ನವದೆಹಲಿ: ಈಗಲೇ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 543 ಲೋಕಸಭಾ ಸ್ಥಾನಗಳಲ್ಲಿ 378 ಸ್ಥಾನಗಳನ್ನು ಗೆಲ್ಲಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಒಪಿನಿಯನ್ ಪೋಲ್ ಮಂಗಳವಾರ (ಮಾರ್ಚ್ 5) ಹೇಳಿದೆ.
ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಐ.ಎನ್.ಡಿ.ಐ.ಎ. ಬ್ಲಾಕ್ (ತೃಣಮೂಲ ಕಾಂಗ್ರೆಸ್ ಇಲ್ಲದೆ) 98 ಸ್ಥಾನಗಳನ್ನು ಗೆಲ್ಲಬಹುದು, ಆದರೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ), ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ, ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ, ನವೀನ್ ಪಟ್ನಾಯಕ್ ಅವರ ಬಿಜೆಡಿ ಮತ್ತು ಸ್ವತಂತ್ರರು ಉಳಿದ 67 ಸ್ಥಾನಗಳನ್ನು ಪಡೆಯಬಹುದು ಎಂದು ಸಮೀಕ್ಷೆ ಹೇಳಿದೆ.
ಮಂಗಳವಾರ ಪ್ರಕಟವಾದ ಇಂಡಿಯಾ ಟಿವಿ-ಸಿಎನ್‌ಎಕ್ಸ್ ಒಪಿನಿಯನ್ ಪೋಲ್ ಪ್ರಕಾರ, ಫೆಬ್ರವರಿ 5 ಮತ್ತು 23 ರ ನಡುವೆ ಎಲ್ಲಾ 543 ಕ್ಷೇತ್ರಗಳಲ್ಲಿ ಅಭಿಪ್ರಾಯ ಸಂಗ್ರಹವನ್ನು ನಡೆಸಲಾಯಿತು ಮತ್ತು ಈ ಸರ್ವೆಗೆ ಒಟ್ಟು ಪ್ರತಿಕ್ರಿಯಿಸಿದವರ ಸಂಖ್ಯೆ 1,62,900 ಜನರು. ಇವರಲ್ಲಿ 84,350 ಪುರುಷರು ಮತ್ತು 78,550 ಮಹಿಳೆಯರು ಸೇರಿದ್ದಾರೆ.
ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಾತ್ರವೇ 335 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ತಿಳಿಸಿದೆ. ಇಂಡಿಯಾ ಟಿವಿ-ಸಿಎನ್‌ಎಕ್ಸ್ ಒಪಿನಿಯನ್ ಪೋಲ್ ಪ್ರಕಾರ, ಗುಜರಾತ್‌ನ ಎಲ್ಲಾ 26 ಸ್ಥಾನಗಳು, ಮಧ್ಯಪ್ರದೇಶದ ಎಲ್ಲಾ 29 ಸ್ಥಾನಗಳು, ರಾಜಸ್ಥಾನದ ಎಲ್ಲಾ 25 ಸ್ಥಾನಗಳು, ಹರಿಯಾಣದ ಎಲ್ಲಾ 10 ಸ್ಥಾನಗಳು, ದೆಹಲಿಯ ಎಲ್ಲಾ ಏಳು ಸ್ಥಾನಗಳು, ಉತ್ತರಾಖಂಡದ ಎಲ್ಲಾ 5 ಸ್ಥಾನಗಳು ಮತ್ತು ಹಿಮಾಚಲ ಪ್ರದೇಶ ಎಲ್ಲ 4 ಸ್ಥಾನಗಳನ್ನು ಕ್ಲೀನ್ ಸ್ವೀಪ್ ಮಾಡಲಿದೆ.
ಎನ್‌ಡಿಎ ಮೈತ್ರಿಕೂಟವು ಉತ್ತರ ಪ್ರದೇಶದಲ್ಲಿ ಅತ್ಯಂತ ಅದ್ಭುತ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದ್ದು, ಒಟ್ಟು 80 ಸ್ಥಾನಗಳಲ್ಲಿ ಬಿಜೆಪಿ 74 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಅದರ ಮೈತ್ರಿಕೂಟದ ಪಾಲುದಾರರಾದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮತ್ತು ಅಪ್ನಾ ದಳ ತಲಾ ಎರಡು ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ. ಅಖಿಲೇಶ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ (SP) ಎರಡು ಸ್ಥಾನಗಳನ್ನು ಗೆಲ್ಲಬಹುದು, ಕಾಂಗ್ರೆಸ್ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ಕ್ಕೆ ಯಾವುದೇ ಸ್ಥಾನ ಗೆಲ್ಲಲು ಸಾಧ್ಯವಾಗದೇ ಇರಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.
ಬಿಜೆಪಿ ಗಮನಾರ್ಹ ಗೆಲುವು ಸಾಧಿಸಲಿರುವ ಇತರ ರಾಜ್ಯಗಳಲ್ಲಿ ಬಿಹಾರ (40 ರಲ್ಲಿ 17), ಜಾರ್ಖಂಡ್ (14 ರಲ್ಲಿ 12), ಕರ್ನಾಟಕ (28 ರಲ್ಲಿ 22), ಮಹಾರಾಷ್ಟ್ರ (48 ರಲ್ಲಿ 25), ಒಡಿಶಾ (21 ರಲ್ಲಿ 10). ), ಅಸ್ಸಾಂ (14 ರಲ್ಲಿ 10) ಮತ್ತು ಪಶ್ಚಿಮ ಬಂಗಾಳ (42 ರಲ್ಲಿ 20) ಉತ್ತಮ ಸಾಧನೆ ಮಾಡಲಿದೆ.
ಪ್ರಾದೇಶಿಕ ಪಕ್ಷಗಳ ಪೈಕಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ 21 ಸ್ಥಾನಗಳನ್ನು, ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) 20 ಸ್ಥಾನಗಳನ್ನು, ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ 15 ಮತ್ತು ಟಿಡಿಪಿ 10 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಒಡಿಶಾದಲ್ಲಿ 21 ಸ್ಥಾನಗಳಲ್ಲಿ 10 ಬಿಜೆಡಿ ಗೆಲ್ಲಬಹುದು ಎಂದು ಸಮೀಕ್ಷೆ ಕಂಡುಕೊಂಡಿದೆ.
ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆಯ ಪ್ರಕ್ಷೇಪಗಳ ರಾಜ್ಯವಾರು ವಿಭಜನೆ:
ಆಂಧ್ರ ಪ್ರದೇಶ: ಒಟ್ಟು ಸ್ಥಾನಗಳು 25 : ವೈಎಸ್‌ಆರ್‌ಸಿಪಿ-15 ಮತ್ತು ಟಿಡಿಪಿ-10
ಅರುಣಾಚಲ ಪ್ರದೇಶ: ಒಟ್ಟು ಸ್ಥಾನಗಳು 2 : ಬಿಜೆಪಿ 2
ಅಸ್ಸಾಂ: ಒಟ್ಟು ಸ್ಥಾನಗಳು 14 : ಬಿಜೆಪಿ-10, ಎಜಿಪಿ-1, ಯುಪಿಪಿಎಲ್-1, ಕಾಂಗ್ರೆಸ್-1, ಎಐಯುಡಿಎಫ್-1
ಬಿಹಾರ: ಒಟ್ಟು ಸ್ಥಾನಗಳು 40 : ಬಿಜೆಪಿ 17, ಜೆಡಿ-ಯು 12, ಆರ್‌ಜೆಡಿ 4, ಎಲ್‌ಜೆಪಿ(ಆರ್) 3, ಆರ್‌ಎಲ್‌ಜೆಪಿ 1, ಎಚ್‌ಎಎಂ 1 ಆರ್‌ಎಲ್‌ಎಂ 1, ಕಾಂಗ್ರೆಸ್ 1
ಛತ್ತೀಸ್‌ಗಢ: ಒಟ್ಟು ಸ್ಥಾನಗಳು 11 : ಬಿಜೆಪಿ 10, ಕಾಂಗ್ರೆಸ್ 1
ಗೋವಾ: ಒಟ್ಟು ಸ್ಥಾನಗಳು 2 : ಬಿಜೆಪಿ 2
ಗುಜರಾತ್: ಒಟ್ಟು 26 (ಬಿಜೆಪಿ 26)
ಹರಿಯಾಣ: ಒಟ್ಟು ಸ್ಥಾನಗಳು 10 : ಬಿಜೆಪಿ 10
ಹಿಮಾಚಲ ಪ್ರದೇಶ: ಒಟ್ಟು ಸ್ಥಾನಗಳು 4 : ಬಿಜೆಪಿ 4
ಜಾರ್ಖಂಡ್: ಒಟ್ಟು ಸ್ಥಾನಗಳು 14 : ಬಿಜೆಪಿ 12, ಎಜೆಎಸ್‌ಯು 1, ಜೆಎಂಎಂ 1
ಕರ್ನಾಟಕ: ಒಟ್ಟು ಸ್ಥಾನಗಳು 28: ಬಿಜೆಪಿ 22, ಜೆಡಿಎಸ್ 2, ಕಾಂಗ್ರೆಸ್ 4
ಕೇರಳ: ಒಟ್ಟು ಸ್ಥಾನಗಳು 20 : ಯುಡಿಎಫ್ 11, ಎಲ್‌ಡಿಎಫ್ 6, ಬಿಜೆಪಿ 3 (ಕಾಂಗ್ರೆಸ್ -7, ಸಿಪಿಐ-ಎಂ 4, ಬಿಜೆಪಿ 3, ಸಿಪಿಐ 1, ಕೆಸಿ-ಎಂ 1, ಐಯುಎಂಎಲ್ 2, ಆರ್‌ಎಸ್‌ಪಿ 1, ಇತರೆ 1)
ಮಧ್ಯಪ್ರದೇಶ: ಒಟ್ಟು ಸ್ಥಾನಗಳು 29 : ಬಿಜೆಪಿ 29
ಮಹಾರಾಷ್ಟ್ರ: ಒಟ್ಟು ಸ್ಥಾನಗಳು 48 : ಬಿಜೆಪಿ 25, ಶಿವಸೇನೆ-ಯುಬಿಟಿ 8, ಎನ್‌ಸಿಪಿ (ಅಜಿತ್) 4, ಶಿವಸೇನೆ-ಶಿಂಧೆ 6, ಎನ್‌ಸಿಪಿ-ಶರದ್ 3, ಕಾಂಗ್ರೆಸ್ 2
ಮಣಿಪುರ: ಒಟ್ಟು ಸ್ಥಾನಗಳು 2 : ಬಿಜೆಪಿ 1, ಕಾಂಗ್ರೆಸ್ 1
ಮೇಘಾಲಯ: ಒಟ್ಟು ಸ್ಥಾನಗಳು 2 : NPP 2
ಮಿಜೋರಾಂ: ಒಟ್ಟು ಸ್ಥಾನಗಳು 1 : ZPM 1
ನಾಗಾಲ್ಯಾಂಡ್: ಒಟ್ಟು ಸ್ಥಾನಗಳು 1 : NDPP 1
ಒಡಿಶಾ: ಒಟ್ಟು ಸ್ಥಾನಗಳು 21 : ಬಿಜೆಡಿ 11, ಬಿಜೆಪಿ 10
ಪಂಜಾಬ್: ಒಟ್ಟು ಸ್ಥಾನಗಳು 13 : ಎಎಪಿ 6, ಕಾಂಗ್ರೆಸ್ 3, ಬಿಜೆಪಿ 3, ಎಸ್‌ಎಡಿ 1
ರಾಜಸ್ಥಾನ: ಒಟ್ಟು ಸ್ಥಾನಗಳು 25 : ಬಿಜೆಪಿ 25
ಸಿಕ್ಕಿಂ: ಒಟ್ಟು ಸ್ಥಾನಗಳು 1 : SKM 1
ತಮಿಳುನಾಡು: ಒಟ್ಟು ಸ್ಥಾನಗಳು 39 : ಡಿಎಂಕೆ 20, ಎಐಎಡಿಎಂಕೆ 4, ಬಿಜೆಪಿ 4, ಕಾಂಗ್ರೆಸ್ 6, ಪಿಎಂಕೆ 1, ಇತರೆ 4
ತೆಲಂಗಾಣ: ಒಟ್ಟು ಸ್ಥಾನಗಳು 17 : ಕಾಂಗ್ರೆಸ್ 9, ಬಿಜೆಪಿ 5, ಬಿಆರ್‌ಎಸ್ 2, ಎಐಎಂಐಎಂ 1
ತ್ರಿಪುರಾ: ಒಟ್ಟು ಸ್ಥಾನಗಳು 2 : ಬಿಜೆಪಿ 2
ಉತ್ತರ ಪ್ರದೇಶ: ಒಟ್ಟು ಸ್ಥಾನಗಳು 80 : ಬಿಜೆಪಿ 74, ಅಪ್ನಾ ದಳ 2, ಆರ್‌ಎಲ್‌ಡಿ 2, ಎಸ್‌ಪಿ 2
ಉತ್ತರಾಖಂಡ: ಒಟ್ಟು ಸ್ಥಾನಗಳು 5 : ಬಿಜೆಪಿ 5
ಪಶ್ಚಿಮ ಬಂಗಾಳ: ಒಟ್ಟು ಸ್ಥಾನಗಳು 42 : ತೃಣಮೂಲ ಕಾಂಗ್ರೆಸ್ 21, ಬಿಜೆಪಿ 20, ಕಾಂಗ್ರೆಸ್ 1
ಅಂಡಮಾನ್ ನಿಕೋಬಾರ್: ಒಟ್ಟು ಸ್ಥಾನಗಳು 1 : ಬಿಜೆಪಿ 1
ಚಂಡೀಗಢ: ಒಟ್ಟು ಸ್ಥಾನಗಳು 1 : ಬಿಜೆಪಿ 1
ದಾದ್ರಾ ನಗರ ಹವೇಲಿ, ದಮನ್ ಮತ್ತು ದಿಯು: ಒಟ್ಟು ಸ್ಥಾನಗಳು 2 : ಬಿಜೆಪಿ 2
ಜಮ್ಮು ಮತ್ತು ಕಾಶ್ಮೀರ: ಒಟ್ಟು ಸ್ಥಾನಗಳು 5 : ಬಿಜೆಪಿ 2, ಜೆಕೆಎನ್‌ಸಿ 3
ಲಡಾಖ್: ಒಟ್ಟು ಸ್ಥಾನಗಳು 1 : ಬಿಜೆಪಿ 1
ಲಕ್ಷದ್ವೀಪ: ಒಟ್ಟು ಸ್ಥಾನಗಳು 1 : ಕಾಂಗ್ರೆಸ್ 1
ದೆಹಲಿ: ಒಟ್ಟು ಸ್ಥಾನಗಳು 7 : ಬಿಜೆಪಿ 7
ಪುದುಚೇರಿ: ಒಟ್ಟು ಸ್ಥಾನಗಳು 1 : ಬಿಜೆಪಿ 1)
ಒಟ್ಟು 543 ಸ್ಥಾನಗಳು : (ಎನ್‌ಡಿಎ 378, I.N.D.I.A. 98, ಟಿಎಂಸಿ ಸೇರಿದಂತೆ ಇತರೆ 67)
ನಿಮ್ಮ ಕಾಮೆಂಟ್ ಬರೆಯಿರಿ