ವೀಡಿಯೊ…| ಬಾಲಿವುಡ್‌ ನಟರಾದ ಅಕ್ಷಯಕುಮಾರ, ಟೈಗರ್ ಶ್ರಾಫ್ ಕಾರ್ಯಕ್ರಮದಲ್ಲಿ ಜನಸಮೂಹದಿಂದ ಕಲ್ಲು ತೂರಾಟ-ಚಪ್ಪಲಿ ಎಸೆತ-ಲಾಠಿ ಚಾರ್ಜ್‌

ನವದೆಹಲಿ : ಸೋಮವಾರ, ಲಕ್ನೋದಲ್ಲಿ ನಡೆದ ಬಾಲಿವುಡ್ ನಟರಾದ ಅಕ್ಷಯಕುಮಾರ ಮತ್ತು ಟೈಗರ್ ಶ್ರಾಫ್ ತಮ್ಮ ಮುಂಬರುವ ಚಿತ್ರ ಬಡೇ ಮಿಯಾನ್ ಚೋಟೆ ಮಿಯಾನ್ ಪ್ರಚಾರ ಕಾರ್ಯಕ್ರಮವು ಅನಿರೀಕ್ಷಿತ ಘಟನೆಗಳಿಗೆ ಸಾಕ್ಷಿಯಾಯಿತು. ಇಬ್ಬರೂ ತಮ್ಮ ಉತ್ಸಾಹಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಲು ಘಂಟಾಘರ್‌ ನಲ್ಲಿನ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದ ಜನಸ್ತೋಮವು ಉನ್ಮಾದಕ್ಕೆ ಕಾರಣವಾಯಿತು. ಜನರಿಗೆ ನಟರನ್ನು ಸರಿಯಾಗಿ ನೋಡಲಾಗದ ಚಪ್ಪಲಿಗಳು ಮತ್ತು ಕಲ್ಲು ತೂರಾಟಗಳು ನಡೆದವು. ಜನರು ಕೈಯಲ್ಲಿದ್ದ ವಸ್ತುಗಳನ್ನು ಪರಸ್ಪರ ಎಸೆಯಲು ಪ್ರಾರಂಭಿಸಿದರು. ಅದೃಷ್ಟವಶಾತ್, ನಟರಾದ ಅಕ್ಷಯಕುಮಾರ ಮತ್ತು ಟೈಗರ್ ಇಬ್ಬರೂ ವೇದಿಕೆಯಿಂದ ಸುರಕ್ಷಿತ ಸ್ಥಳಕ್ಕೆ ಹೋದರು. ಪೊಲೀಸರಿಂದ ಕನಿಷ್ಠ ಬಲ ಪ್ರಯೋಗ ಮತ್ತು ಲಾಠಿ ಚಾರ್ಜ್‌ ನಂತರ ಅಂತಿಮವಾಗಿ ಸುವ್ಯವಸ್ಥೆಯನ್ನು ನಿಯಂತ್ರಣಕ್ಕೆ ತರಲಾಯಿತು.

ವೀಡಿಯೊವೊಂದರಲ್ಲಿ ಅಕ್ಷಯಕುಮಾರ ಅವರು ಸಂಯಮವನ್ನು ಕಾಯ್ದುಕೊಳ್ಳುವಂತೆ ಜನರಿಗೆ ಮನವಿ ಮಾಡುವುದನ್ನು ನೋಡಬಹುದು, “ನಾನು ಕೈಮುಗಿದು ಕೇಳುತ್ತೇನೆ, ದಯವಿಟ್ಟು ಜಾಗರೂಕರಾಗಿರಿ. ನಾವು ನಿಮ್ಮನ್ನು ಭೇಟಿಯಾಗಲು, ನಿಮ್ಮೊಂದಿಗೆ ಮಾತನಾಡಲು ಇಲ್ಲಿಗೆ ಬಂದಿದ್ದೇವೆ. ದಯವಿಟ್ಟು ಜಾಗರೂಕರಾಗಿರಿ, ಅಲ್ಲಿ ಹೆಂಗಸರು ಮತ್ತು ಮಕ್ಕಳೂ ಇದ್ದಾರೆ. ನೀವೆಲ್ಲರೂ ಎಚ್ಚರಿಕೆಯಿಂದ ಇರಬೇಕೆಂದು ನಾನು ವಿನಂತಿಸುತ್ತೇನೆ ಎಂದು ಅಕ್ಷಯಕುಮಾರ ಅವರು ಜನರಿಗೆ ಕೈಜೋಡಿಸಿ ವಿನಂತಿ ಮಾಡುತ್ತಿರುವುದು ಕಂಡುಬರುತ್ತದೆ.

ಪ್ರಮುಖ ಸುದ್ದಿ :-   ಆಹಾರದ ಪ್ಯಾಕೆಟ್‌ಗಳಲ್ಲಿ ತುಂಬಿ ಸಾಗಿಸುತ್ತಿದ್ದ ₹ 2,000 ಕೋಟಿ ಮೌಲ್ಯದ ಕೊಕೇನ್ ದೆಹಲಿಯಲ್ಲಿ ವಶ...!

ಕಾರ್ಯಕ್ರಮಕ್ಕೆ ಮೊದಲು, ಅಕ್ಷಯಕುಮಾರ ತಮ್ಮ ಲಕ್ನೋ ಭೇಟಿಯ ಕುರಿತು ಪ್ರಕಟಣೆ ಮಾಡಲು ಟೈಗರ್ ಶ್ರಾಫ್ ಅವರೊಂದಿಗೆ ಇದ್ದ ಚಿತ್ರವನ್ನು ಪೋಸ್ಟ್ ಮಾಡಿದರು. ಫೋಟೋದಲ್ಲಿ, ಇಬ್ಬರೂ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಕುಳಿತಿದ್ದಾರೆ, ಹಿನ್ನೆಲೆಯಲ್ಲಿ ವಿಮಾನವು ಗೋಚರಿಸುತ್ತದೆ. ಈವೆಂಟ್ ಬಗ್ಗೆ ವಿವರಗಳನ್ನು ಹಂಚಿಕೊಂಡ ಅಕ್ಷಯಕುಮಾರ, “ಪೆಹಲೆ ಆಪ್ ಮುಸ್ಕುರಾಯಿಯೇ, ಕ್ಯೂಂಕಿ ಬಡೇ ಔರ್ ಚೋಟೆ ಅಬ್ ಲಕ್ನೋ ಮೇ ಹೈ! ಮಿಲ್ತೆ ಹೈ, ಆಜ್ ದೋಪಹರ್, ಕ್ಲಾಕ್ ಟವರ್ ಮೈದಾನ್ ಮೇ. [ಮೊದಲು, ನೀವು ನಗುತ್ತೀರಿ, ಏಕೆಂದರೆ ಬಡೆ ಮತ್ತು ಚೋಟೆ ಈಗ ಲಕ್ನೋದಲ್ಲಿದ್ದಾರೆ! ಇಂದು ಮಧ್ಯಾಹ್ನ ಕ್ಲಾಕ್ ಟವರ್ ಗ್ರೌಂಡ್‌ನಲ್ಲಿ ನಿಮ್ಮನ್ನು ಭೇಟಿಯಾಗ್ತೇವೆ.] ಎಂದು ಅದರಲ್ಲಿ ಬರೆದಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ರತನ್‌ ಟಾಟಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ತನ್ನನ್ನು ರಕ್ಷಿಸಿದ ವ್ಯಕ್ತಿಗೆ ಅಂತಿಮ ನಮನ ಸಲ್ಲಿಸಿದ ಪ್ರೀತಿಯ ನಾಯಿ ʼಗೋವಾʼ

ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಬಡೇ ಮಿಯಾನ್ ಚೋಟೆ ಮಿಯಾನ್ ಚಿತ್ರದಲ್ಲಿ ಪೃಥ್ವಿರಾಜ ಸುಕುಮಾರನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಕ್ಷನ್-ಪ್ಯಾಕ್ಡ್ ಚಿತ್ರವು 2024 ಈದ್ ದಿನದಂದು ಸಿನೆಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement