ವೀಡಿಯೊ..| ಸ್ಕ್ರ್ಯಾಪ್‌ ಬಸ್ ಅನ್ನು ಹೈಫೈ ಮೊಬೈಲ್ ಕ್ಯಾಂಟೀನ್ ಆಗಿ ಪರಿವರ್ತಿಸಿದ ಬಿಎಂಟಿಸಿ…!

ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಇತ್ತೀಚೆಗೆ ಸ್ಕ್ರ್ಯಾಪ್ ಮಾಡಿದ ಬಸ್ಸನ್ನು ವಿನೂತನವಾಗಿ ರೂಪಾಂತರಗೊಳಿಸಿದ್ದು, ಅದನ್ನು ಹೈಪೈ ಮೊಬೈಲ್‌ ಕ್ಯಾಂಟೀನ್‌ ಆಗಿ ಪರಿವರ್ತಿಸುವ ಮೂಲಕ ಗಮನ ಸೆಳೆದಿದೆ.
ಸ್ಕ್ರ್ಯಾಪ್‌ ವಾಹನವನ್ನು ತನ್ನ ಕೆಲವು ಉದ್ಯೋಗಿಗಳಿಗಾಗಿ ಅದು ಮೊಬೈಲ್ ಕ್ಯಾಂಟೀನ್ ಆಗಿ ಪರಿವರ್ತಿಸಿದೆ. ಈ ಉಪಕ್ರಮವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಗಮನ ಸೆಳೆಯಲು ಕಾರಣವಾಯಿತು. ಮತ್ತು ತನ್ನ ಸಿಬ್ಬಂದಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಲಭ್ಯವಾಗುವಂತೆ ಮಾಡುವ ಬಿಎಂಟಿಸಿಯ ಪ್ರಯತ್ನವನ್ನು ಕೆಲವರು ಶ್ಲಾಘಿಸಿದ್ದಾರೆ. ಬಿಎಂಟಿಸಿ (BMTC)ಯಿಂದ X ನಲ್ಲಿ ಹಂಚಿಕೊಂಡ ವೀಡಿಯೊವು ಸ್ಕ್ರ್ಯಾಪ್‌ ಬಸ್‌ ಅನ್ನು ಬಿಎಂಟಿಸಿ ಹೇಗೆ ಮೊಬೈಲ್‌ ಕ್ಯಾಂಟೀನ್‌ ಆಗಿ ಪರಿವರ್ತಿಸಿದೆ ಎಂಬುದನ್ನು ತೋರಿಸುತ್ತದೆ.

ಕ್ಯಾಂಟೀನ್‌ ಆಗಿ ಪರಿವರ್ತಿಸಲು ಬಸ್ಸಿನ ಹಿಂಭಾಗವನ್ನು ಸಂಪೂರ್ಣವಾಗಿ ಓಪನ್‌ ಮಾಡಲಾಗಿದೆ. ಬಸ್ಸಿನ ಮಧ್ಯದಲ್ಲಿ ಉದ್ದನೆಯ ಟೇಬಲ್ ಅಳವಡಿಸಲಾಗಿದೆ. ಟೇಬಲ್‌ನ ಎರಡೂ ಬದಿಗಳಲ್ಲಿ ಕುರ್ಚಿಗಳಂತೆ ಬಸ್ಸಿನ ಆಸನಗಳನ್ನು ಜೋಡಿಸಲಾಗಿದೆ.ವಾಹನದೊಳಗೆ ಸಣ್ಣ ವಾಶ್ ಬೇಸಿನ್ ಮತ್ತು ಕನ್ನಡಿ ಕೂಡ ಇದೆ. ಬಸ್ಸಿನ ಛಾವಣಿಯ ಮೇಲೆ ಸಣ್ಣ ಸ್ಕೈಲೈಟ್ ಇದೆ, ಇದು ಹಗಲಿನಲ್ಲಿ ನೈಸರ್ಗಿಕ ಬೆಳಕು ಬಸ್ಸಿನೊಳಗೆ ಬರಲು ಅವಕಾಶ ನೀಡುತ್ತದೆ. ಬಿಎಂಟಿಸಿ (BMTC) ಎಕ್ಸ್‌ನಲ್ಲಿ ಪೋಸ್ಟ್‌ನ ಶೀರ್ಷಿಕೆಯಲ್ಲಿ, ಸ್ಕ್ರ್ಯಾಪ್ ವಾಹನದಿಂದ ಮೊಬೈಲ್ ಕ್ಯಾಂಟೀನ್‌ಗೆ, ರೂಪಾಂತರದ ಮಾಂತ್ರಿಕತೆಗೆ ಸಾಕ್ಷಿಯಾಗಿ ನಮ್ಮ ನುರಿತ ತಾಂತ್ರಿಕ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ಉತ್ಸಾಹ ಮತ್ತು ಹೆಮ್ಮೆಯಿಂದ ರಚಿಸಲಾಗಿದೆ. ನಾವು ನಾವೀನ್ಯತೆಯನ್ನು ಆಚರಿಸೋಣ ಮತ್ತು ಪಾಕಶಾಲೆಯಲ್ಲಿ ತೊಡಗಿಸಿಕೊಳ್ಳೋಣ ಎಂದು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ʼಕನ್ನಡತಿʼ ಧಾರಾವಾಹಿಯ ನಟ ಕಿರಣ ರಾಜ್‌ ಕಾರು ಅಪಘಾತ

ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿಯೂ ಹಂಚಿಕೊಂಡಿದ್ದಾರೆ. ಇದು ಆನ್‌ಲೈನ್‌ನಲ್ಲಿ ಅನೇಕರ ಗಮನ ಸೆಳೆದಿದೆ.
ಸಂಚಾರಿ ಕ್ಯಾಂಟೀನ್ ಹೆಚ್ಚಾಗಿ ಪೀಣ್ಯ ಮತ್ತು ಯಶವಂತಪುರ ಡಿಪೋಗಳಲ್ಲಿ ಕಾರ್ಯಾರಂಭ ಮಾಡಲಿದೆ. ಸ್ಕ್ರ್ಯಾಪಿಗೆ ಹೋಗುವ ಬಸ್ 10,64,298 ಕಿಮೀ ಪ್ರಯಾಣಿಸಿದೆ ಎಂದು ವರದಿಗಳು ಬಹಿರಂಗಪಡಿಸಿವೆ. ಕ್ಯಾಂಟೀನ್-ಆನ್-ವೀಲ್ಸ್ ರೂಪದಲ್ಲಿ ಅದಕ್ಕೆ ಹೊಸ ರೂಪ ನೀಡುವ ಯೋಜನೆಗೆ ನಾಲ್ವರು ಬಿಎಂಟಿಸಿ ಉದ್ಯೋಗಿಗಳ ನೇತೃತ್ವ ತಂಡದಿಂದ ಆಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement