ಫೇಸ್‌ಬುಕ್ ಲೈವ್‌ನಲ್ಲಿ ಶಿವಸೇನಾ ನಾಯಕನ ಹತ್ಯೆ ಮಾಡಲು ಖತರ್ನಾಕ್‌ ಸಂಚು ರೂಪಿಸಿದ್ದ ನೊರೊನ್ಹಾ ಕಾರ್ಯಗತಗೊಳಿಸಿದ್ದು ಹೇಗೆ..?

ಮುಂಬೈ : ಫೇಸ್‌ಬುಕ್ ಲೈವ್‌ನಲ್ಲಿ ಶಿವಸೇನೆಯ (ಯುಬಿಟಿ) ಯುವ ನಾಯಕನನ್ನು ಗುಂಡಿಕ್ಕಿ ಕೊಂದ ಮಾರಿಸ್ ನೊರೊನ್ಹಾ, ತನ್ನ ‘ಸೇಡು ತೀರಿಸಿಕೊಳ್ಳಲು’ ಕೆಲವು ಸಮಯದಿಂದ ಯೋಜನೆ ರೂಪಿಸಿದ್ದ ಎಂದು ವರದಿಯೊಂದು ತಿಳಿಸಿದೆ.
ಶಿವಸೇನಾ (UBT) ನಾಯಕನ ಮಗ ಅಭಿಷೇಕ ಘೋಸಲ್ಕರ್ ಅವರು ನೊರೊನ್ಹಾ ಯೋಜನೆ ಬಗ್ಗೆ ಬಹುಶಃ ಅನುಮಾನಿಸಲಿಲ್ಲ, ಏಕೆಂದರೆ ಅವರು ನೊರೊನ್ಹಾ ಅವರೊಂದಿಗಿನ ಭೇಟಿಯು ತಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಲು ಕಾರಣವಾಗಬಹುದು ಎಂದು ಘೋಸಲ್ಕರ್ ಯೋಚಿಸಿದ್ದರು ಎಂದು ಕಾಣುತ್ತದೆ.
ಮಾರಿಸ್ ‘ಭಾಯ್’ ಎಂದು ನೊರೊನ್ಹಾನನ್ನು ಕರೆಯಲಾಗುತ್ತಿತ್ತು, ಆತ ಪೋಕರ್ ಆಟಗಾರನಾಗಿದ್ದ, ಆತ ಕೋವಿಡ್‌-19 ಸಾಂಕ್ರಾಮಿಕ ಸಮಯದಲ್ಲಿ ಬಡವರಿಗೆ ಸಹಾಯ ಮಾಡಿದ್ದಕ್ಕಾಗಿ ಪ್ರಶಂಸೆ ಗಳಿಸಿದ್ದ. ತನ್ನ ಪರೋಪಕಾರಿ ಕೆಲಸಗಳಿಂದ ಜನಪ್ರಿಯನಾದ ನೊರೊನ್ಹಾ. ರಾಜಕೀಯದತ್ತ ಒಲವು ತೋರಿದ. ಆತ ಕಾರ್ಪೊರೇಟರ್ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ ನಂತರ ಅವರಿಗೆ ಶಿವಸೇನೆಯ ಈ ಯುವ ನಾಯಕನಿಂದ ವಿರೋಧ ವ್ಯಕ್ತವಾಗಿದ್ದು ಇಬ್ಬರ ಮಧ್ಯೆ ಫೇಸ್‌ಬುಕ್‌ ಲೈವ್‌ ಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ.

ಶಿವಸೇನಾ (ಯುಬಿಟಿ) ಮಾಜಿ ಶಾಸಕನ ಮಗ ಹಾಗೂ ಯುವ ನಾಯಕ ಮಗ ಅಭಿಷೇಕ ಘೋಸಲ್ಕರ್ ಅವರು ನೊರೊನ್ಹಾ ಬೃಹನ್‌ ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸುವುದನ್ನು ಸಾರ್ವಜನಿಕವಾಗಿ ವಿರೋಧಿಸಿದರು. ಇದರ ನಂತರ ನೊರೊನ್ಹಾ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ನೊರೊನ್ಹಾ ಐದು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ. ಕಾರ್ಪೊರೇಟರ್ ಸ್ಥಾನಕ್ಕೆ ಸ್ಪರ್ಧಿಸುವುದನ್ನು ತಪ್ಪಿಸಲು ಅತ್ಯಾಚಾರದ ಆರೋಪದ ಪ್ರಕರಣವನ್ನು ಘೋಸಲ್ಕರ್ ಹೆಣೆದಿದ್ದ ಎಂದು ನೊರೊನ್ಹಾ ಶಂಕಿಸಿದ್ದ.
ಅಂತಿಮವಾಗಿ, ಘೋಸಲ್ಕರ್ ಅವರ ವಿಶ್ವಾಸವನ್ನು ಗೆದ್ದು ಹತ್ಯೆ ಮಾಡುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನೊರೊನ್ಹಾ ಯೋಜನೆ ಸಿದ್ಧಪಡಿಸಿದ. ಕಾರ್ಪೊರೇಟರ್ ಚುನಾವಣೆಯಲ್ಲಿ ತನಗೆ ಆಸಕ್ತಿಯಿಲ್ಲ ಎಂಬ ಸಂದೇಶ ರವಾನಿಸಿ ಘೋಸಲ್ಕರ್ ಅವರನ್ನು ನಂಬಿಸಿದ್ದ. ಘೋಸಲ್ಕರ್ ಗತ್ಯೆಗೆ ನೊರೊನ್ಹಾ ವಿಸ್ತೃತ ಯೋಜನೆ ರೂಪಿಸಿದ.

ಪ್ರಮುಖ ಸುದ್ದಿ :-   'ಪ್ರಿಯಾಂಕಾ ಗಾಂಧಿ ವಿರುದ್ಧ ಪಕ್ಷದಲ್ಲೇ ದೊಡ್ಡ ಪಿತೂರಿ...ಜೂನ್ 4ರ ನಂತರ ಕಾಂಗ್ರೆಸ್ ಅಣ್ಣ-ತಂಗಿ ಬಣಗಳಾಗಿ ವಿಭಜನೆ' : ಕಾಂಗ್ರೆಸ್‌ ಮಾಜಿ ನಾಯಕನ ಸ್ಫೋಟಕ ಹೇಳಿಕೆ

ನೊರೊನ್ಹಾ ತನ್ನ ಯೋಜನೆಯ ಭಾಗವಾಗಿ ಘೋಸಲ್ಕರ್ ಅವರನ್ನು ಫೇಸ್‌ಬುಕ್ ಲೈವ್ ಸೆಷನ್‌ಗೆ ಆಹ್ವಾನಿಸಿದ್ದ. ಆಲಿವ್ ಶಾಖೆಯನ್ನು ವಿಸ್ತರಿಸುವ ಹಾಗೂ ತಾವಿಬ್ಬರು ಸ್ನೇಹಿತರಾಗಿದ್ದನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಹೇಳಿ ನಂಬಿಸಿ ಘೋಸಲ್ಕರ್ ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮಕ್ಕೆ ಬರುವಂತೆ ಮಾಡುವಲ್ಲಿ ನೊರೊನ್ಹಾ ಯಶಸ್ವಿಯಾಗಿದ್ದ.
ಕಾರ್ಪೋರೇಟರ್‌ ಅಭ್ಯರ್ಥಿಯಾಗಿ ಘೋಸಲ್ಕರ್ ಅವರನ್ನು ಬೆಂಬಲಿಸುತ್ತಿದ್ದಾನೆ ಬಿಂಬಿಸಲು ಘೋಸಲ್ಕರ್ ಅವರ ಬ್ಯಾನರ್‌ಗಳನ್ನು ಸಹ ಹಾಕಿದ್ದ.
ನೊರೊನ್ಹಾ ಯೋಜನೆಯ ಬಗ್ಗೆ ತಿಳಿಯದ ಘೋಸಲ್ಕರ್ ಫೇಸ್‌ಬುಕ್ ಲೈವ್ ಸೆಷನ್‌ ಗೆ ಬರಲು ಒಪ್ಪಿಕೊಂಡರು. ವೀಡಿಯೊದಲ್ಲಿ, ನೊರೊನ್ಹಾ ಎದ್ದು ಘೋಸಲ್ಕರ್‌ಗೆ ಗುಂಡು ಹಾರಿಸುವವರೆಗೂ ಇಬ್ಬರೂ ಸ್ನೇಹಪೂರ್ವಕವಾಗಿ ಮಾತನಾಡುತ್ತಿರುವುದು ಕಂಡುಬಂದಿದೆ. ಘೋಸಲ್ಕರ್ ಗೆ ಗುಂಡು ಹಾರಿಸಿದ ನಂತರ, ನೊರೊನ್ಹಾ ತನ್ನ ಕಚೇರಿಯ ಮಹಡಿಗೆ ಓಡಿ ಹೋಗಿ ತನ್ನ ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ. ನೊರೊನ್ಹಾ ಆರು ಸುತ್ತು ಗುಂಡು ಹಾರಿಸಿದ್ದು, ಅದರಲ್ಲಿ ಐದು ಘೋಸಲ್ಕರ್‌ಗೆ ತಾಗಿದೆ.

ವರದಿಗಳ ಪ್ರಕಾರ ನೊರೊನ್ಹಾ ಫೇಸ್‌ಬುಕ್ ಲೈವ್ ಆಯೋಜಿಸಿದ್ದ ಕೋಣೆಯಲ್ಲಿ ಮೊದಲು ಶೂಟ್ ಮಾಡಿಕೊಳ್ಳಲು ಪ್ರಯತ್ನಿಸಿದ ಆದರೆ ಗನ್‌ ಕೆಲಸ ಮಾಡಲಿಲ್ಲ. ಕೆಲವೇ ಸೆಕೆಂಡುಗಳಲ್ಲಿ, ಮತ್ತೊಂದು ಗುಂಡನ್ನು ಹ್ಯಾಂಡ್‌ಗನ್‌ನಲ್ಲಿ ತುಂಬಿಕೊಂಡು ಸ್ವತಃ ಗುಂಡು ಹಾರಿಸಿಕೊಂಡ.
ನೊರೊನ್ಹಾ ತಮ್ಮ ಅಂಗರಕ್ಷಕ ಅಮರೇಂದ್ರ ಮಿಶ್ರಾ ಅವರ ಗನ್ ಬಳಸಿದ್ದಾನೆ. ನೊರೊನ್ಹಾ ತನ್ನ ಪತಿಯನ್ನು ಬಾಡಿಗೆಗೆ ತೆಗೆದುಕೊಳ್ಳುವಾಗ ಪತಿಯ ಬಂದೂಕನ್ನು ಕಚೇರಿಯಲ್ಲಿ ಇಡುವಂತೆ ಕೇಳಿಕೊಂಡಿದ್ದ ಎಂದು ಅಂಗರಕ್ಷಕನ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ. ಮಿಶ್ರಾ ಅವರನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿದೆ, ವ್ಯಕ್ತಿಗೆ ಬಂದೂಕು ನೀಡಲು ಅನುಮತಿಸಲಾಗಿದೆಯೇ ಎಂದು ಪರಿಶೀಲಿಸದೆ ಯಾರಿಗಾದರೂ ಬಂದೂಕು ನೀಡಿದ ವಿಚಾರದಲ್ಲಿ ಅವರನ್ನು ಬಂಧಿಸಲಾಗಿದೆ.

ಪ್ರಮುಖ ಸುದ್ದಿ :-   ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ ಆರೋಪ : ಯುವಕನನ್ನು ಬಡಿದುಕೊಂದ ಭಕ್ತರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement