ಉಕ್ರೇನ್ ಬಳಿ ಅಪಘಾತಕ್ಕೀಡಾದ 65 ಯುದ್ಧ ಕೈದಿಗಳಿದ್ದ ರಷ್ಯಾದ ವಿಮಾನ ; ಎಲ್ಲರ ಸಾವು-ರಷ್ಯಾ

65 ಉಕ್ರೇನಿಯನ್ ಯುದ್ಧ ಕೈದಿಗಳಿದ್ದ (POWs) ರಷ್ಯಾದ IL-76, ಹೆವಿ-ಲಿಫ್ಟ್ ಮಿಲಿಟರಿ ಸಾರಿಗೆ ವಿಮಾನವು ರಷ್ಯಾದ ಬೆಲ್ಗೊರೊಡ್ ಪ್ರದೇಶದಲ್ಲಿ ಪತನಗೊಂಡಿತು. ಇದು ಪ್ರದೇಶದ ಗಡಿಯಾಗಿದೆ. ಸ್ವಾಪ್‌ನಲ್ಲಿ ವಿನಿಮಯಕ್ಕಾಗಿ ಯುದ್ಧ ಕೈದಿ (POWs)ಗಳನ್ನು ಸಾಗಿಸಲಾಗುತ್ತಿತ್ತು. ವಿಮಾನ ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ರಷ್ಯಾ ಹೇಳಿದೆ.
ಅಪಘಾತದ ದೃಶ್ಯವು ದೂರದಿಂದ ಸೆರೆಯಾಗಿದೆ, ವಿಮಾನವು ನೇರವಾಗಿ ನೆಲದ ಕಡೆಗೆ ಸಾಗುತ್ತಿರುವುದನ್ನು ತೋರಿಸಿದೆ, ವಿಮಾನವು ಪೈಲಟ್‌ನ ನಿಯಂತ್ರಣ ಕಳೆದುಕೊಂಡಿತ್ತು ಮತ್ತು ವಸತಿ ಪ್ರದೇಶದ ಬಳಿ ಅಪಘಾತಕ್ಕೀಡಾಯಿತು. ವಿಮಾನವು ನೆಲಕ್ಕೆ ಅಪ್ಪಳಿಸಿತು ಮತ್ತು ಬೆಂಕಿ ಹೊತ್ತಿಕೊಂಡಿತು.
“ಮಾಸ್ಕೋ ಸಮಯ ಸುಮಾರು 11 ಗಂಟೆಗೆ (0800 GMT), IL-76 ವಿಮಾನವು ಸಾಮಾನ್ಯ ಹಾರಾಟದ ಸಮಯದಲ್ಲಿ ಬೆಲ್ಗೊರೊಡ್ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು” ಎಂದು ಮಾಸ್ಕೋದ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ AFP ವರದಿ ಮಾಡಿದೆ.

“ವಿಮಾನದಲ್ಲಿ 65 ಉಕ್ರೇನಿನ ಯುದ್ಧ ಕೈದಿಗಳನ್ನು ವಿನಿಮಯಕ್ಕಾಗಿ ಬೆಲ್ಗೊರೊಡ್ ಪ್ರದೇಶಕ್ಕೆ ಸಾಗಿಸಲಾಗುತ್ತಿತ್ತು, ಅದರಲ್ಲಿ ಆರು ಸಿಬ್ಬಂದಿ ಮತ್ತು ಮೂರು ಬೆಂಗಾವಲು ಸಿಬ್ಬಂದಿ ಇದ್ದರು” ಎಂದು ಅದು ಹೇಳಿದೆ.
ವಿಮಾನವು ಉಕ್ರೇನಿನ ಯುದ್ಧ ಕೈದಿಗಳನ್ನು ಹೊತ್ತೊಯ್ಯುತ್ತಿತ್ತು ಎಂದು ರಷ್ಯಾ ಹೇಳಿಕೊಂಡಿದೆ. ಆದರೆ ಉಕ್ರೇನ್‌ನ ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಎಎಫ್‌ಪಿ (AFP)ಯು, S-300 ಮೇಲ್ಮೈ-ಗಾಳಿ ರಕ್ಷಣಾ ವ್ಯವಸ್ಥೆಯ ಕ್ಷಿಪಣಿಗಳನ್ನು ಹೊತ್ತೊಯ್ಯುವಾಗ ತನ್ನ ರಕ್ಷಣಾ ಪಡೆಗಳು ವಿಮಾನವನ್ನು ಹೊಡೆದುರುಳಿಸಿತು. ಮತ್ತು ಅದು ಯುದ್ಧ ಕೈದಿಗಳನ್ನು ಸಾಗಿಸುತ್ತಿರಲಿಲ್ಲ ಎಂದು ವರದಿ ಮಾಡಿದೆ. ಉಕ್ರೇನ್‌ ಯುದ್ಧ ಕೈದಿಗಳನ್ನು ಹೊತ್ತೊಯ್ಯುತ್ತಿದ್ದ ವಿಮಾನವನ್ನು ಹೊಡೆದುರುಳಿಸಿದೆ ಎಂದು ರಷ್ಯಾದ ಸಂಸತ್ತಿನ ಸ್ಪೀಕರ್ ವ್ಯಾಚೆಸ್ಲಾವ್ ವೊಲೊಡಿನ್ ಆರೋಪಿಸಿದ್ದಾರೆ.

“ಅವರು ತಮ್ಮ ಸೈನಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನದ ಮೇಲೆ ಗುಂಡು ಹಾರಿಸಿದರು ಎಂದು ವೊಲೊಡಿನ್ ಸಂಸತ್ತಿನ ಅಧಿವೇಶನದಲ್ಲಿ ಶಾಸಕರಿಗೆ ತಿಳಿಸಿದರು. “ಮಾನವೀಯ ಕಾರ್ಯಾಚರಣೆಯನ್ನು ನಡೆಸುತ್ತಿದ್ದ ನಮ್ಮ ಪೈಲಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರದೇಶದ ರಾಜಧಾನಿಯ ಈಶಾನ್ಯದಲ್ಲಿರುವ ಕೊರೊಚಾನ್ಸ್ಕಿ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪ್ರಾದೇಶಿಕ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೊವ್ ತಿಳಿಸಿದ್ದಾರೆ.
“ಈಗ ತನಿಖಾ ತಂಡ ಮತ್ತು ತುರ್ತು ಸೇವೆಗಳು ಸೈಟ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ನಾನು ಜಿಲ್ಲೆಗೆ ಪ್ರಯಾಣಿಸಿದ್ದೇನೆ” ಎಂದು ಗ್ಲಾಡ್ಕೋವ್ ಹೇಳಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement