ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ರಾಜ್ಯದ ಜನತೆಗೆ ಸಿಹಿ ಸುದ್ದಿ: ವಿದ್ಯುತ್ ದರದಲ್ಲಿ ಭಾರೀ ಇಳಿಕೆ ಮಾಡಿದ ಸರ್ಕಾರ ; ಎಷ್ಟು ಗೊತ್ತೆ..?

ಬೆಂಗಳೂರು : ಲೋಕಸಭೆ ಚುನಾವಣೆ ಬೆನ್ನಲ್ಲೇ ವಿದ್ಯುತ್ ಬಳಕೆದಾರರಿಗೆ ರಾಜ್ಯ ಸರ್ಕಾರ ವಿದ್ಯುತ್ ದರ ಇಳಿಕೆ ಮಾಡಿ ಸಿಹಿ ಸುದ್ದಿ ನೀಡಿದೆ. ವಿದ್ಯುತ್‌ ದರ ಪರಿಷ್ಕರಣೆ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ವಿದ್ಯುತ್ ದರ ಇಳಿಕೆ ಮಾಡಿ ಬುಧವಾರ ಆದೇಶ ಹೊರಡಿಸಿದೆ.
ಎಲ್‌.ಟಿ.ಗೃಹ ಬಳಕೆ ಸಂಪರ್ಕ ಹೊಂದಿದ ಹಾಗೂ100 ಯೂನಿಟ್​ಗಿಂತ ಹೆಚ್ಚು ಬಳಸುವವರಿಗೆ ಪ್ರತಿ ಯೂನಿಟ್ ಮೇಲೆ 1.10 ರೂ.ಗಳಷ್ಟು ಇಳಿಕೆ ಮಾಡಲಾಗಿದೆ ಹಾಗೂ ವಾಣಿಜ್ಯ ಬಳಕೆದಾರರಿಗೆ 1.25 ರೂ.ಗಳಷ್ಟು ಇಳಿಕೆ ಮಾಡಲಾಗಿದೆ. ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪ್ರತಿ ಯೂನಿಟ್​ಗೆ 40 ಪೈಸೆ ಕಡಿತ ಮಾಡಲಾಗಿದ್ದು, ಖಾಸಗಿ ಏತ ನೀರಾವರಿ ಬಳಕೆದಾರರಿಗೆ 2 ರೂಪಾಯಿ ಇಳಿಕೆ ಮಾಡಲಾಗಿದೆ. 100 ಯೂನಿಟ್​ಗಿಂತ ಹೆಚ್ಚು ಬಳಸುವವರಿಗೆ ಮಾತ್ರ ಹೊಸ ದರ ಮಾರ್ಚ್​ 1ರಿಂದಲೇ ಅನ್ವಯವಾಗಲಿದೆ.
ಎಲ್‌.ಟಿ.ಗೃಹ ಬಳಕೆ ಸಂಪರ್ಕ: 100 ಯೂನಿಟ್‌ಗಳಿಗಿಂತ ಹೆಚ್ಚಿನ ಬಳಕೆಗಾಗಿ ಪ್ರತಿ ಯೂನಿಟ್‌ಗೆ 1.10 ರೂ.ಗಳಷ್ಟು ವಿದ್ಯುತ್ ಶುಲ್ಕ ಕಡಿತ
ಎಚ್‌.ಟಿ.ವಾಣಿಜ್ಯ ಸಂಪರ್ಕ: ಪ್ರತಿ ಯೂನಿಟ್‌ಗೆ 1.25 ರೂ.ಗಳಷ್ಟು ಇಳಿಕೆ ಮಾಡಲಾಗಿದೆ. ಅಂದರೆ ಪ್ರತಿ ಕಿಲೋವೋಲ್ಟ್‌ ಆಂಪಿಯರ್‌ (ಕೆವಿಎ)ಗೆ 10 ರೂ. ಕಡಿಮೆಯಾಗುತ್ತದೆ.
ಎಚ್‌.ಟಿ. ಕೈಗಾರಿಕೆ : ಪ್ರತಿ ಯೂನಿಟ್‌ಗೆ 50 ಪೈಸೆಗಳಷ್ಟು ಕಡಿಮೆ ಮಾಡಲಾಗಿದೆ. ಪ್ರತಿ ಕೆವಿಎಗೆ 10 ರೂ. ಕಡಿಮೆ
ಎಚ್‌ಟಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು : ಪ್ರತಿ ಯೂನಿಟ್‌ಗೆ 40 ಪೈಸೆ ಇಳಿಕೆ ಮಾಡಲಾಗಿದೆ. ಪ್ರತಿ ಕೆವಿಎಗೆ 10 ರೂ. ಕಡಿಮೆ
ಎಚ್‌.ಟಿ.ಖಾಸಗಿ ಏತ ನೀರಾವರಿ: ಪ್ರತಿ ಯೂನಿಟ್‌ಗೆ 2 ರೂ ವಿದ್ಯುತ್ ದರ ಕಡಿತ ಮಾಡಲಾಗಿದೆ.
ಎಚ್‌ಟಿ ಪಾರ್ಟ್‌ಮೆಂಟ್‌: ಪ್ರತಿ ಪ್ರತಿ ಕಿಲೋವೋಲ್ಟ್‌ ಆಂಪಿಯರ್‌ (ಕೆವಿಎ)ಗೆ 10 ರೂ. ಕಡಿಮೆ ಡಿಮೆಯಾಗುತ್ತದೆ
ಎಲ್‌ಟಿ ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು: ಪ್ರತಿ ಯೂನಿಟ್‌ಗೆ 50 ಪೈಸೆ ಕಡಿತ ಮಾಡಲಾಗುತ್ತದೆ
ಎಲ್‌.ಟಿ. ಕೈಗಾರಿಕಾ ಸ್ಥಾವರಗಳು : ಪ್ರತಿ ಯೂನಿಟ್‌ಗೆ 1 ರೂ.ಗಳಷ್ಟು ದರ ಕಡಿಮೆ

ಪ್ರಮುಖ ಸುದ್ದಿ :-   ಜೇನು ಹುಳುಗಳ ದಾಳಿಯಿಂದ 30ಕ್ಕೂ ಹೆಚ್ಚು ಪ್ರವಾಸಿಗರಿಗೆ ಗಾಯ : ಸಾತೊಡ್ಡಿ ಜಲಪಾತಕ್ಕೆ ಪ್ರವಾಸಿಗರಿಗೆ ನಿರ್ಬಂಧ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement