ಅಯೋಧ್ಯೆಯ ರಾಮ ಮಂದಿರಕ್ಕೆ ಪಾಕ್‌ ಆಕ್ರಮಿತ ಕಾಶ್ಮೀರದಿಂದ ನೀರು ಕಳುಹಿಸಿದ ಮುಸ್ಲಿಂ ವ್ಯಕ್ತಿ…!

ನವದೆಹಲಿ: ಜನವರಿ 22 ರಂದು ಅಯೋಧ್ಯೆ ರಾಮ ಮಂದಿರದಲ್ಲಿ ಭಗವಾನ್‌ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬಳಸಲು ಮುಸ್ಲಿಂ ವ್ಯಕ್ತಿಯೊಬ್ಬರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಶಾರದಾ ಪೀಠದ ಕುಂಡದಿಂದ ಪವಿತ್ರ ನೀರನ್ನು ಸಂಗ್ರಹಿಸಿ ಬ್ರಿಟನ್ ಮೂಲಕ ಭಾರತಕ್ಕೆ ಕಳುಹಿಸಿದ್ದಾರೆ…!
2019ರ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರದಲ್ಲಿ ಬಾಲಾಕೋಟ್ ವೈಮಾನಿಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಅಂಚೆ ಸೇವೆಗಳನ್ನು ಸ್ಥಗಿತಗೊಳಿಸಿದ್ದರಿಂದ ಈ ಪವಿತ್ರ ನೀರನ್ನು ಬ್ರಿಟನ್ ಮೂಲಕ ಭಾರತಕ್ಕೆ ಕಳುಹಿಸಲಾಗಿದೆ ಎಂದು ಸೇವ್ ಶಾರದಾ ಸಮಿತಿ ಕಾಶ್ಮೀರ(SSCK) ಸಂಸ್ಥಾಪಕ ರವೀಂದರ್ ಪಂಡಿತ ಹೇಳಿದ್ದಾರೆ.

“ಶಾರದಾ ಪೀಠದ ಪಿಒಕೆಯಲ್ಲಿರುವ ಶಾರದಾ ಕುಂಡದ ಪವಿತ್ರ ನೀರನ್ನು ತನ್ವೀರ್ ಅಹ್ಮದ್ ಮತ್ತು ಅವರ ತಂಡ ಸಂಗ್ರಹಿಸಿದ್ದು, ಅದನ್ನು ಎಲ್ಒಸಿ(ಗಡಿ ನಿಯಂತ್ರಣ ರೇಖೆ)ಯಿಂದ ಆಚೆ ನಮ್ಮ ನಾಗರಿಕ ಸಮಾಜದ ಸದಸ್ಯರು ಇಸ್ಲಾಮಾಬಾದ್‌ಗೆ ಕೊಂಡೊಯ್ದರು. ಅಲ್ಲಿಂದ ಬ್ರಿಟನ್ ನಲ್ಲಿರುವ ಅವರ ಮಗಳು ಮಗ್ರಿಬಿಗೆ ಕಳುಹಿಸಲಾಯಿತು. ಮಗ್ರಿಬಿ 2023ರ ಆಗಸ್ಟ್‌ನಲ್ಲಿ ಬ್ರಿಟನ್ ನಿಂದ ಅಹಮದ್‌ಬಾದ್‌ಗೆ ಆಗಮಿಸಿದ ಕಾಶ್ಮೀರಿ ಪಂಡಿತ ಕಾರ್ಯಕರ್ತೆ ಸೋನಾಲ್ ಶೇರ್‌ಗೆ ಅದನ್ನು ಹಸ್ತಾಂತರಿಸಿದ್ದರು. ಅವರು ದೆಹಲಿಯಲ್ಲಿ ನನಗೆ ನೀರನ್ನು ತಲುಪಿಸಿದರು” ಎಂದು ರವೀಂದರ್ ಪಂಡಿತ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಮುಂಬೈ 26/11 ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ವಾದಿಸಿದ್ದ ಉಜ್ವಲ್ ನಿಕಮ್ ಕಣಕ್ಕಿಳಿಸಿದ ಬಿಜೆಪಿ

ನಂತರ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮುಖಂಡರು ಎಸ್‌ಎಸ್‌ಸಿಕೆ ಸದಸ್ಯ ಮಂಜುನಾಥ ಶರ್ಮಾ ಅವರಿಂದ ಪವಿತ್ರ ಜಲವನ್ನು ಸ್ವೀಕರಿಸಿದರು. ಶನಿವಾರ ಅಯೋಧ್ಯೆಯಲ್ಲಿ ಹಿರಿಯ ಅಧಿಕಾರಿ ಕೋಟೇಶ್ವರ ರಾವ್ ಅವರಿಗೆ ನೀರನ್ನು ಅರ್ಪಿಸಲಾಯಿತು.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement