ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಜೊತೆ ವಿಚ್ಛೇದನದ ವದಂತಿಗಳ ನಡುವೆಯೇ ಪಾಕಿಸ್ತಾನಿ ನಟಿಯನ್ನು ವಿವಾಹವಾದ ಶೋಯೆಬ್ ಮಲಿಕ್..!

ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಜೊತೆ ವಿಚ್ಛೇದನದ ವದಂತಿಗಳ ಮಧ್ಯೆಯೇ ಪಾಕಿಸ್ತಾನದ ಕ್ರಿಕೆಟ್ ತಾರೆ ಶೋಯೆಬ್ ಮಲಿಕ್ ಜನಪ್ರಿಯ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ.
ಶನಿವಾರ, ಜನವರಿ 20 ರಂದು ನಡೆದ ತಮ್ಮ ವಿವಾಹ ಸಮಾರಂಭದ ಫೋಟೋಗಳನ್ನು ಶೋಯೆಬ್ ಮಲಿಕ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಶೋಯೆಬ್ ಮಲಿಕ್ ಮತ್ತು ಸನಾ ಜಾವೇದ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿತ್ತು. ಈಗ ಸನಾ ಜಾವೇದ್ ಅವರ ಮದುವೆ ಸಮಾರಂಭದ ಫೋಟೋಗಳನ್ನು ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಶೋಯೆಬ್ ಮಲಿಕ್ 2010 ರಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗುವ ಮೊದಲು ಆಯೇಶಾ ಸಿದ್ದಿಕಿಗೆ ವಿಚ್ಛೇದನ ನೀಡಿದ್ದರು.
ಗಮನಾರ್ಹವಾಗಿ, ಸನಾ ಜಾವೇದ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯ ಬಯೋದಲ್ಲಿ ತನ್ನ ಹೆಸರನ್ನು ಸಹ ಬದಲಾಯಿಸಿಕೊಂಡಿದ್ದಾರೆ, ಅದನ್ನು ಸನಾ ಶೋಯೆಬ್ ಮಲಿಕ್ ಎಂದು ಬದಲಾಯಿಸಿಕೊಂಡಿದ್ದಾರೆ. ಸನಾ ಜಾವೇದ್ 2020ರಲ್ಲಿ ಗಾಯಕ ಉಮರ್ ಜಸ್ವಾಲ್ ಅವರನ್ನು ಮದುವೆಯಾಗಿದ್ದರು ಮತ್ತು 2023 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು.

ಸಾನಿಯಾ ಮಿರ್ಜಾ ಅವರ ರಹಸ್ಯ ಪೋಸ್ಟ್  ?
ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಅವರ ವಿಚ್ಛೇದನದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದರೂ ಸಹ ತಮ್ಮ ಖಾಸಗಿ ಜೀವನದ ಬಗ್ಗೆ ೇನನ್ನೂ ಹೇಳಿರಲಿಲ್ಲ. ಬುಧವಾರವಷ್ಟೇ ಸಾನಿಯಾ ಮಿರ್ಜಾ ಅವರು ನಿಗೂಢ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಶೋಯೆಬ್ ಮಲಿಕ್ ಜೊತೆಗಿನ ವಿಚ್ಛೇದನದ ವದಂತಿಗಳಿಗೆ ಕಾರಣವಾಗಿತ್ತು.
“ಮದುವೆ ಕಷ್ಟ. ವಿಚ್ಛೇದನ ಕಷ್ಟ. ನಿಮ್ಮ ಕಷ್ಟವನ್ನು ಆರಿಸಿ. ಬೊಜ್ಜು ಕಷ್ಟ. ಫಿಟ್ ಆಗಿರುವುದು ಕಷ್ಟ. ನಿಮ್ಮ ಕಷ್ಟವನ್ನು ಆರಿಸಿ. ಸಾಲದಲ್ಲಿ ಇರುವುದು ಕಷ್ಟ. ಆರ್ಥಿಕವಾಗಿ ಶಿಸ್ತುಬದ್ಧವಾಗಿರುವುದು ಕಷ್ಟ. ನಿಮ್ಮ ಕಷ್ಟವನ್ನು ಆರಿಸಿ. ಸಂವಹನ ಕಷ್ಟ. ಸಂವಹನ ಮಾಡದಿರುವುದು ಕಷ್ಟ. ನಿಮ್ಮ ಕಷ್ಟವನ್ನು ಆರಿಸಿ. ಜೀವನವು ಎಂದಿಗೂ ಸುಲಭವಾಗುವುದಿಲ್ಲ. ಇದು ಯಾವಾಗಲೂ ಕಠಿಣವಾಗಿರುತ್ತದೆ. ಆದರೆ ನಾವು ನಮ್ಮ ಕಷ್ಟವನ್ನು ಆಯ್ಕೆ ಮಾಡಬಹುದು. ಬುದ್ಧಿವಂತಿಕೆಯಿಂದ ಆರಿಸಿ” ಎಂದು ಸಾನಿಯಾ ಮಿರ್ಜಾ ಬರೆದಿದ್ದರು.
ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ 2010 ರಲ್ಲಿ ಭಾರತದ ಹೈದರಾಬಾದ್‌ನಲ್ಲಿ ಸಾಂಪ್ರದಾಯಿಕ ಮುಸ್ಲಿಂ ಸಮಾರಂಭದಲ್ಲಿ ವಿವಾಹವಾದರು, ನಂತರ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ವಲಿಮಾ ಸಮಾರಂಭದಲ್ಲಿ ವಿವಾಹವಾದರು. ದಂಪತಿಯ ಮೊದಲ ಮಗು ಇಜಾನ್ 2018 ರಲ್ಲಿ ಜನಿಸಿದ.
ಕೆಲ ದಿನಗಳಿಂದ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಇಬ್ಬರೂ ತಮ್ಮ ಪ್ರತಿಯೊಂದು ಸಾಮಾಜಿಕ ಮಾಧ್ಯಮ ಪ್ರೊಫೈಲ್‌ನಿಂದ ತಾವಿಬ್ಬರೂ ಒಟ್ಟಿಗೆ ಇರುವ ಫೋಟೋಗಳನ್ನು ತೆಗೆದುಹಾಕಿದ್ದಾರೆ.

ಪ್ರಮುಖ ಸುದ್ದಿ :-   ಮಹದೇವ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣದಲ್ಲಿ ನಟ ಸಾಹಿಲ್ ಖಾನ್ ಬಂಧನ

ಏಕಪಕ್ಷೀಯವಾಗಿ   ಪತಿಗೆ ವಿಚ್ಛೇದನ ನೀಡಿದ ಸಾನಿಯಾ ಮಿರ್ಜಾ …
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ನಟಿ ಸನಾ ಜಾವೇದ್ ಅವರನ್ನು ಎರಡನೇ ಮದುವೆಯಾಗಿರುವುದಾಗಿ ಘೋಷಿಸಿದ ಕೆಲವೇ ಗಂಟೆಗಳ ನಂತರ ಭಾರತದ ಮಾಜಿ ಟೆನಿಸ್ ಆಟಗಾರ್ತಿ ಮತ್ತು ಮಲಿಕ್ ಅವರ ಪತ್ನಿ ಸಾನಿಯಾ ಮಿರ್ಜಾ ಅವರ ಕುಟುಂಬದ ಸದಸ್ಯರು, ಸಾನಿಯಾ ಮಿರ್ಜಾ ಅವರು ಏಕಪಕ್ಷೀಯವಾಗಿ ತನ್ನ ಪತಿಗೆ ವಿಚ್ಛೇದನ ನೀಡಿದ್ದಾರೆ ಎಂದು ಹೇಳಿದ್ದಾರೆ.
ವರದಿ ಪ್ರಕಾರ, ಕುಟುಂಬದ ಮೂಲವೊಂದು ಅದು ‘ಖುಲಾ’ ಎಂದು ಹೇಳಿದೆ, ಇದು ಮುಸ್ಲಿಂ ಮಹಿಳೆ ತನ್ನ ಪತಿಗೆ ಏಕಪಕ್ಷೀಯವಾಗಿ ವಿಚ್ಛೇದನ ನೀಡುವ ಹಕ್ಕನ್ನು ಉಲ್ಲೇಖಿಸುತ್ತದೆ.
ಶೋಯೆಬ್ ಮತ್ತು ಸಾನಿಯಾ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ವದಂತಿಗಳು ಉತ್ತುಂಗದಲ್ಲಿದ್ದಾಗ ಈ ಸುದ್ದಿ ಬಂದಿದೆ. ಕಳೆದೆರಡು ವರ್ಷಗಳಿಂದ ಸೆಲೆಬ್ರಿಟಿ ಜೋಡಿ ಒಟ್ಟಿಗೆ ಕಾಣಿಸಿಕೊಂಡಿರುವುದು ಅಪರೂಪ. ಅವರು ಬೇರ್ಪಟ್ಟಿದ್ದಾರೆ ಎಂದು ಹಲವಾರು ವರದಿಗಳು ಹೇಳಿಕೊಂಡಿವೆ. ಆದರೆ ಯಾವುದೇ ಅಧಿಕೃತ ದೃಢೀಕರಣವಿರಲಿಲ್ಲ. ಮಲಿಕ್, ಕಳೆದ ವರ್ಷ ಪಾಕಿಸ್ತಾನ ಟಿವಿ ಶೋಗಳಲ್ಲಿ ಸಾನಿಯಾ ಸಂಬಂಧಿತ ಪ್ರಶ್ನೆಗಳಿಗೆ ಉತ್ತರ ನೀಡುವುದರಿಂದ ಕೆಲವು ಬಾರಿ ತಪ್ಪಿಸಿಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ಮಲಿಕ್ ಇನ್‌ಸ್ಟಾಗ್ರಾಮ್‌ನಲ್ಲಿ ಸಾನಿಯಾ ಮಿರ್ಜಾ ಅವರನ್ನು ಅನ್‌ಫಾಲೋ ಮಾಡಿದ್ದರು.

ಪ್ರಮುಖ ಸುದ್ದಿ :-   "ಚಾಣಕ್ಯ ಕೂಡ...: ತನ್ನ ಲುಕ್‌ ಬಗ್ಗೆ ಟ್ರೋಲ್‌ ಮಾಡಿದವರ ಬಾಯ್ಮುಚ್ಚಿಸಿದ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement