ಕುಮಟಾ: ವಿನಾಯಕ ರೆಕ್ಸಿನ್ ಹೌಸ್ ನೂತನ ಕಟ್ಟಡ ಉದ್ಘಾಟಿಸಿದ ರಾಘವೇಶ್ವರ ಶ್ರೀಗಳು-ಶುಭ ಹಾರೈಕೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ  ಕುಮಟಾದ ರೈಲ್ವೆ ನಿಲ್ದಾಣದ ಸಮೀಪದ ನೂತನ ಕಟ್ಟಡದಲ್ಲಿ ವಿನಾಯಕ ರೆಕ್ಸಿನ್ ಹೌಸ್ ನೂತನ ಮಳಿಗೆಯನ್ನು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ನೂತನ ಕಟ್ಟಡ ಅನಾವರಣಗೊಳಿಸಿದರು. ಇದೇ ವೇಳೆ ಶ್ರೀಗಳ ಶ್ರೀಪಾದುಕಾ ಪೂಜೆ ಮತ್ತು ಭಿಕ್ಷಾಸೇವೆ ಸಹ ನಡೆಯಿತು.
ವಿನಾಯಕ ಹೆಗಡೆ ಕಟ್ಟೆ ದಂಪತಿ ಭಿಕ್ಷಾಸೇವೆ ಹಾಗೂ ಪಾದಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು, ನಮ್ಮ ನೋವು ನಲಿವಿನ ಬಗ್ಗೆ ಹೇಳಿದ್ದನ್ನು ಕೇಳಿಸಿಕೊಳ್ಳಲು ಕುಟುಂಬದವರು, ಸ್ನೇಹಿತರು ಇರುತ್ತಾರೆ. ಆದರೆ ಯಾರಿಗೂ ಕೇಳಿಸದ, ನೋಡಲಾಗದ ನಮ್ಮೊಳಗಿನ ಭಾವವನ್ನು ಕೇಳುವವ ಶ್ರೀರಾಮ ಎಂದು ಹೇಳಿದರು. ಕೆಲವರು ಕೇಳಿದರೂ ಬರುವುದಿಲ್ಲ. ಕೆಲವರು ಕೇಳಿದರೆ ಬರುವವರು. ಆದರೆ ಕೇಳದೆಯೂ ಬರುವವನು ದೇವರು ಮಾತ್ರ ಎಂದು ಹೇಳಿದರು.

ವಿನಾಯಕ ರೆಕ್ಸಿನ್ ಹೌಸ್ ನ ವಿನಾಯಕ ಹೆಗಡೆಕಟ್ಟೆ ಗುರುಗಳ ಪಾದ ಸ್ಪರ್ಶ ಬಯಸಿದ್ದ, ಆದರೆ ವಿನಾಯಕ ರೆಕ್ಸಿನ್ ಹೌಸ್ ಗೆ ಗುರುಗಳ ಪಾದ ಸ್ಪರ್ಶವಷ್ಟೇ ಅಲ್ಲದೆ, ರಾಮನೇ ಆಗಮಿಸಿ ರಾಮನ ಪೂಜೆ ನಡೆಯುವಂತಾಯಿತು. ಇದುವೇ ಗುರು ಅನುಗ್ರಹ. ನಮ್ಮೊಳಗಿನ ಭಾವ ಎಷ್ಟು ತೀವ್ರವೋ ಅಷ್ಟು ಫಲ. ಅವರ ಭಾವಕ್ಕೆ ರಾಮನೇ ಪ್ರೇರಣೆಗೊಂಡು ಈ ಕಾರ್ಯ ಮಾಡಿದ್ದಾನೆ ಎಂದು ಹೇಳಿದರು.
ಭಕ್ತಿಗೆ ಗಡಿಯಿಲ್ಲ ಎಂಬುದಕ್ಕೆ ವಿನಾಯಕ ರೆಕ್ಸಿನ್‌ ಹೌಸ್‌ ಉದಾಹರಣೆ. ಅಂಗಡಿಯಲ್ಲಿಯೂ ದೇವರ ಪೂಜೆ ನಡೆಯಬಹುದು ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ ಎಂದು ಅವರು ಹೇಳಿದರು.
ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ, ಕರ್ಲಾನ್ ಕಂಪನಿಯ ಪ್ರಮುಖರು, ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಹೆಗಡೆ ಹಾಗೂ ಇತರರು ಇದ್ದರು. ಕಾರ್ಯಕ್ರಮದಲ್ಲಿ ಕೃಷ್ಣ ಹೆಗಡೆಕಟ್ಟೆ, ವೈಶಾಲಿ ಹೆಗಡೆಕಟ್ಟೆ, ವಿಠ್ಠಲ ಹೆಗಡೆಕಟ್ಟೆ ಮೊದಲಾದವರು ಇದ್ದರು.

ಪ್ರಮುಖ ಸುದ್ದಿ :-   ದೆಹಲಿಯಲ್ಲಿ ಮತ್ತೆ ಕಾಂಗ್ರೆಸ್ಸಿಗೆ ಆಘಾತ : ಪಕ್ಷಕ್ಕೆ ರಾಜೀನಾಮೆ ನೀಡಿದ ಇಬ್ಬರು ಹಿರಿಯ ನಾಯಕರು

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement