ವೀಡಿಯೊ..| ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಯುವತಿಯರ ರಂಪಾಟ, ಪೊಲೀಸರೊಂದಿಗೆ ಜಗಳ : ಮೂವರ ಬಂಧನ

ಮುಂಬೈ: ಕುಡಿದ ಅಮಲಿನಲ್ಲಿ ರಸ್ತೆಯಲ್ಲಿ ಗಲಾಟೆ ಮಾಡಿದ ಮೂವರು ಮಹಿಳೆಯರ ವಿರುದ್ಧ ಮಹಾರಾಷ್ಟ್ರದ ನಗರವೊಂದರಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯು ಮಹಾರಾಷ್ಟ್ರದ ವಿರಾರ್ ನಗರದಲ್ಲಿ ವರದಿಯಾಗಿದೆ.ೀ ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಪೊಲೀಸರ ಪ್ರಕಾರ, ಮಹಿಳೆಯರು ಅಲ್ಲಿನ ಬಾರ್‌ನಿಂದ ಹೊರಬಂದ ನಂತರ ಗಲಾಟೆ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಅರ್ನಾಳ ಸಾಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಕುಡಿತದ ಮತ್ತಿನಲ್ಲಿದ್ದ ಮಹಿಳೆಯರು ಪೊಲೀಸ್ ತಂಡದೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಗಲಾಟೆ ಮಾಡಿದ್ದಾರೆ.ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಮಹಿಳಾ ಕಾನ್‌ಸ್ಟೆಬಲ್‌ಗಳು ಮಧ್ಯಪ್ರವೇಶಿಸಿ ಅವರನ್ನು ಆಟೋ ರಿಕ್ಷಾದಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಪೊಲೀಸರೊಂದಿಗೆ ಜಗಳವಾಡುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಹರಿದಾಡಿದೆ. ವೀಡಿಯೋದಲ್ಲಿ ಮಹಿಳೆಯೊಬ್ಬರು ಪೊಲೀಸರನ್ನು ನಿಂದಿಸುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತಿದೆ. ಒಂದು ಹಂತದಲ್ಲಿ, ಈ ಮಹಿಳೆಯ ಸ್ನೇಹಿತರಿಬ್ಬರೂ ಅವಳನ್ನು ಪೊಲೀಸರಿಂದ ದೂರ ಸರಿಸಲು ಪ್ರಯತ್ನಿಸಿದ್ದಾರೆ. ವಾಗ್ವಾದದ ಸಮಯದಲ್ಲಿ, ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯೊಬ್ಬರನ್ನು ಘಟನಾ ಸ್ಥಳದಿಂದ ಕರೆದೊಯ್ಯಲು ಪ್ರಯತ್ನಿಸುತ್ತಿರುವಾಗ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬರುತ್ತದೆ.

ವರದಿಗಳ ಪ್ರಕಾರ, ವಿರಾರ್‌ನಲ್ಲಿರುವ ಬಾರ್ ಮತ್ತು ಲೌಂಜ್‌ನ ಹೊರಗಿನ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
ವೀಡಿಯೋದಲ್ಲಿ ಕಂಡುಬರುವ ಮಹಿಳೆಯು ಮಹಿಳಾ ಪೊಲೀಸ್ ಪೇದೆ ಕೈಗೆ ಕಚ್ಚಿದ್ದಾಳೆ ಎನ್ನಲಾಗಿದೆ. ಆಕೆ ಮತ್ತೊಬ್ಬ ಕಾನ್‌ಸ್ಟೇಬಲ್ ಮೇಲೆಯೂ ಹಲ್ಲೆ ನಡೆಸಿ ಆತನ ಮಣಿಕಟ್ಟಿಗೆ ಕಚ್ಚಿದ್ದಾಳೆ ಎಂದು ವರದಿಯಾಗಿದೆ. ಆಕೆಯ ಸ್ನೇಹಿತೆ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲು ಎಳೆದು, ಮಹಿಳಾ ಬೌನ್ಸರ್ ಟೀ ಶರ್ಟ್ ಹರಿದ ಆರೋಪ ಹೊತ್ತಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ಮಹಿಳೆಯರನ್ನು ಬಂಧಿಸಿರುವ ಪೊಲೀಸರು, ಐಪಿಸಿ ಸೆಕ್ಷನ್ 353, 323, 325, 504, 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ನಾಲ್ವರು ಶಂಕಿತ ಐಸಿಸ್ ಭಯೋತ್ಪಾದಕರ ಬಂಧನ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement