ಅಪರೂಪಕ್ಕೆ ಕಾಣಿಸಿಕೊಂಡ ಬಹಳ ʼಅಪರೂಪದ ಬಿಳಿ ತಿಮಿಂಗಿಲʼ | ವೀಕ್ಷಿಸಿ

ಗಮನಾರ್ಹವಾದ ಮುಖಾಮುಖಿಯಲ್ಲಿ ಥೈಲ್ಯಾಂಡಿನ ಫುಕೆಟ್ ಕರಾವಳಿಯ ಪ್ರವಾಸಿಗರು ಇತ್ತೀಚೆಗೆ ಅತ್ಯಂತ ಅಪರೂಪದ ಬಿಳಿ ತಿಮಿಂಗಿಲವನ್ನು ನೋಡಿದ್ದಾರೆ. ಹೊಸ ವರ್ಷದ ಮೊದಲ ದಿನವೇ ಈ ಅಸಾಧಾರಣ ಹಾಗೂ ಅತ್ಯಂತ ಅಪರೂಪದ ಬಿಳಿ ತಿಮಿಂಗಿಲ ಕಾಣಿಸಿಕೊಂಡಿದೆ. ‘ಹ್ಯಾಪಿ ಅವರ್’ ಎಂಬ ಬೋಟ್‌ನಲ್ಲಿದ್ದ ಪ್ರಯಾಣಿಕರು ಮತ್ತೊಂದು ತಿಮಿಂಗಿಲದ ಜೊತೆಯಲ್ಲಿ ಈಜುತ್ತಿದ್ದ ಈ ಸಂಪೂರ್ಣ ಬಿಳಿ ಬಣ್ಣದ ತಿಮಿಂಗಿಲವನ್ನು ಅವರು ತಮ್ಮ ಜೀವಿತಾವಧಿಯಲ್ಲಿ ನೋಡಿದ ಅದೃಷ್ಟಶಾಲಿಗಳು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಫುಕೆಟ್ ಪ್ರಾಂತ್ಯದ ಭಾಗವಾದ ಕೋರಲ್ ಐಲ್ಯಾಂಡ್‌ನ ದಕ್ಷಿಣಕ್ಕೆ ಸುಮಾರು 5.6 ಮೈಲುಗಳಷ್ಟು ದೂರದಲ್ಲಿ ಬಿಳಿ ತಿಮಿಂಗಿಲ ಕಾಣಿಸಿಕೊಂಡಿದೆ.
ಬಿಬಿಸಿ(BBC)ಯ ಪ್ರಕಾರ, 2015 ರಲ್ಲಿ ಮೊದಲ ಜೀವಂತ ಒಮುರಾ ತಿಮಿಂಗಿಲ (ಬಿಳಿ ತಿಮಿಂಗಿಲ)ವನ್ನು ನೋಡಲಾಯಿತು, ಇದು ಥೈಲ್ಯಾಂಡ್‌ನ ಅಲ್ಬಿನೋ ತಳಿಯ ಬಿಳಿ ತಿಮಿಂಗಿಲ  ಆಗಿರಬಹುದು ಎಂದು ಹೇಳಲಾಯಿತು.

ಒಮುರಾ ತಿಮಿಂಗಿಲಗಳು ಅಥವಾ ಬಿಳಿ ತಿಮಿಂಗಿಲಗಳು, ಪ್ರಾಥಮಿಕವಾಗಿ ಆಗ್ನೇಯ ಏಷ್ಯಾದ ಸಮುದ್ರಗಳು ಮತ್ತು ಜಪಾನಿನ ದಕ್ಷಿಣದ ಸಮುದ್ರದ ನೀರಿನಲ್ಲಿ ವಾಸಿಸುವ ಅಪರೂಪದ ಪ್ರಭೇದವೆಂದು ವರ್ಗೀಕರಿಸಲಾಗಿದೆ, ಸಾಂದರ್ಭಿಕವಾಗಿ ಅಂಡಮಾನ್ ಸಮುದ್ರ ಮತ್ತು ಥೈಲ್ಯಾಂಡ್ ಕೊಲ್ಲಿಯಲ್ಲಿ ಕಂಡುಬರುತ್ತದೆ.
ಸಮುದ್ರ ಮತ್ತು ಕರಾವಳಿ ಸಂಪನ್ಮೂಲಗಳ ಇಲಾಖೆಯ ಹೊಸದಾಗಿ ನೇಮಕಗೊಂಡ ಮುಖ್ಯಸ್ಥ ಪಿನ್ಸಾಕ್ ಅವರು, ಇಲಾಖೆಯ ಪ್ರಾಣಿ ತಜ್ಞರ ತಂಡವು ಅಲ್ಬಿನೋ ಒಮುರಾ ತಿಮಿಂಗಿಲವನ್ನು ಗುರುತಿಸಿದ ಪ್ರದೇಶವನ್ನು ಶೋಧಿಸಿದೆ. ಆದರೆ ಅದು ಇನ್ನೂ ಪತ್ತೆಯಾಗಿಲ್ಲ ಎಂದು ಬ್ಯಾಂಕಾಕ್ ಪೋಸ್ಟ್ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

ಕ್ಯಾಸೆಟ್ಸಾರ್ಟ್ ವಿಶ್ವವಿದ್ಯಾನಿಲಯದ ಸಾಗರ ವಿಜ್ಞಾನ ವಿಭಾಗದ ಪ್ರೊಫೆಸರ್ ಥಾನ್ ಥಮ್ರೋಂಗ್ನವಾಸಾವತ್ ಅವರು ಫೇಸ್‌ಬುಕ್‌ನಲ್ಲಿ ಈ ದೃಶ್ಯವನ್ನು ಉಲ್ಲೇಖಿಸಿದ್ದಾರೆ, ನಂಬಲಾಗದಷ್ಟು ಅಪರೂಪದ ಬಿಳಿ ಒಮುರಾ ತಿಮಿಂಗಿಲವನ್ನು ನೋಡುವ ಸಾಧ್ಯತೆಗಳು ಒಂದು ಕೋಟಿಯಲ್ಲಿ 1 ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಎಂದು ಹೇಳಿದ್ದಾರೆ.
ಅಧಿಕಾರಿಗಳು ಈಗ ಈ ಬಿಳಿ ತಿಮಿಂಗಿಲಕ್ಕಾಗಿ ಹುಡುಕಾಟವನ್ನು ಹೆಚ್ಚಿಸುತ್ತಿದ್ದಾರೆ ಮತ್ತು ಪ್ರದೇಶವನ್ನು ಸಮೀಕ್ಷೆ ಮಾಡಲು ಡ್ರೋನ್‌ನೊಂದಿಗೆ ಕಣ್ಗಾವಲು ನೌಕೆಯನ್ನು ನಿಯೋಜಿಸಲಾಗಿದೆ. ಒಮುರಾ ತಿಮಿಂಗಿಲಗಳು ವನ್ಯ ಪ್ರಾಣಿಗಳ ಸಂರಕ್ಷಣೆ ಮತ್ತು ಸಂರಕ್ಷಣಾ ಕಾಯಿದೆ BE 2562 (2019) ಅಡಿಯಲ್ಲಿ ಸಂರಕ್ಷಿತ ಪ್ರಾಣಿಗಳ ಪಟ್ಟಿಯಲ್ಲಿವೆ, ಏಕೆಂದರೆ ಸಂಖ್ಯೆಗಳು ಕಡಿಮೆಯಾಗುತ್ತಿವೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement