ವಿಶ್ವದ ಟಾಪ್ ಶ್ರೀಮಂತರಲ್ಲಿ ಒಬ್ಬರಾದ ಮುಖೇಶ ಅಂಬಾನಿ- ನೀತಾ ಅಂಬಾನಿ ಪುತ್ರ ಅನಂತ ಅಂಬಾನಿ (Anant Ambani) ವಿವಾಹ ಪೂರ್ವ ಕಾರ್ಯಕ್ರಮವು ಗುಜರಾತಿನ ಜಾಮನಗರದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಗ-ಸೊಸೆಗಾಗಿ ನೀತಾ ಅಂಬಾನಿ ಶಾಸ್ತ್ರೀಯ ನೃತ್ಯ ಮಾಡಿದ್ದಾರೆ.
ಶಕ್ತಿ ಮತ್ತು ಶಕ್ತಿಯ ಮೂರ್ತರೂಪವಾದ ಮಾ ಅಂಬೆಗೆ ಸಮರ್ಪಿತವಾದ ‘ವಿಶ್ವಂಭರಿ ಸ್ತುತಿ’ ಭಕ್ತಿಗೀತೆಗೆ ಶಾಸ್ತ್ರೀಯ ನೃತ್ಯ ಪ್ರದರ್ಶನ ಮಾಡಿದ್ದಾರೆ.
ನೀತಾ ಅಂಬಾನಿ ಅವರು ತಮ್ಮ ಪುತ್ರ ಅನಂತ ಮತ್ತು ಸೊಸೆಯಾಗಲಿರುವ ರಾಧಿಕಾ ಮರ್ಚಂಟ್ ಅವರ ಜೀವನ ಪ್ರಯಾಣಕ್ಕಾಗಿ ಮಾ ಅಂಬೆಯ ಆಶೀರ್ವಾದ ಕೋರಿ ನೃತ್ಯ ಪ್ರದರ್ಶನ ಮಾಡಿದ್ದಾರೆ. ನೀತಾ (Nita Ambani) ಅವರ ನೃತ್ಯ, ಅಭಿನಯ ಅದ್ಭುತವಾಗಿ ಮೂಡಿ ಬಂದಿದೆ. ನೀತಾ ಅಂಬಾನಿ ಶಾಸ್ತ್ರೀಯ ನೃತ್ಯಗಾರರೊಂದಿಗೆ ವಿಶ್ವಂಭರಿ ಸ್ತುತಿಯಲ್ಲಿ ಪ್ರದರ್ಶನ ನೀಡುತ್ತಿರುವ ವೀಡಿಯೊ ವೈರಲ್ ಆಗಿದೆ.
ಅವರು ತಮ್ಮ ನೃತ್ಯಾಭಿನಯವನ್ನು ತನ್ನ ಮೊಮ್ಮಗಳು ಆದಿ ಶಕ್ತಿ ಮತ್ತು ವೇದಾ ಮತ್ತು ಸ್ತ್ರೀ ಶಕ್ತಿಯ ಸಂಕೇತವಾಗಿರುವ ಎಲ್ಲಾ ಯುವತಿಯರಿಗೆ ಅರ್ಪಿಸಿದ್ದಾರೆ.
NMACC ಅಧಿಕೃತ ಹ್ಯಾಂಡಲ್ ನೀತಾ ಅಂಬಾನಿಯವರ ನೃತ್ಯ ಪ್ರದರ್ಶನವನ್ನು ಶೀರ್ಷಿಕೆಯ ಜೊತೆಗೆ ಹಂಚಿಕೊಂಡಿದೆ, “ಸಂಪ್ರದಾಯವನ್ನು ಆಚರಿಸುತ್ತಾ ಮತ್ತು ದೈವಿಕತೆಯನ್ನು ಆವಾಹನೆ ಮಾಡುತ್ತಾ, ನೀತಾ ಅಂಬಾನಿ ವಿಶ್ವಂಭರಿ ಸ್ತುತಿಯೊಂದಿಗೆ ಸ್ಫೂರ್ತಿದಾಯಕ ಪ್ರದರ್ಶನ ಪ್ರಸ್ತುತಪಡಿಸಿದ್ದಾರೆ, ಇದು ಶಕ್ತಿಯ ಸಾಕಾರವಾದ ಮಾ ಅಂಬೆಗೆ ಸಮರ್ಪಿತವಾದ ಪವಿತ್ರ ಸ್ತೋತ್ರವಾಗಿದೆ. ಅವರು ತನ್ನ ಬಾಲ್ಯದಿಂದಲೂ ಪ್ರತಿ ನವರಾತ್ರಿಯ ಸಮಯದಲ್ಲಿ ಈ ಸ್ತೋತ್ರವನ್ನು ಪ್ರಸ್ತುತ ಪಡಿಸುತ್ತಿದ್ದಾರೆ ಎಂದು ಹೇಳಿದೆ.ನೀತಾ ಅಂಬಾನಿ ಅವರ ಅಭಿನಯವು ಸಾಮಾಜಿಕ ಮಾಧ್ಯಮದಲ್ಲಿ ಹಲವಾರಿಂದ ಪ್ರಶಂಸೆ ಗಳಿಸಿದೆ.
ಅನಂತ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವದ ಅದ್ದೂರಿ ಆಚರಣೆಯ ಭಾಗವಾಗಿ ಮೂರು ದಿನಗಳ ಕಾಲ ಐದು ಕಾರ್ಯಕ್ರಮಗಳು ನಡೆದವು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮೂರು ದಿನಗಳ ವಿವಾಹದ ಪೂರ್ವ ಆಚರಣೆಗಳು ಮಾರ್ಚ್ 3 ರಂದು ಮುಕ್ತಾಯಗೊಂಡವು. ಆಚರಣೆಗಳಿಗಾಗಿ, ಪ್ರಪಂಚದಾದ್ಯಂತದ ಸೆಲೆಬ್ರಿಟಿಗಳು ಮತ್ತು ಪ್ರಸಿದ್ಧ ವ್ಯಕ್ತಿಗಳು ಗುಜರಾತಿನ ಜಾಮನಗರದಲ್ಲಿ ಜಮಾಯಿಸಿದ್ದರು. ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ, ಉದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರನ್ನು ಈ ವರ್ಷದ ಕೊನೆಯಲ್ಲಿ ವಿವಾಹವಾಗಲಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ