9 ವರ್ಷಗಳಲ್ಲಿ ಭಾರತದಲ್ಲಿ ಸುಮಾರು 25 ಕೋಟಿ ಜನರು ಬಡತನದಿಂದ ಮುಕ್ತ: ನೀತಿ ಆಯೋಗ

ನವದೆಹಲಿ: ಕಳೆದ 9 ವರ್ಷಗಳಲ್ಲಿ ಬಾರತದಲ್ಲಿ ಸುಮಾರು 25 ಕೋಟಿ ಜನ ಬಡತನದಿಂದ ಮುಕ್ತರಾಗಿದ್ದಾರೆ ಎಂದು ನೀತಿ (NITI) ಆಯೋಗ ಹೇಳಿದೆ.
ನೀತಿ ಆಯೋಗದ ವರದಿಯ ಪ್ರಕಾರ, 2013-14ರಲ್ಲಿ ದೇಶದಲ್ಲಿ ಬಹು ಆಯಾಮದ ಬಡತನವು ಶೇಕಡಾ 29.17 ರಷ್ಟಿತ್ತು, ಇದು 2022-23 ರಲ್ಲಿ ಶೇಕಡಾ 11.28 ಕ್ಕೆ ಇಳಿದಿದೆ. 2013-14ರಿಂದ 2022-23ರವರೆಗಿನ 9 ವರ್ಷಗಳ ಅವಧಿಯಲ್ಲಿ 24.82 ಕೋಟಿ ಜನರು ಬಹುಆಯಾಮದ ಬಡತನದಿಂದ ಹೊರಬಂದಿದ್ದಾರೆ. ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಹೆಚ್ಚಿನ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ನೀತಿ ಆಯೋಗ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಡತನಾದಿಂದ ಹೊರಬಂದ ರಾಜ್ಯಗಳ ಜನಸಂಖ್ಯಾವಾರು ಉತ್ತರ ಪ್ರದೇಶ ಪ್ರಥಮ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ 5.94 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಬಿಹಾರ (3.77 ಕೋಟಿ) ದ್ವಿತೀಯ ಸ್ಥಾನ ಮತ್ತು ಮೂರನೇ ಸ್ಥಾನದಲ್ಲಿ ಮಧ್ಯಪ್ರದೇಶ (2.30 ಕೋಟಿ) ಇದ್ದು, ನಾಲ್ಕನೇ ಸ್ಥಾನದಲ್ಲಿ ರಾಜಸ್ಥಾನ (1.87 ಕೋಟಿ) ಇದೆ.
ಈ ಬಗ್ಗೆ ಮಾಹಿತಿ ನೀಡಿದ ನೀತಿ ಆಯೋಗದ ಸದಸ್ಯ ರಮೇಶಚಂದ್ ಅವರು, ” ವಾರ್ಷಿಕವಾಗಿ ಸರಾಸರಿ 2.75 ಕೋಟಿ ಜನರಂತೆ 9 ವರ್ಷಗಳಲ್ಲಿ 24.82 ಜನರು ಬಹುಆಯಾಮಗಳ ಬಡತನದಿಂದ ಹೊರಬಂದಿದ್ದಾರೆ. ಸರ್ಕಾರವು ಬಹುಆಯಾಮಗಳ ಬಡತನವನ್ನು ಶೇ.1ಕ್ಕಿಂತ ಕೆಳತರುವ ಗುರಿ ಹೊಂದಿದೆ. ಅದಕ್ಕಾಗಿ ಸರ್ವ ಪ್ರಯತ್ನಗಳನ್ನೂ ಕೈಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಇಂಡಿಯಾ ಮೈತ್ರಿಕೂಟ ಅಧಿಕಾರ ಬಂದ್ರೆ ಅಯೋಧ್ಯೆ ರಾಮಮಂದಿರ ಶುದ್ಧೀಕರಿಸ್ತೇವೆ : ವಿವಾದ ಸೃಷ್ಟಿಸಿದ ಕಾಂಗ್ರೆಸ್‌ ನಾಯಕನ ಹೇಳಿಕೆ

ಬಹು ಆಯಾಮದ ಬಡತನ…
ರಾಷ್ಟ್ರೀಯ ಬಹು ಆಯಾಮದ ಬಡತನವು ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟದಲ್ಲಿನ ಕೊರತೆಯ ಸ್ಥಿತಿಯನ್ನು ಅಳೆಯುತ್ತದೆ ಎಂದು ಆಯೋಗವು ಹೇಳಿದೆ. ನೀತಿ ಆಯೋಗದ ವರದಿ ಪ್ರಕಾರ, ದೇಶದಲ್ಲಿ ಬಹುಆಯಾಮದ ಬಡತನವು 2013-14ರಲ್ಲಿ ಶೇಕಡಾ 29.17ರಿಂದ 2022-23ರಲ್ಲಿ ಶೇ.11.28ಕ್ಕೆ ಇಳಿದಿದೆ. ಬಹುಆಯಾಮದ ಬಡತನವು 12 ಸುಸ್ಥಿರ ಅಭಿವೃದ್ಧಿ ಗುರಿಗಳು ಒಳಗೊಂಡಿರುವ ಸೂಚಕಗಳನ್ನು ಪ್ರತಿನಿಧಿಸುತ್ತವೆ. ಪೌಷ್ಟಿಕತೆ, ಮಕ್ಕಳು ಮತ್ತು ಹದಿಹರೆಯದವರ ಮರಣ, ತಾಯಿಯ ಆರೋಗ್ಯ, ಶಾಲಾ ಶಿಕ್ಷಣ, ಶಾಲಾ ಹಾಜರಾತಿ, ಅಡುಗೆ ಇಂಧನ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್, ವಸತಿ, ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳು ಇವುಗಳಲ್ಲಿ ಸೇರಿವೆ.

ಭಾರತದ ಪರಿಸ್ಥಿತಿ ಇತರ ದೇಶಗಳಿಗಿಂತ ಉತ್ತಮವಾಗಿದೆ ಎಂದು ಹೇಳಲಾಗಿದೆ, ಇನ್ನೂ 229 ವರ್ಷಗಳ ಕಾಲ ಬಡತನ ಮುಂದುವರಿಯಲಿದೆ ಎಂದು ಆಕ್ಸ್‌ಫ್ಯಾಮ್ ವರದಿ ತನ್ನ ರಿಪೋರ್ಟ್‌ನಲ್ಲಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ನೀತಿ (NITI) ಆಯೋಗದ ಈ ವರದಿ ಬಂದಿದೆ.
ಆಕ್ಸ್‌ಫ್ಯಾಮ್ ವರದಿಯ ಪ್ರಕಾರ, ವಿಶ್ವದ 5 ಶ್ರೀಮಂತರ ಸಂಪತ್ತು 2020 ರಿಂದ 869 ಶತಕೋಟಿ ಡಾಲರ್‌ಗಳಿಗೆ ದ್ವಿಗುಣಗೊಂಡಿದೆ, ಆದರೆ ಇದೇ ಅವಧಿಯಲ್ಲಿ ವಿಶ್ವದಾದ್ಯಂತ 5 ಶತಕೋಟಿ ಜನರು ಬಡವರಾಗಿದ್ದಾರೆ ಎಂದು ಹೇಳಿದೆ. ಶ್ರೀಮಂತರು ಮತ್ತು ಬಡವರ ನಡುವಿನ ಈ ಆರ್ಥಿಕ ಅಸಮಾನತೆಯು ಮುಂದುವರಿದರೆ, ಮುಂದಿನ 229 ವರ್ಷಗಳವರೆಗೆ ಬಡತನವು ನಿರ್ಮೂಲನೆಯಾಗುವುದಿಲ್ಲ ಎಂದು ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಸೋಮವಾರಪೇಟೆ : ವಿದ್ಯಾರ್ಥಿನಿ ತಲೆ ಕಡಿದು ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಅರೆಸ್ಟ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement