ಪ್ರಧಾನಿ ಮೋದಿ 11 ದಿನ ಉಪವಾಸ ಮಾಡಿದ ಬಗ್ಗೆ ಅನುಮಾನವಿದೆ, ಅವ್ರನ್ನ ರಾಮಮಂದಿರ ಗರ್ಭಗುಡಿ ಒಳಗೆ ಬಿಡ್ಬಾರ್ದಿತ್ತು..: ವೀರಪ್ಪ ಮೊಯ್ಲಿ

ಚಿಕ್ಕಬಳ್ಳಾಪುರ : ಪ್ರಧಾನಿ ಮೋದಿ ಉಪವಾಸ ಮಾಡಿದ್ದರ ಬಗ್ಗೆ ಅನುಮಾನವಿದೆ. ಅವರನ್ನು ಗರ್ಭಗುಡಿ ಒಳಗೆ ಬಿಡಬಾರದಿತ್ತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಉಪವಾಸ ಮಾಡಿದ್ದ ಬಗ್ಗೆಯೇ ಅನುಮಾನವಿದೆ. ಏಳನೀರು ಮಾತ್ರ ಕುಡಿದು ಉಪವಾಸ ಮಾಡಿದ್ದರೆ ಒಂದೆರೆಡು ದಿನದಲ್ಲಿ ಮನುಷ್ಯ ನಿಶಕ್ತನಾಗಿ ಬೀಳುತ್ತಾನೆ. 11 ದಿನಗಳ ಉಪವಾಸ ಮಾಡಿದರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಅವರು ಉಪವಾಸ ಮಾಡಿದ್ದರ ಬಗ್ಗೆ ಅನುಮಾನವಿದೆ. ಉಪವಾಸ ಮಾಡದೇ ಗರ್ಭಗುಡಿಗೆ ಹೋಗಿದ್ದರೆ ಅಪವಿತ್ರವಾಗುತ್ತದೆ, ಗರ್ಭಗುಡಿಗೆ ಹೋಗಿ ಪೂಜೆ ಮಾಡಿದ್ದರೆ ಆ ಸ್ಥಳ ಅಪವಿತ್ರವಾಗುತ್ತದೆ. ಅಪವಿತ್ರವಾದ ಆ ಸ್ಥಳದಲ್ಲಿ ಯಾವುದೇ ಶಕ್ತಿ ಇರುವುದಿಲ್ಲ ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಗುಜರಾತ ಹತ್ಯಾಕಾಂಡದ ವೇಳೆ ಅಂದಿನ ಮುಖ್ಯಮಂತ್ರಿ ಆಗಿದ್ದ ಮೋದಿ ರಾಜಧರ್ಮ, ಕಾನೂನು ಪರಿಪಾಲನೆ ಮಾಡಲಿಲ್ಲ. ಅಂತಹ ಮೋದಿ ಅವರಿಂದ ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನೆ ಮಾಡಿಸಿದ್ದು ಎಷ್ಟರಮಟ್ಟಿಗೆ ಸರಿ.? ಮೋದಿಯವರ ಗರ್ಭಗುಡಿ ಪ್ರವೇಶದಿಂದ ದೇವಾಲಯಕ್ಕೆ ಎಷ್ಟು ಪಾವಿತ್ರತ್ಯತೆ ಬರಲಿದೆ ಎಂದು ಪ್ರಶ್ನಿಸಿದ್ದಾರೆ.
ರಾಮಮಂದಿರ ಅಪೂರ್ಣ ಮಂದಿರ. ಕೇವಲ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಮಾಡಿದರೆ ಸಾಲದು. ಅಲ್ಲಿ ರಾಮ ಲಕ್ಷಣ, ಸೀತಾ ಹಾಗೂ ಆಂಜನೇಯನ ವಿಗ್ರಹಗಳು ಇರಬೇಕು. ಆಗಲೇ ರಾಮಮಂದಿರ ಪೂರ್ಣ ಆಗುವುದು ಎಂದರು.

ಪ್ರಮುಖ ಸುದ್ದಿ :-   ಜಾರ್ಖಂಡದಲ್ಲಿ ಕಾಂಗ್ರೆಸ್ಸಿಗೆ ಆಘಾತ : ಪಕ್ಷದ ಏಕೈಕ ಸಂಸದೆ ಬಿಜೆಪಿಗೆ ಸೇರ್ಪಡೆ

ರಾಮಮಂದಿರ ಹೆಸರು ಹೇಳಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇನ್ಮುಂದೆ ಬಿಜೆಪಿಗೆ ಮಾತಾಡಲು ಬೇರೆ ವಿಚಾರವಿಲ್ಲ ಎಂದು ಹೇಳಿದರು
ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ಲೋಕಾರ್ಪಣೆಗೊಂಡಿದೆ. ಪ್ರಧಾನಿ ಮೋದಿ ಅಮೃತ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಿಸಿದ್ದಾರೆ. ರಾಮ ಮಂದಿರ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ 11 ದಿನಗಳ ಕಠಿಣ ಉಪವಾಸ ವ್ರತ ಅಂತ್ಯಗೊಳಿಸಿದ್ದಾರೆ.

5 / 5. 2

ಶೇರ್ ಮಾಡಿ :

  1. HM SADANANDA

    ಅಯೋಗ್ಯ. ನಿನ್ನಂತಹ ಸೋಗಲಾಡಿಯ ಮಾತಿಗೆ ಜನರೇ ಉತ್ತರಿಸಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement