ಮುಖ ಸಂಪೂರ್ಣವಾಗಿ ಕಂಡ ರಾಮಲಲ್ಲಾ ವಿಗ್ರಹದ ಫೋಟೋ ನಿಜವಾದುದಲ್ಲ : ರಾಮ ಮಂದಿರದ ಮುಖ್ಯ ಅರ್ಚಕರ ಸ್ಪಷ್ಟನೆ

ನವದೆಹಲಿ: ಶುಕ್ರವಾರ ವೈರಲ್‌ ಆಗಿರುವ ರಾಮಮಂದಿರ ಗರ್ಭಗುಡಿಯಲ್ಲಿನ ರಾಮಲಲ್ಲಾ ವಿಗ್ರಹದ ಫೋಟೋ ನಿಜವಾದುದಲ್ಲ. ಅಯೋಧ್ಯೆ ರಾಮ ಮಂದಿರದ ರಾಮಲಲ್ಲಾ ವಿಗ್ರಹದ ಚಿತ್ರಗಳು ಹೇಗೆ ಸೋರಿಕೆಯಾದವು ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಒತ್ತಾಯಿಸಿದ್ದಾರೆ.
ಗುರುವಾರ ಬಹಿರಂಗಗೊಂಡಿದ್ದ ಚಿತ್ರದಲ್ಲಿ ವಿಗ್ರಹದ ಕಣ್ಣುಗಳಿಗೆ ಹಳದಿ ಬಟ್ಟೆ ಕಟ್ಟಲಾಗಿತ್ತು. ಆದರೆ ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದ ಚಿತ್ರದಲ್ಲಿ ವಿಗ್ರಹ ಸಂಪೂರ್ಣ ಕಾಣುತ್ತಿತ್ತು. ಕಣ್ಣುಗಳಿಗೆ ಬಟ್ಟೆ ಕಟ್ಟಿರರಲಿಲ್ಲ. ‘ಕಣ್ಣು ಒಳಗೊಂಡಂತೆ ಮುಖ ಸಂಪೂರ್ಣವಾಗಿ ಕಾಣುವ ಚಿತ್ರ ವಿಗ್ರಹದ ನೈಜ ಚಿತ್ರ ಅಲ್ಲ’ ಎಂದು ದಾಸ್ ಸ್ಪಷ್ಟಪಡಿಸಿದ್ದಾರೆ.

ಪ್ರಾಣ ಪ್ರತಿಷ್ಠಾ ಪೂರ್ಣಗೊಳ್ಳುವ ಮೊದಲು ಭಗವಾನ್ ರಾಮನ ವಿಗ್ರಹದ ಕಣ್ಣುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಭಗವಾನ್ ರಾಮನ ಕಣ್ಣುಗಳನ್ನು ತೋರಿಸಿದ ವಿಗ್ರಹವು ನಿಜವಾದ ವಿಗ್ರಹವಲ್ಲ. ಇದನ್ನು ಯಾರು ಬಹಿರಂಗಪಡಿಸಿದರು ಮತ್ತು ವಿಗ್ರಹದ ಚಿತ್ರಗಳು ಹೇಗೆ ವೈರಲ್ ಆಗುತ್ತಿವೆ ಎಂಬುದರ ಬಗ್ಗೆ ತನಿಖೆ ನಡೆಸಬೇಕು” ಎಂದು ದಾಸ್ ಒತ್ತಾಯಿಸಿದ್ದಾರೆ.
ಒಂದು ಚಿತ್ರದಲ್ಲಿ, ಕಪ್ಪು ಕಲ್ಲಿನಲ್ಲಿ ಕೆತ್ತಲಾದ ವಿಗ್ರಹದ ಕಣ್ಣುಗಳನ್ನು ಮುಚ್ಚಲಾಗಿದೆ. ಇನ್ನೊಂದರಲ್ಲಿ, ಅದರ ಮುಖವನ್ನು ಬಹಿರಂಗಪಡಿಸಲಾಗಿದೆ. ವಿಗ್ರಹವನ್ನು ದೇವಾಲಯದ ಒಳಗೆ ಇರಿಸುವ ಕೆಲವು ದಿನಗಳ ಮೊದಲು ಈ ಚಿತ್ರಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಈಗ ಪ್ರಸಾರವಾಗುತ್ತಿದೆ ಎಂದು ವಿಎಚ್‌ಪಿ ವಕ್ತಾರರು ಹೇಳಿದ್ದಾರೆ. ಸಂಪೂರ್ಣ ವಿಗ್ರಹದ ಮೊದಲ ಚಿತ್ರಗಳು ಜನವರಿ 22 ರಂದು ಮಾತ್ರ ಲಭ್ಯವಾಗುವ ನಿರೀಕ್ಷೆಯಿದೆ” ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವೀಡಿಯೊ ಪ್ರಕರಣ : ತನಿಖೆಗೆ ಎಡಿಜಿಪಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ಎಸ್ಐಟಿ ರಚನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement