ಅರವಿಂದ್ ಕೇಜ್ರಿವಾಲರನ್ನು ‘ಆರ್‌ಎಸ್‌ಎಸ್ ಕಾ ಚೋಟಾ ರೀಚಾರ್ಜ್’ ಎಂದು ಕರೆದ ಓವೈಸಿ, ತಿರುಗೇಟು ನೀಡಿದ ಎಎಪಿ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಂಘ ಪರಿವಾರದ ರಾಜಕೀಯವನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು “ಆರ್‌ಎಸ್‌ಎಸ್ ಕಾ ಚೋಟಾ ರೀಚಾರ್ಜ್” ಎಂದು ಕರೆದ ನಂತರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರ ನಡುವೆ ವಾಕ್ಸಮರ ಆರಂಭವಾಗಿದೆ.
ದೆಹಲಿಯಲ್ಲಿ ಸುಂದರಕಾಂಡ ಪಠಣ ಕಾರ್ಯಕ್ರಮವನ್ನು ಆಯೋಜಿಸಲು ಆಮ್‌ ಆದ್ಮಿ ಪಕ್ಷವು ನಿರ್ಧರಿಸಿದ ನಂತರ ಓವೈಸಿ ಈ ಹೇಳಿಕೆ ಬಂದಿದೆ. “ಆರೆಸ್ಸೆಸ್‌ನ ಛೋಟಾ ರೀಚಾರ್ಜ್ ದೆಹಲಿಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ತಿಂಗಳ ಮೊದಲ ಮಂಗಳವಾರದಂದು ಸುಂದರಕಾಂಡ ಪಠಣ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದೆ. ಜನವರಿ 22 ರಂದು [ರಾಮ ಮಂದಿರ] ಉದ್ಘಾಟನೆಯಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ಆರೋಪಿಸಿ ಹೈದರಾಬಾದ್ ಸಂಸದ ಒವೈಸಿ ಟ್ವೀಟ್ ಮಾಡಿದ್ದಾರೆ.

ಬಿಲ್ಕಿಸ್ ಬಾನೋ ವಿಚಾರದಲ್ಲಿ ಮೌನ ವಹಿಸಿದ್ದ ಈ ಜನರು ಶಿಕ್ಷಣ ಮತ್ತು ಆರೋಗ್ಯದಂತಹ ವಿಷಯಗಳ ಬಗ್ಗೆ ಮಾತ್ರ ಮಾತನಾಡಲು ಬಯಸಿದ್ದಾಗಿ ಹೇಳಿದ್ದರು ಎಂಬುದನ್ನು ನೆನಪಿಸುತ್ತೇನೆ ಎಂದು ಓವೈಸಿ ಹೇಳಿದ್ದಾರೆ. ಸುಂದರಕಾಂಡ ಪಾಠ ಶಿಕ್ಷಣವೇ ಅಥವಾ ಆರೋಗ್ಯವೇ? ನಿಜವಾದ ವಿಷಯವೆಂದರೆ ಅವರು ನ್ಯಾಯಕ್ಕೆ ಹೆದರುತ್ತಾರೆ. ಸಂಘದ ಅಜೆಂಡಾಕ್ಕೆ ಸಂಪೂರ್ಣ ಬೆಂಬಲ ನೀಡುತ್ತಾರೆ. ಬಾಬರಿ ಬಗ್ಗೆ ಮಾತನಾಡುವುದು ಬೇಡ, ನೀವು ನ್ಯಾಯದ -ಪ್ರೀತಿ ಹೀಗೆ ಹಲವು ಕೊಳಲನ್ನು ನುಡಿಸುತ್ತಿದ್ದೀರಿ. ಮತ್ತು ಅದೇ ಸಮಯದಲ್ಲಿ ಹಿಂದುತ್ವವನ್ನು ಬಲಪಡಿಸುತ್ತಿದ್ದೀರಿ ಎಂದು ಅವರು ಟ್ವೀಟ್‌ ಮಾಡಿದ್ದಾರೆ.
ನಂತರ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ ಅವರು, “ಸ್ಪರ್ಧಾತ್ಮಕ ಹಿಂದುತ್ವದ ರಾಜಕೀಯವನ್ನು ಅಳವಡಿಸಿಕೊಳ್ಳಲಾಗುತ್ತಿದೆ” ಎಂದು ಹೇಳಿದ್ದಾರೆ ಮತ್ತು ಆರ್‌ಎಸ್‌ಎಸ್, ಬಿಜೆಪಿ ಮತ್ತು ಎಎಪಿ ನಡುವಿನ ವ್ಯತ್ಯಾಸವೇನು ಎಂದು ಪ್ರಶ್ನಿಸಿದ್ದಾರೆ.

ಪ್ರಮುಖ ಸುದ್ದಿ :-   ತಾಯಿ, ಹೆಂಡತಿ, ಮೂವರು ಮಕ್ಕಳನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ...

ಇದಕ್ಕೆ ಪ್ರತಿಕ್ರಿಯಿಸಿದ ಎಎಪಿ ಸಂಸದ ರಾಘವ್ ಚಡ್ಡಾ, ದೆಹಲಿ ಮುಖ್ಯಮಂತ್ರಿಗೆ ಯಾವುದೇ ನಾಯಕರಿಂದ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಓವೈಸಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
“ಯಾವುದೇ ನಾಯಕರಿಂದ ಪ್ರಮಾಣಪತ್ರದ ಅಗತ್ಯವಿಲ್ಲ. ಅರವಿಂದ ಕೇಜ್ರಿವಾಲ್ ಅವರು ಪ್ರಭು ಶ್ರೀರಾಮನ ಪರಮ ಭಕ್ತರಾಗಿದ್ದಾರೆ. ಅವರು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಅವರು ಯಾವಾಗಲೂ ಶ್ರೀರಾಮ ಮತ್ತು ಭಜರಂಗಬಲಿಯವರ ಆಶೀರ್ವಾದವನ್ನು ತೆಗೆದುಕೊಳ್ಳುತ್ತಾರೆ. ಅವರು ತೀರ್ಥಯಾತ್ರೆಯನ್ನು ನಡೆಸುತ್ತಿದ್ದಾರೆ ಎಂದು ಎಎಪಿ ನಾಯಕ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಇಂಡಿಯಾ ಮೈತ್ರಿಕೂಟ ಅಧಿಕಾರ ಬಂದ್ರೆ ಅಯೋಧ್ಯೆ ರಾಮಮಂದಿರ ಶುದ್ಧೀಕರಿಸ್ತೇವೆ : ವಿವಾದ ಸೃಷ್ಟಿಸಿದ ಕಾಂಗ್ರೆಸ್‌ ನಾಯಕನ ಹೇಳಿಕೆ

ಎಎಪಿ ಸಚಿವರು ಓವೈಸಿಯವರ ಹೇಳಿಕೆಯನ್ನು ಟೀಕಿಸಿದರು, ಇದು “ಸಂಪೂರ್ಣವಾಗಿ ತಪ್ಪು” ಹೇಳಿಕೆ ಎಂದು ಕರೆದರು. ನಾಯಕರು ಯಾವುದಾದರೊಂದು ಧರ್ಮದಿಂದ ಬಂದವರು ಮತ್ತು ಅವರು [ಕೇಜ್ರಿವಾಲ್] ಅವರ ಧರ್ಮವನ್ನು ನಂಬುತ್ತಾರೆ, ಇದರಲ್ಲಿ ತೊಂದರೆ ಏನಿದೆ. ಪ್ರತಿಯೊಬ್ಬರೂ ಇದನ್ನು ಮಾಡಬಹುದು ಎಂದು ಅವರು ಹೇಳಿದರು.
ಕೇಜ್ರಿವಾಲ್ ಮತ್ತು ಅವರ ಪತ್ನಿ ರೋಹಿಣಿಯಲ್ಲಿ ನಡೆಯುವ ಸುಂದರಕಾಂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರು ಹೇಳಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement