ಕುಮಟಾ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಸಂಭ್ರಮ, ಕಡ್ಲೆ ಕಡಲತೀರದ ಮರಳಿನಲ್ಲಿ ಮೂಡಿದ ಶ್ರೀರಾಮ…

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅರಬ್ಬಿ ಸಮುದ್ರದ ಕಡ್ಲೆಯ ತೀರದ ಮರಳಿನಲ್ಲಿ ವಿನಾಯಕ ಆಚಾರಿ ಎಂಬವರು ಶ್ರೀರಾಮನನ್ನು ಅರಳಿಸಿದ್ದಾರೆ.
ಅಯೋಧ್ಯೆಯಲ್ಲಿ ಜನವರಿ 22ರಂದು ಸೋಮವಾರ ಬಾಲರಾಮನ ಮೂರ್ತಿಯ ಪ್ರತಿಷ್ಠಾಪನೆ ನಿಮಿತ್ತ ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ.
ಕಡ್ಲೆಯ ಜಟ್ಟಿ ಆಚಾರಿ ಕುಟುಂಬದ ವಿನಾಯಕ ಆಚಾರಿ ಸಮುದ್ರ ತೀರಕ್ಕೆ ಬಂದಾಗ ಮುಸ್ಸಂಜೆ ಹೊತ್ತಲ್ಲಿ ತನಗೆ ರಾಮನ ಪ್ರೇರಣೆ ಯಂತೆ ಭಾಸವಾಗಿ ಮರಳಿನಲ್ಲಿ ಶ್ರೀ ರಾಮನ ರಚನೆ ಮಾಡಲು ಮನಸ್ಸಾಯಿತು ಎನ್ನುತ್ತಾರೆ.

ದೇಶದಲ್ಲಿ ಶ್ರೀ ರಾಮನ ಪುನರ ಪ್ರತಿಷ್ಠಾಪನೆ ನಡೆಸುತ್ತಿರುವ ಈ ಸಂದರ್ಭದಲ್ಲಿ ನಾವು ಬದುಕಿದ್ದು ನಮ್ಮ ಹಿರಿಯರ ಪುಣ್ಯವೇ ಆಗಿದೆ. 500 ವರ್ಷ ದಿಂದ ಆಗದ ಪುಣ್ಯ ಕ್ಷಣ ಈಗ ಕೂಡಿಬಂದಿದೆ ಎಂದು ಹೇಳುತ್ತಾರೆ.
ಕಡ್ಲೆ, ಹೊಲನ ಗದ್ದೆ ಅರಬ್ಬಿ ಸಮುದ್ರ ತೀರದಲ್ಲಿ ಇರುವ ಮೀನುಗಾರಿಕಾ ದೋಣಿಗಳಿಗೆಲ್ಲ ಮೀನುಗಾರರು ಶ್ರೀ ರಾಮನ ಧ್ವಜ ಹಾಕಿ ಸಂಭ್ರಮ ಪಡುತ್ತಿದ್ದಾರೆ.

ಬಾಲ ರಾಮನ ಮೂರ್ತಿಯ ಪ್ರತಿಷ್ಠಾಪನೆ ನಮ್ಮಲ್ಲಿ ಹೊಸ ಚೈತನ್ಯ ಮೂಡಿಸಿದೆ ಎಂದು ಮೀನುಗಾರರಾದ ಪುರುಷೋತ್ತಮ ಅಂಬಿಗ, ವಿನಾಯಕ ಅಂಬಿಗ. ವೆಂಕಟೇಶ ಹರಿಕಂತ್ರ ಮೊದಲದವರು ಸಂತಸ ಪಡುತ್ತಿದ್ದಾರೆ

ಪ್ರಮುಖ ಸುದ್ದಿ :-   41.8 ಡಿಗ್ರಿ ತಲುಪಿದ ಬೆಂಗಳೂರು ತಾಪಮಾನ ; ರಾಜ್ಯದ ಈ ಜಿಲ್ಲೆಗಳಲ್ಲಿ ನಾಲ್ಕೈದು ದಿನ ಬಿಸಿಗಾಳಿ ಮುನ್ನೆಚ್ಚರಿಕೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement