ನೂತನ ಮೈತ್ರಿಕೂಟ ಸರ್ಕಾರದ ಬಿಹಾರ ಸಿಎಂ ಆಗಿ 9 ನೇ ಬಾರಿಗೆ ನಿತೀಶಕುಮಾರ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಬಿಹಾರದ ನೂತನ ಮೈತ್ರಿಕೂಟದ ಸರ್ಕಾರದ ಮುಖ್ಯಮಂತ್ರಿಯಾಗಿ ಭಾನುವಾರ 9ನೇ ಬಾರಿಗೆ ನಿತೀಶಕುಮಾರ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನಿತೀಶ ಜೊತೆಗೆ ಜನತಾ ದಳ (ಯುನೈಟೆಡ್) ನಾಯಕರಾದ ವಿಜಯಕುಮಾರ ಚೌಧರಿ, ಬಿಜೇಂದ್ರ ಪ್ರಸಾದ ಯಾದವ್ ಮತ್ತು ಶ್ರವೋನಕುಮಾರ ಕೂಡ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬಿಜೆಪಿ ನಾಯಕರಾದ ಸಾಮ್ರಾಟ ಚೌಧರಿ, ಡಾ ಪ್ರೇಮಕುಮಾರ ಮತ್ತು ವಿಜಯ ಸಿನ್ಹಾ, ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಅಧ್ಯಕ್ಷ ಡಾ. ಸಂತೋಷಕುಮಾರ ಸುಮನ್ ಮತ್ತು ಸ್ವತಂತ್ರ ಶಾಸಕ ಸುಮಿತಕುಮಾರ್ ಸಿಂಗ್ ಕೂಡ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮುಖವಾಗಿ ಸಾಮ್ರಾಟ್ ಚೌಧರಿ ಮತ್ತು ವಿಜಯ ಸಿನ್ಹಾ ಬಿಹಾರದ ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.
ಇದಕ್ಕೂ ಮುನ್ನ ರಾಜಭವನದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರಿಗೆ ಪತ್ರ ಸಲ್ಲಿಸಿದ ನಂತರ ನಿತೀಶ ಅವರು ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಇಂದು, ಭಾನುವಾರ ಬೆಳಿಗ್ಗೆ ನಡೆದ ಜನತಾ ದಳ (ಯುನೈಟೆಡ್) ಶಾಸಕಾಂಗ ಸಭೆಯಲ್ಲಿ ನಿತೀಶಕುಮಾರ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದರು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಯು ಮುಖ್ಯಸ್ಥರಾದ ನಿತೀಶಕುಮಾರ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬಿಜೆಪಿಯು ತನ್ನ ಶಾಸಕರು ಮತ್ತು ಪರಿಷತ್‌ ಸದಸ್ಯರು ಸಭೆ ನಡೆಸಿದ ನಿತೀಶಕುಮಾರಗೆ ತನ್ನ ಬೆಂಬಲ ಪತ್ರವನ್ನು ನೀಡಿತು.
ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶಕುಮಾರ, ಬಿಹಾರದಲ್ಲಿ ಮಹಾಘಟಬಂಧನ್ ಮೈತ್ರಿಕೂಟವನ್ನು ವಿಸರ್ಜಿಸುವಂತೆ ರಾಜ್ಯಪಾಲರನ್ನು ಕೋರಿದ್ದೇನೆ ಎಂದರು.

ಪ್ರಮುಖ ಸುದ್ದಿ :-   ಮುಂಬೈ : ಧೂಳಿನ ಬಿರುಗಾಳಿಗೆ 100 ಅಡಿ ಎತ್ತರದ ಬೃಹತ್‌ ಹೋರ್ಡಿಂಗ್ ಬಿದ್ದು 8 ಮಂದಿ ಸಾವು, 64 ಜನರಿಗೆ ಗಾಯ

ಮೂರು ಎಡಪಕ್ಷಗಳೊಂದಿಗೆ ಲಾಲು ಪ್ರಸಾದ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಕಾಂಗ್ರೆಸ್‌ಗಳನ್ನು ಒಳಗೊಂಡಿರುವ ಮಹಾಘಟಬಂಧನ ಮೈತ್ರಿಯಲ್ಲಿ ಎಲ್ಲವೂ “ಸರಿಯಾಗಿಲ್ಲ” ಮತ್ತು ಅವರು ತೊರೆಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಜೆಡಿಯು ನಾಯಕ ಹೇಳಿದರು.
“(ಮಹಾಘಟಬಂಧನ್ ಮೈತ್ರಿಯಲ್ಲಿ) ಪರಿಸ್ಥಿತಿ ಸರಿಯಿಲ್ಲದ ಕಾರಣ ನಾನು ಬಹಳ ಸಮಯದಿಂದ ಯಾವುದರ ಬಗ್ಗೆಯೂ ಪ್ರತಿಕ್ರಿಯಿಸುತ್ತಿಲ್ಲ, ನನ್ನ ಪಕ್ಷದ ಕಾರ್ಯಕರ್ತರು ಸೇರಿದಂತೆ ಎಲ್ಲರ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ನಾನು ಪಡೆಯುತ್ತಿದ್ದೇನೆ. ನಾನು ಅವೆಲ್ಲವನ್ನೂ ಆಲಿಸಿ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement