ಮಧ್ಯಪ್ರದೇಶದ ದಾಮೋಹ್ನಲ್ಲಿ 29 ವರ್ಷದ ವ್ಯಕ್ತಿಯೊಬ್ಬ ತಾನು ಮದುವೆಯಾಗಲು ವಧುವನ್ನು ಹುಡುಕಲು ವಿಶಿಷ್ಟ ವಿಧಾನವನ್ನು ಅನುಸರಿಸಿದ್ದಾರೆ. ಅವರು ತಮ್ಮ ಉದ್ದೇಶ ಮತ್ತು ವೈಯಕ್ತಿಕ ವಿವರಗಳನ್ನು ಹೋರ್ಡಿಂಗ್ನಲ್ಲಿ ಪ್ರಕಟಿಸಿ ಅದನ್ನು ಇ-ರಿಕ್ಷಾದಲ್ಲಿ ಲಗತ್ತಿಸಿದ್ದಾರೆ.
ದೀಪೇಂದ್ರ ರಾಥೋಡ ಎಂಬ ವ್ಯಕ್ತಿ ತಾವು ಮದುವೆಯಾಗಲು ಹುಡುಗಿ ಹುಡುಕುವುದಕ್ಕಾಗಿ ಈ ವಿಸಿಷ್ಟ ವಿಧಾನವನ್ನು ಅನುಸರಿಸಿದ್ದಾರೆ. ಅವರು ತಾವು ಮದುವೆಯಾಗಲು ಬಯಸುತ್ತಿರುವುದಾಗಿ ಹೇಳಿದ್ದಾರೆ, ಆದರೆ “ಹುಡುಗಿಯರ ಕೊರತೆ” ಯಿಂದ ಇದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಜಾತಿ ಅಥವಾ ಧರ್ಮ ತನಗೆ ಸಮಸ್ಯೆಯಲ್ಲ ಮತ್ತು ಯಾವುದೇ ಮಹಿಳೆ ಮದುವೆಯ ಪ್ರಸ್ತಾಪದೊಂದಿಗೆ ತನ್ನನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದ್ದಾರೆ.
ರಾಥೋಡ ಅವರು ವಧುವನ್ನು ಹುಡುಕಲು ‘ಮ್ಯಾರೇಜ್ ಗ್ರುಪ್’ ಸೇರಿದ್ದಾರೆ ಆದರೆ ಅವರಿಗೆ ವಧುವನ್ನು ಹುಡುಕಲಾಗಲಿಲ್ಲ. ನಂತರ, ಅವರು ಈ ಬಗ್ಗೆ ತಾವೇ ನಿರ್ಧಾರ ತೆಗೆದುಕೊಂಡರು ಮತ್ತು ವಧು ಬೇಕಾಗಿದ್ದಾಳೆಂದು ಇ-ರಿಕ್ಷಾದಲ್ಲಿ ತಮ್ಮ ವಿವರಗಳುಳ್ಳ ಹೋರ್ಡಿಂಗ್ ಅನ್ನು ಹಾಕಿದರು.
ಹೋರ್ಡಿಂಗ್ನಲ್ಲಿ ದೀಪೇಂದ್ರ ರಾಥೋಡ್ ಅವರ ಎತ್ತರ, ಜನ್ಮ ದಿನಾಂಕ ಮತ್ತು ಸಮಯ, ರಕ್ತದ ಗುಂಪು, ಶೈಕ್ಷಣಿಕ ಅರ್ಹತೆಗಳು, ‘ಗೋತ್ರ’ ಇತ್ಯಾದಿ ವಿವರಗಳಿವೆ. ದೀಪೇಂದ್ರ ರಾಥೋಡ ಅವರ ಪೋಷಕರು ಸಹ ಅವರ ಈ ವಿಶಿಷ್ಟ ವಿಧಾನವನ್ನು ಬೆಂಬಲಿಸಿದ್ದಾರೆ ಎಂದು ಅವರು ಹೇಳಿದರು.
ರಾಥೋಡ ಅವರು ಪ್ರಸ್ತುತ ತಮ್ಮದೇ ಇ-ರಿಕ್ಷಾವನ್ನು ಓಡಿಸುವ ಮೂಲಕ ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಅವರು ತಮ್ಮ ಜೀವನ ಸಂಗಾತಿಯಾಗುವವರನ್ನು ಯಾವಾಗಲೂ ಸಂತೋಷವಾಗಿ ಇರಿಸುವುದಾಗಿ ಹೇಳುತ್ತಾರೆ.


ನಿಮ್ಮ ಕಾಮೆಂಟ್ ಬರೆಯಿರಿ