ಧೋತಿ-ಕುರ್ತಾ ಧರಿಸಿ ಕ್ರಿಕೆಟ್ ಆಡಿದ ವೇದ ಪಂಡಿತರು ; ಸಂಸ್ಕೃತದಲ್ಲೇ ಕಾಮೆಂಟರಿ, ಮಾತುಕತೆ; ವಿಜೇತ ತಂಡಕ್ಕೆ ಅಯೋಧ್ಯಾ ಪ್ರವಾಸದ ಬಹುಮಾನ | ವೀಕ್ಷಿಸಿ

ಭೋಪಾಲ: ಸಂಸ್ಕೃತವನ್ನು ಉತ್ತೇಜಿಸುವ ಉದ್ದೇಶ ಹೊಂದಿರುವ ವಾರ್ಷಿಕ ಪಂದ್ಯಾವಳಿಯ ಭಾಗವಾಗಿ ಧೋತಿ-ಕುರ್ತಾವನ್ನು ಧರಿಸಿರುವ ಮತ್ತು ಹಣೆಯ ಮೇಲೆ ಕುಂಕುಮ-ತಿಲಕ ಇಟ್ಟುಕೊಂಡ ವೈದಿಕರು ಭೋಪಾಲಿನ ಕ್ರಿಕೆಟ್ ಪಿಚ್‌ನಲ್ಲಿ ಆಯೋಜಿಸಿರುವ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಟವಾಡಿದ್ದಾರೆ. ಪಾಶ್ಚಿಮಾತ್ಯ ದೇಶಗಳಿಗೆ ಧ್ಯಾನದ ಅಭ್ಯಾಸವನ್ನು ಪರಿಚಯಿಸಿದ ಮಹರ್ಷಿ ಮಹೇಶ ಯೋಗಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದ ವಿಜೇತರಿಗೆ ಈ ವರ್ಷ ಅಯೋಧ್ಯೆ ಪ್ರವಾಸ ಮಾಡುವ ವಿಶೇಷ ಬಹುಮಾನವಿದೆ ಎಂದು ಸಂಘಟಕರೊಬ್ಬರು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಮಂದಿರದ ಉದ್ಘಾಟನೆ ನಡೆಯಲಿದೆ. ನಾಲ್ಕು ದಿನಗಳ ಈ ಕ್ರಿಕೆಟ್‌ ಪಂದ್ಯಾವಳಿಯು ಶುಕ್ರವಾರ ಮಧ್ಯಪ್ರದೇಶದ ರಾಜಧಾನಿ ಭೋಪಾಲಿನ ಅಂಕುರ್ ಮೈದಾನದಲ್ಲಿ ಪ್ರಾರಂಭವಾಯಿತು.

ಆಟಗಾರರು ಮತ್ತು ಅಂಪೈರ್‌ಗಳು ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತುಕತೆ ನಡೆಸಿದರು. ವೀಕ್ಷಕ ವಿರಣೆಕಾರರು (ಕಾಮೆಂಟ್ರೇಟರ್ಸ್‌) ಸಂಸ್ಕೃತದಲ್ಲಿ ಕ್ರಿಕೆಟ್‌ ಕಾಮೆಂಟರಿ ಹೇಳಿದರು. ಮೈದಾನದಲ್ಲಿ ಹೊಡೆತಗಳು, ಮಿಸ್‌ಗಳು ಮತ್ತು ಕ್ಯಾಚ್‌ಗಳು, ಔಟಾಗುವುದು, ಓಡುವುದು ಎಲ್ಲವನ್ನೂ ಸಂಸ್ಕೃತದಲ್ಲಿಯೇ ನಿರೂಪಣೆ ಮಾಡಿದ್ದಾರೆ.
ಜನವರಿ 12 ರಂದು ಜನಿಸಿದ ಆಧ್ಯಾತ್ಮಿಕ ನಾಯಕ ಮಹೇಶ ಯೋಗಿ ಸ್ಥಾಪಿಸಿದ ಸಂಸ್ಥೆಯು ದೇಶದ ಅನೇಕ ಭಾಗಗಳಲ್ಲಿ ವೇದ ಶಾಲೆಗಳು ಮತ್ತು ಸೆಮಿನರಿಗಳನ್ನು ನಡೆಸುತ್ತಿದೆ.

ಪ್ರಮುಖ ಸುದ್ದಿ :-   ಪವಿತ್ರಾ ಜಯರಾಮ ಸಾವಿನ ಬೆನ್ನಲ್ಲೇ ಗೆಳೆಯ-ಕಿರುತೆರೆ ನಟ ಚಂದು ಆತ್ಮಹತ್ಯೆ

ಮಹರ್ಷಿ ಮೈತ್ರಿ ಪಂದ್ಯ ಸಮಿತಿಯ ಸದಸ್ಯ ಅಂಕುರ್ ಪಾಂಡೆ ಪ್ರಕಾರ, ವಿಜೇತರನ್ನು ಜನವರಿ 22 ರ ನಂತರ ಅಯೋಧ್ಯೆಗೆ ಕಳುಹಿಸಲಾಗುತ್ತದೆ, ವಿಜೇತರು 21,000 ರೂಪಾಯಿ ಬಹುಮಾನವನ್ನು ಪಡೆಯುತ್ತಾರೆ, ಮತ್ತು ರನ್ನರ್ ಅಪ್ 11,000 ರೂಪಾಯಿಗಳನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು.
ಭೋಪಾಲ್‌ನ ನಾಲ್ಕು ತಂಡಗಳು ಸೇರಿದಂತೆ ಹನ್ನೆರಡು ತಂಡಗಳು ನಾಲ್ಕನೇ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ ಎಂದು ಪಾಂಡೆ ಹೇಳಿದರು.ಈ ಕಾರ್ಯಕ್ರಮವು ವೈದಿಕ ಕುಟುಂಬದಲ್ಲಿ ಸಂಸ್ಕೃತ ಮತ್ತು ಕ್ರೀಡಾ ಮನೋಭಾವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಇನ್ನೊಬ್ಬ ಸಂಘಟಕರು ಹೇಳಿದರು. ಬಹುಮಾನಗಳ ಹೊರತಾಗಿ, ಆಟಗಾರರಿಗೆ ವೇದ ಪುಸ್ತಕಗಳು ಮತ್ತು 100 ವರ್ಷಗಳ ‘ಪಂಚಾಂಗ’ (ಪಂಗಡ) ನೀಡಿ ಗೌರವಿಸಲಾಗುತ್ತದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ : ಸ್ವಾತಿ ಮಲಿವಾಲ್ ಹೊಸ ವೀಡಿಯೊ ಬಿಡುಗಡೆ ಮಾಡಿದ ಎಎಪಿ : ನಿಜವಾಗಿ ನಡೆದದ್ದು ಏನು..?

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement