ವೀಡಿಯೊ…| ರೈಲು ಪ್ರಯಾಣಿಕನಿಗೆ ಮನಸೋ ಇಚ್ಛೆ ಥಳಿಸಿದ ಟಿಟಿಇ : ವೀಡಿಯೊ ವೈರಲ್ ಆದ ನಂತ್ರ ಅಮಾನತು

ಬರೌನಿ-ಲಕ್ನೋ ಎಕ್ಸ್‌ಪ್ರೆಸ್‌ನಲ್ಲಿ ಟಿಕೆಟ್ ಇಲ್ಲದ ಪ್ರಯಾಣಿಕರೊಬ್ಬರನ್ನು ನಿಂದಿಸಿದ ಮತ್ತು ನಂತರ ಪ್ರಯಾಣಕನಿಗೆ ಅನೇಕ ಸಲ ಹೊಡೆದ ನಂತರ ಭಾರತೀಯ ರೈಲ್ವೇ ಗುರುವಾರ ಪ್ರಯಾಣ ಟಿಕೆಟ್ ಪರೀಕ್ಷಕರನ್ನು (ಟಿಟಿಇ) ಅಮಾನತುಗೊಳಿಸಿದೆ. ಟಿಟಿಇ ಪ್ರಯಾಣಿಕನಿಗೆ ಹೊಡೆದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊ ಕಾಣಿಸಿಕೊಂಡ ನಂತರ, ಟಿಟಿಇಯನ್ನು ಅಮಾನತುಗೊಳಿಸಲಾಯಿತು ಮತ್ತು ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ.
ವೀಡಿಯೊದಲ್ಲಿ, ಆರೋಪಿ ಟಿಟಿಇಯು ಬರೌನಿ-ಲಕ್ನೋ ಎಕ್ಸ್‌ಪ್ರೆಸ್‌ನಲ್ಲಿ (15203) ಪ್ರಯಾಣಿಕನಿಗೆ ಪದೇ ಪದೇ ಹೊಡೆಯುತ್ತಿರುವುದನ್ನು ಕಾಣಬಹುದು. ವೀಡಿಯೊದಲ್ಲಿ, ಪ್ರಯಾಣಿಕ ಆರೋಪಿ ಟಿಟಿಇಗೆ ಹೊಡೆಯಲು ಕಾರಣವೇನು ಎಂದು ಕೇಳುತ್ತಿರುವುದನ್ನು ಸಹ ಕಾಣಬಹುದು.

“ಬರೌನಿ-ಲಕ್ನೋ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡುತ್ತಿರುವ ಟಿಟಿಇಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ನಂತರ ಘಟನೆಗೆ ಸಂಬಂಧಿಸಿ ಟಿಟಿಇಯನ್ನು ಸಕ್ಷಮ ಪ್ರಾಧಿಕಾರದಿಂದ ಅಮಾನತುಗೊಳಿಸಲಾಗಿದೆ ಮತ್ತು ಮತ್ತೆ ಆತನ ವಿರುದ್ಧ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ” ಎಂದು ಭಾರತೀಯ ರೈಲ್ವೆ ಹೇಳಿದೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಬೆಂಗಳೂರಿನ ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ರೈಲ್ವೆ ಟಿಕೆಟ್ ಪರೀಕ್ಷಕನನ್ನು ಬಂಧಿಸಲಾಗಿತ್ತು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ ಅವರು, ಇಂತಹ ದುರ್ನಡತೆಯನ್ನು ಸಹಿಸುವುದಿಲ್ಲ, ಟಿಟಿಇಯನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಮುಂಬೈ 26/11 ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ವಾದಿಸಿದ್ದ ಉಜ್ವಲ್ ನಿಕಮ್ ಕಣಕ್ಕಿಳಿಸಿದ ಬಿಜೆಪಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement