ಅಯೋಧ್ಯೆಯ ಈ ವಿಶಿಷ್ಟ ಬ್ಯಾಂಕಿನಲ್ಲಿ ಹಣವೇ ಇಲ್ಲ..! ಈ ಬ್ಯಾಂಕ್‌ ಖಾತೆಯಲ್ಲಿ ʼರಾಮನಾಮʼ ಜಪವೇ ಠೇವಣಿ..!! ಖಾತೆ ತೆರೆಯಬೇಕಾದ್ರೆ ಇರುವ ಷರತ್ತುಗಳೇನೆಂದರೆ…

ಅಯೋಧ್ಯೆ : ಭಗವಾನ್ ಶ್ರೀರಾಮನ ಭೂಮಿಯಾದ ಅಯೋಧ್ಯೆಯಲ್ಲಿ ಒಂದು ಅನನ್ಯ ಬ್ಯಾಂಕ್ ಇದೆ, ಅಲ್ಲಿ ಹಣ ಮುಖ್ಯವಲ್ಲ. ಆ ಬ್ಯಾಂಕಿನ 35,000 ಖಾತೆದಾರರು ಪಡೆಯುವ ಏಕೈಕ ಪ್ರತಿಫಲವೆಂದರೆ ಮನಸ್ಸಿನ ಶಾಂತಿ, ನಂಬಿಕೆ ಮತ್ತು ಅಧ್ಯಾತ್ಮಿಕತೆ…!
ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಮಂದಿರಕ್ಕೆ ಭೇಟಿ ನೀಡುವ ಭಕ್ತರು ಮತ್ತು ಪ್ರವಾಸಿಗರ ಗಮನವನ್ನು ಈಗ ಈ ಬ್ಯಾಂಕ್‌ ಸೆಳೆಯುತ್ತಿದೆ. ಇಲ್ಲಿರುವ ಠೇವಣಿಗಳು ಎಲ್ಲ ಪುಟಗಳಲ್ಲಿ “ಸೀತಾರಾಮ” ಎಂದು ಬರೆದಿರುವ ಕಿರುಪುಸ್ತಕಗಳಾಗಿವೆ.
ಭಕ್ತರ ಗಮನವನ್ನು ಸೆಳೆಯುತ್ತಿರುವ ಈ ಬ್ಯಾಂಕ್‌ ಹೆಸರು ‘ಅಂತಾರಾಷ್ಟ್ರೀಯ ಶ್ರೀ ಸೀತಾರಾಮ ಬ್ಯಾಂಕ್’ (International Shree Sitaram Bank). ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥರಾದ ಮಹಂತ ನೃತ್ಯ ಗೋಪಾಲ ದಾಸ್ ಅವರು ಈ ಬ್ಯಾಂಕ್‌ ಅನ್ನು ನವೆಂಬರ್ 1970ರಲ್ಲಿ ಸ್ಥಾಪಿಸಿದರು, ಈ ಬ್ಯಾಂಕ್ ಪ್ರಪಂಚದಾದ್ಯಂತ 35,000 ಕ್ಕೂ ಹೆಚ್ಚು ಖಾತೆದಾರರನ್ನು ಹೊಂದಿದೆ, ಖಾತೆದಾರರು “ಸೀತಾರಾಮ” ಎಂಬ ದೈವಿಕ ನಾಮವನ್ನು ಪ್ರತಿ ಪುಟದಲ್ಲಿ ಬರೆದಿರುವ ಪುಸ್ತಕಗಳನ್ನು ಈ ಬ್ಯಾಂಕಿನಲ್ಲಿ ಠೇವಣಿ ಇಡುತ್ತಾರೆ.

‘ಅಂತಾರಾಷ್ಟ್ರೀಯ ಶ್ರೀ ಸೀತಾರಾಮ ಬ್ಯಾಂಕ್’ ಭಾರತ ಮಾತ್ರವಲ್ಲದೆ, ಅಮೆರಿಕ, ಬ್ರಿಟನ್‌, ಕೆನಡಾ, ನೇಪಾಳ, ಫಿಜಿ, ಯುಎಇ ಮತ್ತು ಇತರ ದೇಶಗಳು ಸೇರಿದಂತೆ 35,000ದಷ್ಟು ಖಾತೆದಾರರನ್ನು ಹೊಂದಿದೆ. ಈ ಬ್ಯಾಂಕ್ ರಾಮನ ಭಕ್ತರಿಂದ 20,000 ಕೋಟಿ ‘ಸೀತಾರಾಮ’ ಕಿರುಪುಸ್ತಕಗಳ ಸಂಗ್ರಹವನ್ನು ಹೊಂದಿದೆ.
‘ಅಂತಾರಾಷ್ಟ್ರೀಯ ಶ್ರೀ ಸೀತಾರಾಮ ಬ್ಯಾಂಕ್’ ಮ್ಯಾನೇಜರ್ ಪುನೀತರಾಮ ದಾಸ್‌ ಮಹಾರಾಜ್ ಅವರ ಪ್ರಕಾರ, ಕಳೆದ ತಿಂಗಳು ನಡೆದ ಭವ್ಯ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ನಂತರ ಬ್ಯಾಂಕ್‌ಗೆ ಪ್ರತಿನಿತ್ಯ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. “ಈ ಬ್ಯಾಂಕ್, ಭಕ್ತರಿಗೆ ಉಚಿತ ಬುಕ್‌ಲೆಟ್‌ಗಳು ಮತ್ತು ಕೆಂಪು ಶಾಯಿಯ ಪೆನ್ನುಗಳನ್ನು ನೀಡುತ್ತದೆ ಮತ್ತು ಪ್ರತಿ ಖಾತೆಯ ಬಗ್ಗೆ ನಿಗಾ ಇಡುತ್ತದೆ. ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಕನಿಷ್ಠ 5 ಲಕ್ಷ ಬಾರಿ ‘ಸೀತಾರಾಮ’ ಎಂದು ಬರೆಯಬೇಕು ಮತ್ತು ನಂತರ ಪಾಸ್‌ಬುಕ್ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಭಾರತದಾದ್ಯಂತ ಮತ್ತು ವಿದೇಶಗಳು ಸೇರಿ ಈ ಬ್ಯಾಂಕಿನ 136 ಶಾಖೆಗಳಿವೆ. ಖಾತೆದಾರರು ನಮಗೆ ಬುಕ್‌ಲೆಟ್‌ಗಳನ್ನು ಅಂಚೆ ಮೂಲಕ ಕಳುಹಿಸುತ್ತಾರೆ ಮತ್ತು ನಾವು ಲೆಡ್ಜರ್ ಅನ್ನು ಇಲ್ಲಿ ನಿರ್ವಹಿಸುತ್ತೇವೆ” ಎಂದು ಪುನೀತರಾಮ ದಾಸ್‌ ತಿಳಿಸಿದ್ದಾರೆ. ಭೇಟಿ ನೀಡುವವರು ಸೀತಾರಾಮ ಎಂದು ಬರೆದು ಅದನ್ನು ಬ್ಯಾಂಕ್‌ಗೆ ಠೇವಣಿ ಮಾಡುವುದರ ಪ್ರಯೋಜನಗಳ ಬಗ್ಗೆ ಸಹ ಪ್ರಶ್ನಿಸುತ್ತಾರೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಕೇವಲ ಒಂದೇ ಒಂದು ಸುಳಿವಿನಿಂದ 22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾಂಟೆಡ್ ಸಿಮಿ ಉಗ್ರನ ಬಂಧಿಸಿದ ಪೊಲೀಸರು...!

ಅಧ್ಯಾತ್ಮ, ಆಂತರಿಕ ಶಾಂತಿ, ನಂಬಿಕೆ ಮತ್ತು ಪುಣ್ಯಕ್ಕಾಗಿ ನಾವು ದೇವಾಲಯಗಳಿಗೆ ಹೇಗೆ ಭೇಟಿ ನೀಡುತ್ತೇವೆಯೋ ಅದೇ ರೀತಿಯಲ್ಲಿ ‘ಸೀತಾರಾಮ’ ಎಂದು ಬರೆದು ಅದನ್ನು ಬ್ಯಾಂಕಿಗೆ ಜಮಾ ಮಾಡುವುದು ಪ್ರಾರ್ಥನೆಯ ರೂಪವಾಗಿದೆ ಎಂದು ನಾನು ಅವರಿಗೆ ಹೇಳುತ್ತೇನೆ. ಪ್ರತಿಯೊಬ್ಬರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಬಗ್ಗೆ ದೇವರು ತನ್ನದೇ ಆದ ಖಾತೆಯಲ್ಲಿ ದಾಖಲಿಸುತ್ತಾನೆ ಎಂದು ನಾವು ಹೇಳುವುದಿಲ್ಲವೇ..? ಹಾಗೆಯೇ, ಇದು ಸಹ ಅದೇ ರೀತಿಯದ್ದಾಗಿದೆ. ಭಕ್ತರು ಭಗವಾನ್ ರಾಮನ ಹೆಸರನ್ನು ಬರೆಯವುದು, ಪಠಣ ಮಾಡುವುದು ಮತ್ತು ನೆನಪಿಸಿಕೊಳ್ಳುವುದರಲ್ಲಿ ಸಾಂತ್ವನ ಮತ್ತು ಆಳವಾದ ಅಧ್ಯಾತ್ಮಿಕ ಭಾವವನ್ನು ಕಂಡುಕೊಳ್ಳುತ್ತಾರೆ” ಎಂದು ಅವರು ಹೇಳಿದರು. 84 ಲಕ್ಷ ಬಾರಿ ರಾಮನಾಮ ಬರೆದರೆ ‘ಮೋಕ್ಷ’ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ ಎಂದು ಪುನೀತರಾಮ ದಾಸ ಹೇಳಿದ್ದಾರೆ.

14 ವರ್ಷಗಳಿಂದ ಬ್ಯಾಂಕ್‌ಗೆ ಭೇಟಿ ನೀಡುತ್ತಿರುವ ಬಿಹಾರದ ಗಯಾದ ಜೀತು ನಗರ್ ಅವರು, ಇದು ತಮ್ಮರ ಪ್ರಾರ್ಥನೆಯ ಏಕೈಕ ರೂಪವಾಗಿದೆ ಎಂದು ಹೇಳಿದ್ದಾರೆ. ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುವ ಬದಲು, ನಾನು ಇದನ್ನು ಬರೆಯುತ್ತೇನೆ ಮತ್ತು ನನಗೆ ಕುಗ್ಗಿದ್ದೇನೆ ಎಂದು ಭಾವಿಸಿದಾಗ ಅಥವಾ ತೊಂದರೆಗೆ ಒಳಗಾದಾಗ ಅದು ಯಾವಾಗಲೂ ನನಗೆ ಸಹಾಯ ಮಾಡುತ್ತದೆ. ನಾನು ಅದನ್ನು ವರ್ಷವಿಡೀ ಬರೆಯುತ್ತೇನೆ ಮತ್ತು ವರ್ಷಕ್ಕೊಮ್ಮೆ ಬ್ಯಾಂಕಿನಲ್ಲಿ ಠೇವಣಿ ಇಡುತ್ತೇನೆ. ಅಂಚೆಯ ಮೂಲಕ ಕಳುಹಿಸುವ ಆಯ್ಕೆಯೂ ಇದೆ. ಆದರೆ ನಾನೇ ಸ್ವತಃ ಭೇಟಿ ಮಾಡಲು ಬಯಸುತ್ತೇನೆ ಎಂದು ಅವರು ಹೇಳಿದರು. ಜೀತು ನಾಗರ್ ಅವರು ಈಗಾಗಲೇ 1.37 ಕೋಟಿಗಿಂತ ಹೆಚ್ಚು ಬಾರಿ ಸೀತಾರಾಮ ಎಂದು ಬರೆದು ಅದನ್ನು ಬ್ಯಾಂಕಿಗೆ ಠೇವಣಿ ಮಾಡಿದ್ದೇನೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ವಿಜಯಶೇಖರ ಶರ್ಮಾ

ಉತ್ತರ ಪ್ರದೇಶದ ಬರೇಲಿಯ ಮತ್ತೊಬ್ಬ ಖಾತೆದಾರರಾದ ಸುಮನ್ ದಾಸ ಅವರು ‘ಸೀತಾರಾಮ’ ಎಂದು 25 ಲಕ್ಷ ಬಾರಿ ಬರೆದಿದ್ದಾರೆ. “ನಾನು ನನ್ನ ನೆರೆಹೊರೆಯವರಿಗೆ ಸೀತಾರಾಮ ಬ್ಯಾಂಕಿನ ಬಗ್ಗೆ ಹೇಳಿದಾಗ, ನಾನು ಹುಚ್ಚನಾಗಿರಬೇಕು ಎಂದು ಅವರು ಭಾವಿಸಿದ್ದರು ಆದರೆ ನನಗೆ ಬಲವಾದ ನಂಬಿಕೆ ಇದೆ. ನಾನು ಬರೆಯುವಾಗ, ನಾನು ನೆಮ್ಮದಿಯ ಭಾವನೆ ಹೊಂದಿರುತ್ತೇನೆ ಮತ್ತು ನನ್ನ ಪ್ರಾರ್ಥನೆಗಳು ಕೇಳುತ್ತಿವೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.
ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಪ್ರಾಣಪ್ರತಿಷ್ಠೆ ಸಮಾರಂಭದಲ್ಲಿ ಭಗವಾನ್ ರಾಮನ ನೂತ ವಿಗ್ರಹವನ್ನು ದಿವ್ಯ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement