ಮುಂಬೈ: ರಣಜಿ ಟ್ರೋಫಿಯ ಡಿ ಗುಂಪಿನ ಪಂದ್ಯದಲ್ಲಿ ಬರೋಡಾ ವಿರುದ್ಧ ಮಧ್ಯಪ್ರದೇಶದ ವೇಗದ ಬೌಲರ್ ಕುಲ್ವಂತ ಖೆಜ್ರೋಲಿಯಾ ಅವರು ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ.
ಈ ದಾಖಲೆ ಬರೆದ ಮೂರನೇ ಬೌಲರ್ ಆದ ಕುಲ್ವಂತ ಖೆಜ್ರೋಲಿಯಾ ಅವರು ಬರೋಡಾದ ಎರಡನೇ ಇನಿಂಗ್ಸ್‌ನಲ್ಲಿ 95ನೇ ಓವರಿನ ಎರಡನೇ, ಮೂರನೇ, ನಾಲ್ಕನೇ ಮತ್ತು ಐದನೇ ಎಸೆತಗಳಲ್ಲಿ ಶಾಶ್ವತ ರಾವತ್, ಮಹೇಶ ಪಿಥಿಯಾ, ಭಾರ್ಗವ ಭಟ್ ಮತ್ತು ಆಕಾಶ ಸಿಂಗ್ ಅವರ ವಿಕೆಟ್ ಪಡೆದರು. ನಂತರ ಮಧ್ಯಪ್ರದೇಶ ಬರೋಡಾಗೆ ಫಾಲೋ-ಆನ್ ನೀಡಿತು.
ಕುಲ್ವಂತ ಖೆಜ್ರೋಲಿಯಾ ಅವರು ರಣಜಿ ಟ್ರೋಫಿ ಇತಿಹಾಸದಲ್ಲಿ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ದೆಹಲಿಯ ಶಂಕರ ಸೈನಿ ಮತ್ತು ಜಮ್ಮು ಕಾಶ್ಮೀರದ ಮೊಹಮ್ಮದ್ ಮುಧಾಸಿರ್ ಈ ಸಾಧನೆ ಮಾಡಿದ್ದರು. ಇದಲ್ಲದೇ ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶ ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ರಣಜಿ ಟ್ರೋಫಿಯಲ್ಲಿ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದ ಬೌಲರ್ಗಳು: * ಶಂಕರ್ ಸೈನಿ – (ದೆಹಲಿ ವರ್ಸಸ್ ಹಿಮಾಚಲ ಪ್ರದೇಶ), 1988 * ಮೊಹಮ್ಮದ್ ಮುಧಾಸಿರ್ – (ಜಮ್ಮು ಕಾಶ್ಮೀರ ವರ್ಸಸ್ ರಾಜಸ್ಥಾನ), 2018 * ಕುಲ್ವಂತ ಖೆಜ್ರೋಲಿಯಾ – (ಮಧ್ಯಪ್ರದೇಶ ವರ್ಸಸ್ ಬರೋಡಾ), 2024
ನಿಮ್ಮ ಕಾಮೆಂಟ್ ಬರೆಯಿರಿ