ಈಗಲೇ ಲೋಕಸಭೆ ಚುನಾವಣೆ ನಡೆದರೆ ಕರ್ನಾಟಕದಲ್ಲಿ ಬಿಜೆಪಿ – ಜೆಡಿಎಸ್‌ ಮೈತ್ರಿ 24 ಸ್ಥಾನಗಳಲ್ಲಿ ಗೆಲ್ಲಬಹುದು.; ಮೂಡ್ ಆಫ್ ದಿ ನೇಷನ್ ಸಮೀಕ್ಷೆ

ನವದೆಹಲಿ: ಈಗಲೇ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಯ ಎನ್‌ಡಿಎ 24 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ ಎಂದು ಖಾಸಗಿ ಸುದ್ದಿವಾಹಿನಿ ಇಂಡಿಯಾ ಟುಡೇ ‘ಮೂಡ್ ಆಫ್ ದಿ ನೇಷನ್‌ ಸಮೀಕ್ಷೆ’ ತಿಳಿಸಿದೆ.
ರಾಜ್ಯದ ಲೋಕಸಭಾ ಕ್ಷೇತ್ರಗಳಲ್ಲಿ 2023 ಡಿಸೆಂಬರ್ 15 ರಿಂದ 2024 ಜನವರಿ 28 ರ ನಡುವೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯನ್ನು ಮೂಡ್ ಆಫ್ ದಿ ನೇಷನ್‌ ಬಿಡುಗಡೆ ಮಾಡಿದೆ.
ಕರ್ನಾಟಕದಲ್ಲಿ ಬಿಜೆಪಿ+ ಜೆಡಿಎಸ್‌ – 24 ಸ್ಥಾನಗಳಲ್ಲಿ(ಶೇ. 53 ಮತಗಳು) ಜಯಗಳಿಸುವ ಸಾಧ್ಯತೆಯಿದೆ. ಹಾಗೂ ಆಡಳಿತಾರೂಢ ಕಾಂಗ್ರೆಸ್‌
4 ಸ್ಥಾನಗಳಲ್ಲಿ (ಶೇ.42ರಷ್ಟು ಮತಗಳು) ಜಯಗಳಿಸುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ.
2019 ರಂತೆಯೇ ಬಿಜೆಪಿಯು ಶೇಕಡಾ 53 ರಷ್ಟು ಮತಗಳನ್ನು ಗಳಿಸುವ ನಿರೀಕ್ಷೆಯಿದೆ. ವಿಪಕ್ಷಗಳ ಮೈತ್ರಿಕೂಡ ಇಂಡಿಯಾ-ಬ್ಲಾಕ್‌ 2019 ರಂತೆಯೇ ಶೇಕಡಾ 42 ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ತಿಳಿಸಿದೆ.
2019 ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 28 ಕ್ಷೇತ್ರಗಳಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ ಕೇವಲ ಒಂದು ಸ್ಥಾನಗಳಲ್ಲಿ ಮಾತ್ರ ಜಯಗಳಿಸಿತ್ತು. ಜೆಡಿಎಸ್ ಒಂದು ಸ್ಥಾನ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಸುಮಲತಾ ಗೆಲುವು ಸಾಧಿಸಿದ್ದರು.

ಆಂಧ್ರ ಪ್ರದೇಶದಲ್ಲಿ ಟಿಡಿಪಿ ಮುಂದೆ…
ಮೂಡ್‌ ಆಫ್‌ ದಿ ನೇಶನ್‌ ಸಮೀಕ್ಷೆ ಪ್ರಕಾರ, ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ಪಕ್ಷವಾದ ವೈಎಸ್‌ಆರ್‌ಪಿ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಅಲ್ಲಿ ಟಿಡಿಪಿ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ. ಒಟ್ಟು 25 ಸ್ಥಾನಗಳಲ್ಲಿ ಟಿಡಿಪಿ – 17 ಸ್ಥಾನಗಳು (ಶೇ.45 ಮತಗಳು) ವೈಎಸ್‌ಆರ್‌ಸಿ – 8 ಸ್ಥಾನಗಳಲ್ಲಿ (ಶೇ.41 ಮತಗಳು) ಜಯಗಳಿಸುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್‌ ಮುಂದೆ…
ಸಮೀಕ್ಷೆ ಪ್ರಕಾರ ತೆಲಂಗಾಣದಲ್ಲಿ ಕೆಲವೇ ದಿನಗಳ ಹಿಂದೆ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ಹೆಚ್ಚು ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ. ಕಾಂಗ್ರೆಸ್‌ – 10 ಸ್ಥಾನಗಳು, ಬಿಜೆಪಿ – 3 ಸ್ಥಾನಗಳು, ಬಿಆರ್‌ಎಸ್‌ – 3 ಸ್ಥಾನಗಳು ಹಾಗೂ ಎಂಐಎಂಐಎಂ-1 ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯನ್ನು ಹೊರಹಾಕಿದ ಭಾರತ; 24 ಗಂಟೆಯೊಳಗೆ ದೇಶ ತೊರೆಯಲು ಸೂಚನೆ

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭರ್ಜರಿ ಗೆಲುವಿನ ಸಾಧ್ಯತೆ…
ಬಿಜೆಪಿಯ ಭದ್ರಕೋಟೆಯಾಗಿರುವ ಉತ್ತರ ಪ್ರದೇಶದಲ್ಲಿ ಶೇ 50ರಷ್ಟು ಮತಗಳನ್ನು ಎನ್‌ಡಿಎ ಪಡೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. ಬಿಜೆಪಿ, ಸುಮಾರು 70 ಸೀಟುಗಳಲ್ಲಿ ಗೆಲುವು ಸಾಧಿಸಬಹುದು ಎಂದು ಸಮೀಕ್ಷೆಯು ತಿಳಿಸಿದೆ. ರಾಜಸ್ಥಾನದಲ್ಲಿ ಬಿಜೆಪಿ ಎಲ್ಲ 25 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಹಾಗೂ ಕಾಂಗ್ರೆಸ್‌ ಸಾಧನೆ ಶೂನ್ಯವಾಗಬಹುದು. ಅದೇ ರೀತಿ ಮಧ್ಯಪ್ರದೇಶಲ್ಲಿ 29 ಸ್ಥಾನಗಳಲ್ಲಿ ಬಿಜೆಪಿ 27 ರಲ್ಲಿ ಗೆಲ್ಲಬಹುದು ಹಾಗೂ ಕಾಂಗ್ರೆಸ್‌ 2ರಲ್ಲಿ ಜಯಗಳಿಸಬಹುದು. ಛತ್ತೀಸ್‌ಗಢದಲ್ಲಿಯೂ ಬಿಜಪೆಇ ಉತ್ತಮ ಸಾಧನೆ ತೋರಲಿದೆ. 11ರಲ್ಲಿ ಬಿಜೆಪಿ – 10 ಸ್ಥಾನಗಳನ್ನು ಗೆಲ್ಲಬಹುದು ಹಾಗೂ ಕಾಂಗ್ರೆಸ್‌ – 1 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಎಂದು ಮೂಡ್‌ ಆಫ್‌ ದಿ ನೇಶನ್‌ ಸಮೀಕ್ಷೆ ಹೇಳಿದೆ.

ದೆಹಲಿಯಲ್ಲಿ ಬಿಜೆಪಿ ಕಳೆದ ಲೋಕಸಭೆ ಚುನಾವಣೆಯಂತೆಯೇ 7ರಲ್ಲಿ 7 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಅದೇ ರೀತಿ ಬಿಹಾರದಲ್ಲಿ ಎನ್‌ಡಿಎ ಸೀಟುಗಳಲ್ಲಿ ಇಳಿಕೆ ಕಾಣುವ ಸಾಧ್ಯತೆಯಿದೆ ಆದರೂ ಅದು ೩೯ರಲ್ಲಿ ಸ್ಥಾನಗಳಲ್ಲಿ 32 ಸ್ಥಾನಗಳನ್ನು ಗೆಲ್ಲಬಹುದು‌, ಇಂಡಿಯಾ ಮೈತ್ರಿಕೂಟಗಳು 7ರಲ್ಲಿ ಜಯಗಳಿಸಬಹುದು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಮಹಾರಾಷ್ಟ್ರದಲ್ಲಿ 26 ಸ್ಥಾನಗಳನ್ನು ಗೆಲ್ಲಬಹುದಾಗಿದೆ. ಇದು 2019 ರ ಚುನಾವಣೆಗೆ ಹೋಲಿಸಿದರೆ 21-ಸೀಟುಗಳಲ್ಲಿ ಹೆಚ್ಚಳವಾಗಬಹುದು. ಇದೇ ವೇಳೆ ಕಳೆದ ಚುನಾವಣೆಯಲ್ಲಿ 41 ಸ್ಥಾನಗಳನ್ನು ಗೆದ್ದಿದ್ದ ಎನ್‌ಡಿಎ ಈ ಬಾರಿ 21 ಸೀಟುಗಳನ್ನು ಗೆಲ್ಲಬಹುದು ಎಂದು ಹೇಳಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸುವ ನಿರೀಕ್ಷೆಯಿದೆ, 19 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ತೃಣಮೂಲ ಕಾಂಗ್ರೆಸ್ 2024 ರ ಲೋಕಸಭೆ ಚುನಾವಣೆಯಲ್ಲಿಯೂ ಮತ್ತೊಮ್ಮೆ 22 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಪಶ್ಚಿಮ ಬಂಗಾಳ 42 ಲೋಕಸಭಾ ಸ್ಥಾನಗಳನ್ನು ಹೊಂದಿದೆ.

ಪ್ರಮುಖ ಸುದ್ದಿ :-   ದಕ್ಷಿಣ ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪಕ್ಕೆ ಮಾನ್ಸೂನ್‌ ಪ್ರವೇಶ ; ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement