55 ದಿನಗಳಿಂದ ತಲೆಮರೆಸಿಕೊಂಡಿದ್ದ ಸಂದೇಶಖಾಲಿ ಪ್ರಕರಣದ ಆರೋಪಿ ಶೇಖ್ ಷಹಜಹಾನ್ ಬಂಧನ : ಪಕ್ಷದಿಂದ 6 ವರ್ಷ ಅಮಾನತು ಮಾಡಿದ ಟಿಎಂಸಿ

ಕೋಲ್ಕತ್ತಾ: ಸಂದೇಶಖಾಲಿ ಪ್ರಕರಣದ ಪ್ರಮುಖ ಆರೋಪಿ ತೃಣಮೂಲ ಕಾಂಗ್ರೆಸ್ ನಾಯಕ ಶೇಖ್ ಷಹಜಹಾನ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶೇಖ್ ಷಹಜಹಾನ್ ಬಂಧನದ ಬಳಿಕ ತೃಣ ಮೂಲ ಕಾಂಗ್ರೆಸ್ ಆತನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಅಮಾನತು ಮಾಡಲಾಗಿದೆ ಎಂದು ಹೇಳಿದೆ.
ಆತ ಮತ್ತು ಆತನ ಸಹಚರರ ವಿರುದ್ಧ ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಭೂಹಗರಣದ ಆರೋಪವಿದೆ.
ಉತ್ತರ 24 ಪರಗಣ ಜಿಲ್ಲೆಯಲ್ಲಿ ಶೇಖ್ ಷಹಜಹಾನ್ ಅವರನ್ನು ಬಂಗಾಳದ ವಿಶೇಷ ಪೊಲೀಸ್ ತಂಡವು ಮಧ್ಯರಾತ್ರಿ ಬಂಧಿಸಿತು. ಆತ 55 ದಿನಗಳಿಂದ ಪರಾರಿಯಾಗಿದ್ದ. ಇದೀಗ ನ್ಯಾಯಾಲಯ ಆತನಿಗೆ 10 ದಿನಗಳ ಪೊಲೀಸ್ ಕಸ್ಟಡಿ ನೀಡಿದೆ.ಬಂಧನಕ್ಕೆ ಮುನ್ನ ಹಲವು ದಿನಗಳಿಂದ ನಾಯಕನ ಚಟುವಟಿಕೆಗಳ ಮೇಲೆ ತಂಡ ನಿಗಾ ಇರಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂದೇಶಖಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಖ್ ಷಹಜಹಾನ್ ನನ್ನು ಸೇರಿಸಲು ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿದ ಮೂರು ದಿನಗಳ ನಂತರ ಬಂಧನವಾಗಿದೆ.
ಫೆಬ್ರವರಿ 26 ರಂದು ಕೋಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಪ್ರಕರಣದಲ್ಲಿ ನೋಟಿಸ್ ನೀಡುವಂತೆ ಸೂಚಿಸಿದರು ಮತ್ತು “ಆತನನ್ನು ಬಂಧಿಸದೇ ಇರಲು ಯಾವುದೇ ಕಾರಣವಿಲ್ಲ” ಎಂದು ಹೇಳಿದರು. ಈ ಪ್ರಕರಣದಲ್ಲಿ ಸಾರ್ವಜನಿಕ ನೋಟಿಸ್ ನೀಡಲಾಗುವುದು. ಸಂದೇಶಖಾಲಿ ಪ್ರಕರಣಗಳಲ್ಲಿ ಯಾವುದೇ ತಡೆಯಾಜ್ಞೆ ಇಲ್ಲ. ಅವರನ್ನು ಬಂಧಿಸದಿರಲು ಯಾವುದೇ ಕಾರಣವಿಲ್ಲ” ಎಂದು ಕೋರ್ಟ್
ಸಂದೇಶ್‌ಖಾಲಿಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ತೃಣಮೂಲ ಕಾಂಗ್ರೆಸ್‌ನ ಪ್ರಬಲ ವ್ಯಕ್ತಿ ಷಹಜಹಾನ್ ಶೇಖ್ ಮತ್ತು ಆತನ ಬೆಂಬಲಿಗರ ಮೇಲೆ ಬಲವಂತದ “ಭೂ ಕಬಳಿಕೆ ಮತ್ತು ಲೈಂಗಿಕ ದೌರ್ಜನ್ಯ” ಮಾಡಿದ್ದಾರೆ ಎಂದು ಆರೋಪಿಸಿದರು. ಜನವರಿ 5 ರಿಂದ ಪರಾರಿಯಾಗಿದ್ದ ಈ ನಾಯಕ ಈ ಹಿಂದೆ 2019 ರಲ್ಲಿ ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾನೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದ ಅಮೆರಿಕದ ರಾಜಕೀಯ ವಿಜ್ಞಾನಿ; ಅವರ ಪ್ರಕಾರ ಬಿಜೆಪಿ ಗೆಲ್ಲುವ ಸ್ಥಾನಗಳೆಷ್ಟು ಗೊತ್ತೆ..?

ಪಡಿತರ ಮತ್ತು ಭೂ ಹಗರಣಗಳಲ್ಲಿ ಶೇಖ್ ಷಹಜಹಾನ್ ಅಕ್ರಮ ಹಣ ವರ್ಗಾವಣೆ ಮಾಡಿದ್ದಾನೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಈತನ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ವಿದ್ಯುತ್ ಇಲಾಖೆ ನೌಕರರ ವಿರುದ್ಧ ಹಿಂಸಾಚಾರದ ಆರೋಪಗಳೂ ಇದ್ದವು, ಇದರ ಪರಿಣಾಮವಾಗಿ ಆತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ದಾಳಿ ನಡೆಸಲು ಸಂದೇಶಖಾಲಿಗೆ ತೆರಳಿದ ಜಾರಿ ನಿರ್ದೇಶನಾಲಯ ತಂಡದ ಮೇಲೆ ಷಹಜಹಾನನ ಬೆಂಬಲಿಗರ ಗುಂಪು ದಾಳಿ ಮಾಡಿದ ನಂತರ ಮಮತಾ ಬ್ಯಾನರ್ಜಿ ಸರ್ಕಾರವು ಶೇಖ್ ಷಹಜಹಾನ್ ಅವರನ್ನು ರಕ್ಷಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು.

ಟಿಎಂಸಿ ಪಕ್ಷದಿಂದ ಶೇಖ್ ಶಹಜಹಾನ್ 6 ವರ್ಷ ಅಮಾನತು
ಶೇಖ್ ಷಹಜಹಾನ್ ಬಂಧನದ ಬಳಿಕ ತೃಣ ಮೂಲ ಕಾಂಗ್ರೆಸ್ ಆತನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಅಮಾನತು ಮಾಡಲಾಗಿದೆ ಎಂದು ಹೇಳಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಟಿಎಂಸಿ ಹಿರಿಯ ನಾಯಕ ಡೆರಿಕ್ ಒಬ್ರಿಯಾನ್ ಅಮಾನತು ನಿರ್ಧಾರ ಪ್ರಕಟಿಸಿದರು. ಟಿಎಂಸಿ ಸಂಸದ ಡೆರೆಕ್ ಒ’ಬ್ರೇನ್ ಅವರು ಷಹಜಹಾನ್ ಅವರನ್ನು ಬಂಧಿಸಿದ ಕೆಲವೇ ದಿನಗಳಲ್ಲಿ ಅಮಾನತುಗೊಳಿಸುವ ನಿರ್ಧಾರವನ್ನು ಪ್ರಕಟಿಸಿದರು. ಶೇಖ್ ಷಹಜಹಾನ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಲು ನಾವು ನಿರ್ಧರಿಸಿದ್ದೇವೆ. ಯಾವಾಗಲೂ ನಾವು ಮಾತಿನಂತೆ ನಡೆದುಕೊಳ್ಳುತ್ತೇವೆ. ಹಿಂದೆ ನಾವು ಉದಾಹರಣೆಗಳನ್ನು ನೀಡಿದ್ದೇವೆ. ನಾವು ಇಂದು ಅದನ್ನು ಮಾಡುತ್ತಿದ್ದೇವೆ ಎಂದು ಟಿಎಂಸಿ ಸಂಸದ ಡೆರೆಕ್ ಒ’ಬ್ರೇನ್ ಹೇಳಿದರು.
“ಆದರೆ ಭ್ರಷ್ಟಾಚಾರ ಪ್ರಕರಣಗಳನ್ನು ಹೊಂದಿರುವ ಮತ್ತು ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ತಮ್ಮ ನಾಯಕರನ್ನು ಅಮಾನತುಗೊಳಿಸಲು ಬಿಜೆಪಿಗೆ ಧೈರ್ಯವಿದೆಯೇ” ಎಂದು ಒ’ಬ್ರೇನ್ ಪ್ರಶ್ನಿಸಿದ್ದಾರೆ.
ಷಹಜಹಾನ್ ಸಂದೇಶಖಾಲಿ ವಿಧಾನಸಭಾ ಕ್ಷೇತ್ರದ ಪಕ್ಷದ ಸಂಚಾಲಕನಾಗಿದ್ದ ಮತ್ತು ಟಿಎಂಸಿ ಹಿಡಿತದಲ್ಲಿರುವ ಉತ್ತರ 24 ಪರಗಣ ಜಿಲ್ಲಾ ಪರಿಷತ್ತಿನ ಸದಸ್ಯನೂ ಆಗಿದ್ದ.

ಪ್ರಮುಖ ಸುದ್ದಿ :-   'ಅಜ್ಞಾನ, ಸೋಮಾರಿತನ, ದುರಹಂಕಾರ' ಇದುವೇ ಕಾಂಗ್ರೆಸ್‌ ಯಶಸ್ಸು ಪಡೆಯಲು ಇರುವ ಅಡ್ಡಿ : ರಾಜಕೀಯ ತಂತ್ರಜ್ಞ ಪ್ರಶಾಂತ ಕಿಶೋರ ಅಭಿಪ್ರಾಯ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement