ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಾಂಗ್ರೆಸ್‌ 40 ಸ್ಥಾನ ಗೆಲ್ಲುವುದು ಅನುಮಾನ: ಮಮತಾ ಬ್ಯಾನರ್ಜಿ

ಕೋಲ್ಕತ್ತ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಎದುರು ಕಾಂಗ್ರೆಸ್‌ 40 ಸ್ಥಾನಗಳನ್ನು ಪಡೆಯುವ ಬಗ್ಗೆ ಅನುಮಾನವಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ ಉಳಿಸಿಕೊಂಡಿರುವ ಬಾಕಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ನಡೆದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಂಗಾಳದ ಮೂಲಕ ಸಂಚರಿಸುವ ಭಾರತ ಜೋಡೋ ನ್ಯಾಯ ಯಾತ್ರೆಯ ಬಗ್ಗೆ ಮಮತಾ ಬ್ಯಾನರ್ಜಿ ಅವರು, ಕಾಂಗ್ರೆಸ್ ಅದರ ಬಗ್ಗೆ ತನಗೆ ತಿಳಿಸಲಿಲ್ಲ ಎಂದು ಟೀಕಿಸಿದರು. ಪಶ್ಚಿಮ ಬಂಗಾಳದ ಆರು ಜಿಲ್ಲೆಗಳಲ್ಲಿ ಸಂಚರಿಸಲಿರುವ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ನ್ಯಾಯ ಯಾತ್ರೆಯನ್ನು ವಲಸೆ ಹಕ್ಕಿಗಳಿಗೆ ಹೋಲಿಕೆ ಮಾಡಿದರು. ಫೋಟೋ ಅವಕಾಶಗಳಿಗಾಗಿ ಅದು ಕೇವಲ ಕೈಗನ್ನಡಿ. ಇದು ನಿಜವಾದ ಉದ್ದೇಶವನ್ನು ಹೊಂದಿಲ್ಲ ಎಂದು ಸೂಚಿಸುತ್ತದೆ ಎಂದು ಅಪಹಾಸ್ಯ ಮಾಡಿದರು.

ದೇಶದಾದ್ಯಂತ ನೀವು (ಕಾಂಗ್ರೆಸ್‌) 300 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿ ಎಂದು ಅವರಿಗೆ ಹೇಳಿದೆ, ಆದರೆ ಇದನ್ನು ಅವರು ನಿರಾಕರಿಸಿದರು. ಈಗ ಮುಸ್ಲಿಂ ಮತದಾರರನ್ನು ಪ್ರಚೋದಿಸಲು ರಾಜ್ಯಕ್ಕೆ ಬಂದಿದ್ದಾರೆ, ಅವರು 300 ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಿದರೂ 40 ಸ್ಥಾನಗಳನ್ನು ಪಡೆಯುತ್ತಾರೆಯೇ ಎಂಬ ಬಗ್ಗೆ ಅನುಮಾನವಿದೆ ಎಂದರು.
ಮೈತ್ರಿಗೆ ನಾವು ಸಿದ್ಧರಿದ್ದೆವು ಎಂದು ಹೇಳಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಎರಡು ಸ್ಥಾನಗಳಲ್ಲಿ ಸ್ಫರ್ಧೆ ಮಾಡಿ ಎಂದು ಹೇಳಿದೆವು. ಅವರು ಅದನ್ನು ತಿರಸ್ಕರಿಸಿದರು. ಅಂದಿನಿಂದ, ನಮ್ಮ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ಈಗ ಬೇಕಾದರೆ ಅವರು ಎಲ್ಲ ಲೋಕಸಭೆ ಸ್ಥಾನಗಳಲ್ಲೂ ಸ್ಪರ್ಧೆ ಮಾಡಲಿ ಎಂದರು.

ಪ್ರಮುಖ ಸುದ್ದಿ :-   ವೀಡಿಯೊ..| ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಯುವತಿಯರ ರಂಪಾಟ, ಪೊಲೀಸರೊಂದಿಗೆ ಜಗಳ : ಮೂವರ ಬಂಧನ

2019ರ ಚುನಾವಣೆ ಮತ್ತು 2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಗಳ ಸಾಧನೆಯನ್ನು ಆಧರಿಸಿ ಸೀಟು ಹಂಚಿಕೆ ಸೂತ್ರವನ್ನು ರೂಪಿಸಬೇಕು ಎಂದು ತೃಣಮೂಲ ಕಾಂಗ್ರೆಸ್‌ ಕೋರಿತ್ತು. ಕಾಂಗ್ರೆಸ್ ಶೇಕಡಾ 5 ಕ್ಕಿಂತ ಕಡಿಮೆ ಮತಗಳನ್ನು ಗಳಿಸಿದೆ ಎಂದು ಟಿಎಂಸಿ ಉಲ್ಲೇಖಿಸಿದೆ ಮತ್ತು ಈ ಕಾರನ ಮುಂದಿಟ್ಟು ಕಾಂಗ್ರೆಸ್ಸಿನ ಸೀಟು ಹಂಚಿಕೆ ಬೇಡಿಕೆಗಳನ್ನು ತಿರಸ್ಕರಿಸಿತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement