಾಗಿ ಸ್ಫೋಟಗೊಂಡವು.
ಸುದ್ದಿ ಸಂಸ್ಥೆ ರಾಯಿಟರ್ಸ್ನ ವರದಿಯ ಪ್ರಕಾರ, ಇಸ್ಲಾಮಿಕ್ ಸ್ಟೇಟ್ ತನ್ನ ಅಂಗಸಂಸ್ಥೆಯ ಟೆಲಿಗ್ರಾಮ್ ಚಾನೆಲ್ಗಳ ಮೂಲಕ ದಾಳಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡ ಹೇಳಿಕೆಯನ್ನು ಪೋಸ್ಟ್ ಮಾಡಿದೆ.
ಬಾಗ್ದಾದ್ ವಿಮಾನ ನಿಲ್ದಾಣದ ಹೊರಗೆ ಅಮೆರಿಕ ಡ್ರೋನ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಇರಾನಿನ ಕಮಾಂಡರ್ ಖಾಸೆಮ್ ಸೊಲೈಮಾನಿ ಸಾವಿನ ನಾಲ್ಕನೇ ವಾರ್ಷಿಕ ದಿನದ ಸ್ಮರಣಾರ್ಥ ಅವರನ್ನು ಸಮಾಧಿ ಮಾಡಿದ ಇರಾನ್ ದಕ್ಷಿಣದ ಕೆರ್ಮನ್ನಲ್ಲಿರುವ ಸಾಹೇಬ್ ಅಲ್-ಜಮಾನ್ ಮಸೀದಿಯ ಬಳಿ ಬೆಂಬಲಿಗರು ಜಮಾಯಿಸಿದಾಗ ಸ್ಫೋಟಗಳು ಸಂಭವಿಸಿದವು. ಇರಾನ್ ಸರ್ಕಾರಿ ಮಾಧ್ಯಮಗಳ ಪ್ರಕಾರ, ಬಾಂಬ್ ದಾಳಿಯಲ್ಲಿ ಕನಿಷ್ಠ 170 ಜನರು ಗಾಯಗೊಂಡಿದ್ದಾರೆ.
ಸ್ಫೋಟದ ಒಂದು ದಿನದ ನಂತರ ಕೆರ್ಮನ್ನಲ್ಲಿ ಗುಂಡಿನ ದಾಳಿಯ ವರದಿಗಳಿವೆ ಎಂದು ಗುರುವಾರ ಸರ್ಕಾರಿ ಮಾಧ್ಯಮಗಳು ತಿಳಿಸಿವೆ.
ಇರಾನ್ನ ತಸ್ನಿಮ್ ಸುದ್ದಿ ಸಂಸ್ಥೆಯ ಪ್ರಕಾರ, ಸ್ಥಳದಲ್ಲಿ “ಬಾಂಬ್ಗಳನ್ನು ಇಟ್ಟಿದ್ದ ಎರಡು ಚೀಲಗಳು ಸ್ಫೋಟಗೊಂಡವು. ರಿಮೋಟ್ ಕಂಟ್ರೋಲ್ ಬಳಸಿ ಬಾಂಬ್ ಸ್ಫೋಟಿಸಲಾಗಿದೆ.
ಮಧ್ಯಪ್ರಾಚ್ಯದಾದ್ಯಂತ ಮಿಲಿಟರಿ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುವ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ನ ವಿದೇಶಿ ಕಾರ್ಯಾಚರಣೆಯ ಅಂಗವಾದ ಕುಡ್ಸ್ ಫೋರ್ಸ್ಗೆ ಸೊಲೈಮಾನಿ ನೇತೃತ್ವ ವಹಿಸಿದ್ದರು.
ಬದುಕಿರುವಾಗಲೇ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯಿಂದ “ಜೀವಂತ ಹುತಾತ್ಮ” ಎಂದು ಘೋಷಿಸಲ್ಪಟ್ಟ ಸೊಲೈಮಾನಿ ಇರಾಕ್ ಮತ್ತು ಸಿರಿಯಾ ಎರಡರಲ್ಲೂ ಇಸ್ಲಾಮಿಕ್ ಸ್ಟೇಟ್ ಜಿಹಾದಿಸ್ಟ್ ಗುಂಪನ್ನು ಮಟ್ಟ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಅವರು ಹೀರೋ ಎಂದು ಪರಿಗಣಿಸಲ್ಪಟ್ಟರು.
ನಿಮ್ಮ ಕಾಮೆಂಟ್ ಬರೆಯಿರಿ