ಪ್ರಧಾನಿ ಮೋದಿ ‘ನನ್ನ ದೊಡ್ಡಣ್ಣ’ ಎಂದು ಬಣ್ಣಿಸಿದ ತೆಲಂಗಾಣ ಕಾಂಗ್ರೆಸ್‌ ಸರ್ಕಾರದ ಸಿಎಂ : ಮೋದಿ ಜೊತೆ ರೇವಂತ ರೆಡ್ಡಿ ʼಸ್ನೇಹಪರತೆʼ ಮಾತು ಚರ್ಚೆಗೆ ಗ್ರಾಸ

ಆದಿಲಾಬಾದ್‌ : ತೆಲಂಗಾಣ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಸೋಮವಾರ ಪ್ರಧಾನಿ ಮೋದಿಯನ್ನು ತಮ್ಮ ʼದೊಡ್ಡಣ್ಣʼ ಎಂದು ಬಣ್ಣಿಸಿದ್ದಾರೆ…!
ಸೋಮವಾರ ತೆಲಂಗಾಣದ ಆದಿಲಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 56,000 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಯೋಜನೆಗಳ ಉದ್ಘಾಟನೆಯಲ್ಲ, ಪ್ರಧಾನಿ ಮತ್ತು ಮುಖ್ಯಮಂತ್ರಿ ರೇವಂತ ರೆಡ್ಡಿ ನಡುವಿನ ಬಾಂಧವ್ಯ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು.
ಪ್ರಧಾನಿ ಮೋದಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಪ್ರತಿಸ್ಪರ್ಧಿ ಪಕ್ಷಗಳಿಗೆ ಸೇರಿದವರಲ್ಲದೆ, ರೇವಂತ್ ಅವರ ನಡವಳಿಕೆಯು ಅವರ ಹಿಂದಿನ ಭಾರತ್ ರಾಷ್ಟ್ರ ಸಮಿತಿ ಸಂಸ್ಥಾಪಕ ಕೆ ಚಂದ್ರಶೇಖರ ರಾವ್ ಅವರ ವರ್ತನೆಗೆ ತೀವ್ರ ವ್ಯತಿರಿಕ್ತವಾಗಿತ್ತು. ಬಿಆರ್‌ಎಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ, ಕೆ ಚಂದ್ರಶೇಖರ ರಾವ್ ಅವರು ಪ್ರಧಾನಿಯವರ ಬಹುತೇಕ ಎಲ್ಲಾ ಕಾರ್ಯಕ್ರಮಗಳಿಗೆ ಗೈರಾಗಿದ್ದರು. ಅವರು ಪ್ರಧಾನಿ ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವೀಕರಿಸುತ್ತಿರಲಿಲ್ಲ ಮತ್ತು ಬದಲಿಗೆ ಸಚಿವರನ್ನು ಕಳುಹಿಸುತ್ತಿದ್ದರು.
ರೇವಂತ್ ರೆಡ್ಡಿ ಪ್ರಧಾನಿಯವರನ್ನು ಆತ್ಮೀಯವಾಗಿ ಸ್ವಾಗತಿಸಿರುವುದು ಮತ್ತು ಅವರನ್ನು “ದೊಡ್ಡಣ್ಣ” ಎಂದು ಕರೆದಿರುವುದು ಈಗ ಚರ್ಚೆಯ ವಿಷಯವಾಯಿತು. “ಪ್ರಧಾನಿ ಒಬ್ಬ ದೊಡ್ಡಣ್ಣನಿದ್ದಂತೆ. ದೊಡ್ಡಣ್ಣನ ಮಾರ್ಗದರ್ಶನದಿಂದ ದೇಶದ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳನ್ನು ಪ್ರಗತಿಪಥದತ್ತ ಕೊಂಡೊಯ್ಯಬಹುದು ಎಂದು ರೇವಂತ್ ಹೇಳಿದರು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ತೆಲಂಗಾಣ ಪ್ರಗತಿಯಾಗಬೇಕಾದರೆ ʼಗುಜರಾತ್ ಮಾದರಿʼಯನ್ನು ಅನುಸರಿಸಬೇಕು ಎಂದು ರೇವಂತ ರೆಡ್ಡಿ ಹೇಳಿದರು. ತೆಲಂಗಾಣ ಅಭಿವೃದ್ಧಿಗೆ ಸಹಾಯ ಮಾಡಲು ಪ್ರಧಾನಿ ಮೋದಿಯವರ ಬೆಂಬಲ ಕೋರಿದರು.
“ನಮಗೆ ಅಭಿವೃದ್ಧಿ ಎಂದರೆ ಬಡವರ ಬಡವರ ಅಭಿವೃದ್ಧಿ, ದಲಿತರು, ಬುಡಕಟ್ಟು ಜನರು, ಹಿಂದುಳಿದವರು ಮತ್ತು ವಂಚಿತರ ಅಭಿವೃದ್ಧಿ” ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಆದಿಲಾಬಾದ್‌ನಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದರು.
ಹಿಂದಿಯಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಹಮಾರೆ ಹಿಸಾಬ್ ಸೆ ಪ್ರಧಾನ ಮಂತ್ರಿ ಮತಲಬ್‌ ಬಡೇ ಭಾಯ್ (ನಮ್ಮ ಪ್ರಕಾರ ಪ್ರಧಾನಿ ಎಂದರೆ ದೊಡ್ಡಣ್ಣ). ಅವರ ಸಹಾಯದಿಂದ ಮಾತ್ರ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳನ್ನು ಮುಂದಕ್ಕೆ ಕೊಂಡೊಯ್ಯಬಹುದು… ತೆಲಂಗಾಣ ಪ್ರಗತಿಯಾಗಬೇಕಾದರೆ, ಗುಜರಾತಿನಂತೆ ಮುನ್ನಡೆಯಬೇಕಾದರೆ ನಿಮ್ಮ ಸಹಾಯ ಬೇಕು ಎಂದು ಅವರು ಹೇಳಿದರು.

“ಕಾಂಗ್ರೆಸ್ ಆಡಳಿತದ ರಾಜ್ಯವಾದ ತೆಲಂಗಾಣವು ಕೇಂದ್ರದೊಂದಿಗೆ ಮುಖಾಮುಖಿಯಾಗಲು ಬಯಸುವುದಿಲ್ಲ ಮತ್ತು ಸೌಹಾರ್ದಯುತ ಸಂಬಂಧವನ್ನು ಬಯಸುತ್ತದೆ… ನಾವು USD 5 ಟ್ರಿಲಿಯನ್ ಆರ್ಥಿಕತೆಯ ಮಹತ್ವಾಕಾಂಕ್ಷೆಯ ಗುರಿಗೆ ಕೊಡುಗೆ ನೀಡಲು ಬಯಸುತ್ತೇವೆ” ಎಂದು ರೆಡ್ಡಿ ಹೇಳಿದರು.
ಅದಿಲಾಬಾದ್‌ನಲ್ಲಿ ಮಾಡಿದ ಭಾಷಣದಲ್ಲಿ ರಾಜ್ಯದ ಮೆಟ್ರೋ ರೈಲು ಯೋಜನೆಗೆ ಹಣ ನೀಡುವಂತೆ ಅವರು ಮನವಿ ಮಾಡಿದರು. 2024ರ ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ಮೋದಿ ತೆಲಂಗಾಣ ಪ್ರವಾಸದಲ್ಲಿದ್ದಾರೆ. ಸೋಮವಾರ ಆದಿಲಾಬಾದ್‌ನಲ್ಲಿ ₹56,000 ಕೋಟಿಗೂ ಹೆಚ್ಚು ಮೊತ್ತದ 30 ಅಭಿವೃದ್ಧಿ ಯೋಜನೆಗಳಿಗೆ ಮೋದಿಯವರು ಶಂಕುಸ್ಥಾಪನೆ ನೆರವೇರಿಸಿದರು.
ಸಮಾರಂಭದಲ್ಲಿ, ಪ್ರಧಾನ ಮಂತ್ರಿಗಳು ಪೆದ್ದಪಲ್ಲಿಯಲ್ಲಿ ಎನ್‌ಟಿಪಿಸಿ (NTPC)ಯ 800 MW (ಯುನಿಟ್-2) ತೆಲಂಗಾಣ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಯೋಜನೆಯು ಅಲ್ಟ್ರಾ-ಸೂಪರ್‌ ಕ್ರಿಟಿಕಲ್ ತಂತ್ರಜ್ಞಾನವನ್ನು ಆಧರಿಸಿದೆ. 85ರಷ್ಟು ವಿದ್ಯುತ್ ತೆಲಂಗಾಣಕ್ಕೆ ಪೂರೈಕೆಯಾಗಲಿದೆ. ಇದು ಎನ್‌ಟಿಪಿಸಿಯ ಎಲ್ಲಾ ವಿದ್ಯುತ್ ಕೇಂದ್ರಗಳಲ್ಲಿ ಸರಿಸುಮಾರು 42 ಪ್ರತಿಶತದಷ್ಟು ಹೆಚ್ಚಿನ ವಿದ್ಯುತ್ ಉತ್ಪಾದನಾ ದಕ್ಷತೆಯನ್ನು ಹೊಂದಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement