ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ ; ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಸೊಸೆ ಸಾವು, ಪುತ್ರ-ಮೊಮ್ಮಗನಿಗೆ ಗಾಯ

ಜೈಪುರ: ಮಂಗಳವಾರ ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಾಜಿ ಕೇಂದ್ರ ಸಚಿವ ಜಸ್ವಂತ ಸಿಂಗ್‌ ಪುತ್ರ ಹಾಗೂ ಕಾಂಗ್ರೆಸ್‌ನ ಮಾಜಿ ಸಂಸದ ಮಾನವೇಂದ್ರ ಸಿಂಗ್ ಅವರ ಪತ್ನಿ ಚಿತ್ರಾ ಸಿಂಗ್ ಸಾವಿಗೀಡಾಗಿದ್ದಾರೆ. 59 ವರ್ಷದ ಮಾನವೇಂದ್ರ ಸಿಂಗ್‌ ಕೂಡ ಕಾರಿನಲ್ಲಿದ್ದು, ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದ ಸಮಯದಲ್ಲಿ ಮಾನವೇಂದ್ರ ಸಿಂಗ್ ಮತ್ತು ಅವರ ಪತ್ನಿ ಹೊರತುಪಡಿಸಿ, ಅವರ 25 ವರ್ಷದ ಮಗ ಹಮೀರ್ ಸಿಂಗ್ ಮತ್ತು ಅವರ ಚಾಲಕ ಕಾರಿನಲ್ಲಿದ್ದರು. ಕುಟುಂಬ ದೆಹಲಿಯಿಂದ ಜೈಪುರಕ್ಕೆ ತೆರಳುತ್ತಿತ್ತು.
ಪ್ರಾಥಮಿಕ ಮಾಹಿತಿಗಳ ಪ್ರಕಾರ, ಚಿತ್ರಾ ತನ್ನ ಪತಿಯ ಪಕ್ಕದ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದರು ಹಾಗೂ ಮಾನವೇಂದ್ರ ಸಿಂಗ್‌ ಕಾರನ್ನು ಚಲಾಯಿಸುತ್ತಿದ್ದರು. ಹಿಂದಿನ ಸೀಟಿನಲ್ಲಿ ಮಾನವೇಂದ್ರ ಅವರ ಮಗ ಮತ್ತು ಚಾಲಕ ಇದ್ದರು. ಅಲ್ಲದೆ, ಅಪಘಾತ ಸಂಭವಿಸಿದ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲವಾಗಿತ್ತು.

ಸುದ್ದಿಗಾರರೊಂದಿಗೆ ಮಾತನಾಡಿದ ಅಲ್ವಾರ್ ಎಎಸ್ಪಿ ತೇಜಪಾಲ ಸಿಂಗ್ ಅವರು, “ಎನ್‌ಎಚ್ 4 ರ ಪಾಯಿಂಟ್ 82.8 ರಲ್ಲಿ ಅಪಘಾತ ಸಂಭವಿಸಿದೆ, ಕಾರಿನಲ್ಲಿ ಚಾಲಕ ಸೇರಿದಂತೆ ನಾಲ್ವರು ಇದ್ದರು. ಮಹಿಳೆಯ ಸಾವು ದೃಢಪಟ್ಟಿದೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಮಾನವೇಂದ್ರ ಸಿಂಗ್ ಅವರು 2004 ಮತ್ತು 2009 ರ ಅವಧಿಯಲ್ಲಿ ಲೋಕಸಭೆಯ ಸದಸ್ಯರಾಗಿದ್ದರು ಮತ್ತು ರಾಜಸ್ಥಾನದ ಬಾರ್ಮರ್-ಜೈಸಲ್ಮೇರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅವರ ತಂದೆ, ಜಸ್ವಂತ್ ಸಿಂಗ್ ಅವರು ಧೀಮಂತ ರಾಜಕೀಯ ನಾಯಕರಾಗಿದ್ದರು ಮತ್ತು ಬಿಜೆಪಿಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು. ಅವರು 2020 ರಲ್ಲಿ ನಿಧನರಾದರು.

ಪ್ರಮುಖ ಸುದ್ದಿ :-   ವೀಡಿಯೊ...| ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದ ಮಮತಾ ಬ್ಯಾನರ್ಜಿ

ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಜಸ್ವಂತ್ ಸಿಂಗ್ ಹಲವಾರು ಕೇಂದ್ರ ಸಚಿವಾಲಯಗಳಲ್ಲಿ ಸೇವೆ ಸಲ್ಲಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಎರಡು ವರ್ಷಗಳ ಕಾಲ ಅವರು ಹಣಕಾಸು ಖಾತೆಯನ್ನು ಹೊಂದಿದ್ದರು. ಅದಕ್ಕೂ ಮೊದಲು ವಿದೇಶಾಂಗ ಖಾತೆ ಸಚಿವರಾಗಿದ್ದರು.
ಮಾನವೇಂದ್ರ ಸಿಂಗ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಾರಣಾಂತಿಕ ಅಪಘಾತದಿಂದ ಉಂಟಾದ ಹಾನಿಯನ್ನು ವಿವರಿಸಿದರು. “ಚಿತ್ರಾ ಸಿಂಗ್ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು ಮತ್ತು ಮಾನವೇಂದ್ರ ಸಿಂಗ್ ಅವರ ಎದೆಗೆ ಗಾಯವಾಗಿತ್ತು, ಆದರೆ ಅವರು ಪ್ರಜ್ಞೆ ಹೊಂದಿದ್ದಾರೆ … ಅವರ ಮಗನಿಗೆ ಸಣ್ಣ ಗಾಯಗಳಾಗಿವೆ” ಎಂದು ಹೇಳಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement