ಫೆಬ್ರವರಿ 5 ರಿಂದ ಡಿಡಿಯಲ್ಲಿ ರಮಾನಂದ ಸಾಗರ ‘ರಾಮಾಯಣʼ ಧಾರವಾಹಿ ಮತ್ತೆ ಪ್ರಸಾರ

ನವದೆಹಲಿ: 1987 ರಲ್ಲಿ ಪ್ರಸಾರವಾಗಿದ್ದ ರಮಾನಂದ ಸಾಗರ ಅವರ ಪೌರಾಣಿಕ ಧಾರವಾಹಿ ʼರಾಮಾಯಣʼವು ಮತ್ತೆ ದೂರದರ್ಶನ (ಡಿಡಿ) ನ್ಯಾಷನಲ್‌ನಲ್ಲಿ ಮತ್ತೆ ಪ್ರಸಾರವಾಗಲಿದೆ.
ದೂರದರ್ಶನದ ಅಧಿಕೃತ ಹ್ಯಾಂಡಲ್‌ನ ಟ್ವೀಟ್ ಪ್ರಕಾರ ಈ ಧಾರವಾಹಿ ಟಿವಿಯಲ್ಲಿ ಮತ್ತೆ ಪ್ರಸಾರವಾಗಲು ಸಿದ್ಧವಾಗಿದೆ. ಶುಕ್ರವಾರ, ದೂರದರ್ಶನದ ಅಧಿಕೃತ X ಹ್ಯಾಂಡಲ್, ಹಿಂದೂ ಮಹಾಕಾವ್ಯ ರಾಮಾಯಣ ಆಧರಿಸಿದ ರಮಾನಂದ ಸಾಗರ ಅವರ ಪೌರಾಣಿಕ ಧಾರವಾಹಿಯನ್ನು ಫೆಬ್ರವರಿ 5 ರಿಂದ ದಿನಕ್ಕೆ ಎರಡು ಬಾರಿ ಡಿಡಿ (DD) ನ್ಯಾಷನಲ್‌ನಲ್ಲಿ ಮರುಪ್ರಸಾರ ಮಾಡಲಾಗುವುದು ಎಂದು ಪ್ರಕಟಿಸಿದೆ. ಸಂಚಿಕೆಯು ಸಂಜೆ 6 ರಿಂದ ಪ್ರಸಾರವಾಗಲಿದೆ. ಪುನರಾವರ್ತಿತ ಪ್ರಸಾರವನ್ನು ಮಧ್ಯಾಹ್ನ 12 ರಿಂದ ಪ್ರಸಾರ ಮಾಡಲಾಗುತ್ತದೆ.

ರಾಮಾಯಣ 90 ರ ದಶಕದ ಅಪ್ರತಿಮ ಟಿವಿ ಕಾರ್ಯಕ್ರಮವಾಗಿದ್ದು, ರಾಮಾಯಣ ಧಾರಾವಾಹಿಯಲ್ಲಿ ಶ್ರೀರಾಮನಾಗಿ ಅರುಣ ಗೋವಿಲ್, ಸೀತೆಯಾಗಿ ದೀಪಿಕಾ ಚಿಕಲಿಯಾ ಮತ್ತು ಲಕ್ಷ್ಮಣನಾಗಿ ಸುನಿಲ ಲಹಿರಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮವು ವ್ಯಾಪಕವಾಗಿ ಜನಪ್ರಿಯವಾಗಿತ್ತು ಮತ್ತು ಇದು ಮೊದಲು ಪ್ರಸಾರವಾದಾಗ ಅಭೂತಪೂರ್ವ ವೀಕ್ಷಣೆಗೆ ಕಾರಣವಾಯಿತು.

ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠೆ ಸಮಾರಂಭವು ಜನವರಿ 22 ರಂದು ಮುಕ್ತಾಯಗೊಂಡು ಸಾರ್ವಜನಿಕರರಿಗೆ ದರ್ಶನಕ್ಕೆ ಮುಕ್ತವಾದ ವಾರಗಳ ನಂತರ, ಈ ಘೋಷಣೆ ಬಂದಿದೆ. ಅಯೋಧ್ಯಾ ರಾಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಯಜಮಾನನಂತೆ ಪ್ರಧಾನಿ ಮೋದಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಕೂಡ ಉಪಸ್ಥಿತರಿದ್ದರು.
ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಾರ್ಚ್ 2020 ರಲ್ಲಿ ಮೊದಲ ಲಾಕ್‌ಡೌನ್ ಸಮಯದಲ್ಲಿ ರಾಮಾಯಣ ಧಾರವಾಹಿಯನ್ನು ಮರುಪ್ರಸಾರ ಮಾಡಲಾಗಿತ್ತು. ಆ ಸಮಯದಲ್ಲಿ, ಮರುಪ್ರಸಾರದ ಮೊದಲ ಸಂಚಿಕೆಯು ದೂರದರ್ಶನದ ವೆಬ್‌ಸೈಟ್ ಅನ್ನು ಕ್ರ್ಯಾಶ್ ಮಾಡಿತು ಮತ್ತು ಗೂಗಲ್ ಇಂಡಿಯಾದಲ್ಲಿ ಅಗ್ರ-ಹುಡುಕಾಟದ ಪ್ರಮುಖ ವಿಷಯವಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಟಾಪ್ ಟ್ರೆಂಡ್ ಆಗಿತ್ತು.

ಪ್ರಮುಖ ಸುದ್ದಿ :-   ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣ : ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಖುಲಾಸೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement