ವಾರಾಣಸಿ ಜ್ಞಾನವಾಪಿ ಮಸೀದಿಗೂ ನಿರ್ಮಾಣಕ್ಕೂ ಮುನ್ನ ಅಲ್ಲಿ ಬೃಹತ್ ಹಿಂದೂ ದೇಗುಲವಿತ್ತು: ಎಎಸ್ಐ ಸರ್ವೆಯಲ್ಲಿ ಉಲ್ಲೇಖ-ವಕೀಲ ವಿಷ್ಣು ಶಂಕರ ಜೈನ್

ವಾರಾಣಸಿ: ಜ್ಞಾನವಾಪಿ ಮಸೀದಿಯ ಸಮೀಕ್ಷೆಯು ವಿವಿಧ ಭಾಷೆಗಳಲ್ಲಿ 34 ಶಾಸನಗಳು ಇದ್ದ ದೇವಾಲಯ ಇತ್ತೆಂದು ಬಹಿರಂಗಪಡಿಸಿದೆ, ಅದನ್ನು ಮಸೀದಿಯಾಗಿ ಮರುರೂಪಿಸಲಾಗಿದೆ ಎಂದು ಮಹಿಳಾ ಅರ್ಜಿದಾರರ ವಕೀಲರಾದ ವಿಷ್ಣು ಜೈನ್ ಅವರು ಸಮೀಕ್ಷೆಯ ವರದಿಯ ಹಾರ್ಡ್ ಕಾಪಿ ಸ್ವೀಕರಿಸಿದ ನಂತರ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಾರಾಣಸಿ ಜಿಲ್ಲಾ ನ್ಯಾಯಾಧೀಶರು ಪ್ರಕರಣದ ಸೂಕ್ಷ್ಮತೆಯ ದೃಷ್ಟಿಯಿಂದ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ವಿರೂಪ ಮತ್ತು ತಪ್ಪು ಮಾಹಿತಿ ಹರಡುವುದನ್ನು ತಪ್ಪಿಸಲು ವರದಿಯನ್ನು ತಕ್ಷಣವೇ ಸಾರ್ವಜನಿಕಗೊಳಿಸಲು ಅಥವಾ ಸಾಫ್ಟ್ ಕಾಪಿಗಳನ್ನು ವಿತರಿಸಲು ನಿರಾಕರಿಸಿದ್ದರು.
ಎಎಸ್‌ಐ ವರದಿಯನ್ನು ಒಂದು ತಿಂಗಳ ಹಿಂದೆ ಮುಚ್ಚಿದ ಕವರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
839 ಪುಟಗಳ ಸಮೀಕ್ಷಾ ವರದಿಯ ಪ್ರತಿಯು ಪ್ರಕರಣದ ಸಂಬಂಧಪಟ್ಟವರಿಗೆ ಕೋರ್ಟ್‌ನಿಂದ ಲಭ್ಯವಾಗಿದೆ ಎಂದು ಜೈನ್ ಹೇಳಿದ್ದಾರೆ. ಅದಾಗಲೇ ಇದ್ದ ದೇವಸ್ಥಾನವನ್ನು ಧ್ವಂಸಗೊಳಿಸಿ, ಅದರ ಅವಶೇಷಗಳ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದನ್ನು ಸಮೀಕ್ಷಾ ವರದಿಯು ಸ್ಪಷ್ಟಪಡಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅರ್ಜಿದಾರರ ಪರ ವಕೀಲರಾದ ವಿಷ್ಣು ಜೈನ್ ಅವರು ವರದಿಯ ಆಯ್ದ ಭಾಗಗಳನ್ನು ಓದಿದರು. ಭಾರತದ ಪುರಾತತ್ವ ಇಲಾಖೆ ತನ್ನ ಸಮೀಕ್ಷೆಯ ಸಮಯದಲ್ಲಿ, “ಪೂರ್ವ ಅಸ್ತಿತ್ವದಲ್ಲಿರುವ ರಚನೆ ಮತ್ತು ಕಾರಿಡಾರ್ ಪಕ್ಕದಲ್ಲಿ ಬಾವಿ” ಯನ್ನು ಕಂಡುಹಿಡಿದಿದೆ ಎಂದು ಅವರು ಹೇಳಿದ್ದಾರೆ.
“ಸೆಂಟ್ರಲ್ ಚೇಂಬರ್ ಮತ್ತು ಮುಖ್ಯ ದ್ವಾರವು ಮೊದಲೇ ಅಸ್ತಿತ್ವದಲ್ಲಿರುವ ರಚನೆ ಹೊಂದಿದೆ. ಎಎಸ್‌ಐ (ASI) ತನ್ನ ಸಮೀಕ್ಷೆಯಲ್ಲಿ, “ಕಂಬಗಳು ಮತ್ತು ಪ್ಲಾಸ್ಟರ್‌ಗಳನ್ನು ಅಧ್ಯಯನ ಮಾಡಿದೆ ಮತ್ತು ಎಲ್ಲವೂ ದೇವಾಲಯದ ಭಾಗವಾಗಿದೆ ಎಂದು ಹೇಳಿದೆ ಎಂದು ಎಎಸ್‌ಐ (ASI) ವರದಿ ಓದುವಾಗ ಜೈನ್ ಹೇಳಿದರು. “ಹಿಂದೂ ದೇವಾಲಯದ 34 ಶಾಸನಗಳು ಕಂಡುಬಂದಿವೆ ಮತ್ತು ಶಾಸನಗಳು ದೇವನಾಗರಿ, ಗ್ರಂಥ, ತೆಲುಗು ಮತ್ತು ಕನ್ನಡದಲ್ಲಿವೆ. ಜನಾರ್ದನ, ರುದ್ರ ಮತ್ತು ಉಮೇಶ್ವರ ದೇವತೆಗಳ ಹೆಸರುಗಳು ಶಾಸನಗಳಲ್ಲಿ ಕಂಡುಬರುತ್ತವೆ, 17ನೇ ಶತಮಾನದಲ್ಲಿ ದೊಡ್ಡ ದೇವಾಲಯವನ್ನು ಕೆಡಹಲಾಗಿದೆ ಎಂದು ಅವರು ಹೇಳಿದರು.

ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (GPR) ಸಮೀಕ್ಷೆ ಒಳಗೊಂಡಿರುವ ASI ವರದಿಯು ಸೈಟ್‌ನಲ್ಲಿನ ಐತಿಹಾಸಿಕ ಪದರಗಳ ಬಗ್ಗೆ ಪ್ರಶ್ನೆಗಳನ್ನು ಹೊಂದಿದೆ. ವಕೀಲ ಜೈನ್‌ ಅವರ ಪ್ರಕಾರ ಪ್ರಸ್ತುತ ರಚನೆಯು ಪೂರ್ವ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ನಿರ್ಮಿಸಲಾಗಿದೆ ಎಂದು ತೋರುತ್ತದೆ.
ವರದಿಯನ್ನು ಓದಿದ ಅವರು, “ಮಹಾ ಮುಕ್ತಿ ಮಂಟಪದಂತಹ ಪದಗಳನ್ನು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ … ಹಿಂದಿನ ದೇವಾಲಯದ ಕಂಬಗಳನ್ನು ನೆಲಮಾಳಿಗೆಗಳನ್ನು ಮಾಡುವಾಗ ಮರುಬಳಕೆ ಮಾಡಲಾಗಿದೆ” ಎಂದು ಹೇಳಿದರು. ಅವರು ವಝುಖಾನದ ಎಎಸ್‌ಐ ಸಮೀಕ್ಷೆಗೆ ಕೋರುವುದಾಗಿ ಹೇಳಿದ್ದಾರೆ.
ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಳೆದ ಆಗಸ್ಟ್ 4ರಿಂದ ಎಎಸ್ ಐ ಸರ್ವೆ ನಡೆಸಿದೆ. ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಮೊಹರು ಮಾಡಿದ ವಝುಖಾನಾ ಪ್ರದೇಶವನ್ನು ಮಾತ್ರ ಅದು ಬಿಟ್ಟಿದೆ.
ದೇವಸ್ಥಾನದ ಅಸ್ತಿತ್ವದ ಬಗ್ಗೆ ಸಾಕಷ್ಟು ಸಾಕ್ಷ್ಯಗಳು ಸಮೀಕ್ಷಾ ವರದಿಯಲ್ಲಿ ಇವೆ ಎಂದು ಅವರು ಹೇಳಿದ್ದಾರೆ. ಹಿಂದೂ ಹಾಗೂ ಮುಸ್ಲಿಂ ಅರ್ಜಿದಾರರು ಸೇರಿದಂತೆ ಒಟ್ಟು 11 ಮಂದಿ ಈ ಸಮೀಕ್ಷೆಯ ವರದಿಯ ಪ್ರತಿ ತಮಗೆ ಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಹೊಂದಿಕೊಂಡಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement