ರಾಜ್ಯಸಭೆ ಚುನಾವಣೆ : ಕಾಂಗ್ರೆಸ್‌ ಶಾಸಕರ ಅಡ್ಡಮತದಾನ, ಹಿಮಾಚಲದಲ್ಲಿ ಅಭಿಷೇಕ ಮನು ಸಿಂಘ್ವಿಗೆ ಸೋಲು

ಶಿಮ್ಲಾ: ಹಿಮಾಚಲ ಪ್ರದೇಶದ ಏಕೈಕ ರಾಜ್ಯಸಭಾ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್ ಮಂಗಳವಾರ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವರನ್ನು ಸೋಲಿಸಿದ್ದಾರೆ..! ಮತ ಎಣಿಕೆಯ ವೇಳೆ ಇಬ್ಬರು ಅಭ್ಯರ್ಥಿಗಳು ತಲಾ 34-34 ಮತಗಳನ್ನು ಪಡೆದ ನಂತರ ಸಮನಾದ ಟಾಸ್‌ ಮಾಡುವ ಮೂಲಕ ವಿಜೇತರನ್ನು ನಿರ್ಧರಿಸಲಾಯಿತು.
68 ಸದಸ್ಯ ಬಲದ ಹಿಮಾಚಲ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ 40 ಶಾಸಕರಿದ್ದಾರೆ ಮತ್ತು ಮೂವರು ಸ್ವತಂತ್ರ ಶಾಸಕರ ಬೆಭಲಿವಿದೆ. ಆದರೆ ಕಾಂಗ್ರೆಸ್ಸಿನ ಒಂಬತ್ತು ಶಾಸಕರು ಅಡ್ಡ ಮತದಾನ ಮಾಡಿದ ನಂತರ ಕಾಂಗ್ರೆಸ್‌ನ ಪ್ರಮುಖ ನಾಯಕ ಅಭಿಷೇಕ ಮನು ಸಿಂಘ್ವಿ ಸೋಲುಣ್ಣಬೇಕಾಯಿತು.

ಮಂಗಳವಾರ ಮುಂಜಾನೆ, ರಾಜ್ಯಸಭಾ ಚುನಾವಣೆಯ ಮತದಾನ ಮುಗಿದ ನಂತರ, ಹರಿಯಾಣ ಪೊಲೀಸರು ಮತ್ತು ಸಿಆರ್‌ಪಿಎಫ್ ಬೆಂಗಾವಲು ಪಡೆಯೊಂದಿಗೆಐದು-ಆರು ಕಾಂಗ್ರೆಸ್ ಶಾಸಕರನ್ನು ಪಂಚಕುಲಕ್ಕೆ ಕರೆದೊಯ್ಯಲಾಯಿತು ಎಂದು ಹಿಮಾಚಲದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಆರೋಪಿಸಿದರು.
ಏತನ್ಮಧ್ಯೆ, ಪ್ರತಿಪಕ್ಷದ ನಾಯಕ ಜೈ ರಾಮ ಠಾಕೂರ್ ಅವರು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು “ಶಾಸಕರು ಕೇವಲ ಒಂದು ವರ್ಷದೊಳಗೆ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರನ್ನು ತೊರೆದಿದ್ದಾರೆ. ಹೀಗಾಗಿ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. 2022ರ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ ಅಧಿಕಾರದ ಗದ್ದುಗೆ ಹಿಡಿದಿತ್ತು.
ಹಿಮಾಚಲದಲ್ಲಿ ಬಿಜೆಪಿಯ ಹರ್ಷ ಮಹಾಜನ್ ಗೆಲುವಿನಿಂದ ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಿದೆ. ಯಾಕೆಂದರೆ 40 ಶಾಸಕರ ಬಹುಮತದ ಬೆಂಬಲವಿದ್ದರೂ ಕಾಂಗ್ರೆಸ್‌ ಅಡ್ಡಮತದಾನದ ಪರಿಣಾಮ ಕಾಂಗ್ರೆಸ್‌ ಸೋತಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಮತದಾನದ ವೇಳೆ ಮತಗಟ್ಟೆಯಲ್ಲಿನ ವಿವಿಪ್ಯಾಟ್‌ ಯಂತ್ರವನ್ನು ನೆಲಕ್ಕೆ ಅಪ್ಪಳಿಸಿ ಧ್ವಂಸ ಮಾಡಿದ ಶಾಸಕ...!

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement