ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ : ಬಿಜೆಪಿ ಸೇರುವೆ ಎಂದ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ ಗಂಗೋಪಾಧ್ಯಾಯ

ನವದೆಹಲಿ: ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ ಗಂಗೋಪಾಧ್ಯಾಯ ಅವರು ಕೆಲವೇ ಗಂಟೆಗಳ ಹಿಂದೆ ರಾಜೀನಾಮೆ ನೀಡಿರುವುದನ್ನು ದೃಢಪಡಿಸಿದ್ದು, ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರುವುದಾಗಿ ಹೇಳಿದ್ದಾರೆ.
ಮಾರ್ಚ್ 7 ರಂದು ಮಧ್ಯಾಹ್ನದ ವೇಳೆಗೆ ಬಹುಶಃ ನಾನು ಬಿಜೆಪಿಗೆ ಸೇರುವ ಕಾರ್ಯಕ್ರಮವಿದೆ ಎಂದು ಅವರು ಹೇಳಿದರು.
ಕೋಲ್ಕತ್ತಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು “ಬಹಳ ಶ್ರಮಜೀವಿ” ಎಂದು ಬಣ್ಣಿಸಿದರು. ಮತ್ತು ಆಡಳಿತಾರೂಢ ತೃಣಮೂಲ ವಿರುದ್ಧ ಹರಿಹಾಯ್ದರು.
“ತೃಣಮೂಲದ ಭ್ರಷ್ಟಾಚಾರ ಬಯಲಾಗುತ್ತಿದೆ. ಪ್ರಧಾನಿ ಮೋದಿ ತುಂಬಾ ಶ್ರಮಜೀವಿ ಮತ್ತು ಅವರು ಈ ದೇಶಕ್ಕಾಗಿ ಏನನ್ನಾದರೂ ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದ ಅವರು, ಇತರ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು, “ನಾನು ದೇವರು ಮತ್ತು ಧರ್ಮವನ್ನು ನಂಬುತ್ತೇನೆ, ಆದರೆ ಸಿಪಿಎಂ ಅನ್ನು ಅಲ್ಲ ಮತ್ತು ಕಾಂಗ್ರೆಸ್ ಪಕ್ಷವು ಒಂದೇ ಕುಟುಂಬದ ಜಮೀನ್ದಾರಿಯಾಗಿದೆ ಎಂದು ಹೇಳಿದರು..

ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುತ್ತಾರೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿದೆ. ಇತ್ತೀಚಿನ ಚುನಾವಣೆಗಳಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ತಮ್ಲುಕ್ ಸ್ಥಾನಕ್ಕೆ ಅವರು ಸ್ಪರ್ಧಿಸಬಹುದೆಂಬ ಊಹಾಪೋಹವಿದೆ; 2009ರಿಂದಲೂ ತೃಣಮೂಲ ಕಾಂಗ್ರೆಸ್‌ ಈ ಸ್ಥಾನದಲ್ಲಿ ಗೆಲ್ಲುತ್ತ ಬಂದಿದೆ.

ಪ್ರಮುಖ ಸುದ್ದಿ :-   ಮುಂಬೈ: ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ

ಈ ಸ್ಥಾನದಲ್ಲಿ ಸುವೆಂದು ಅಧಿಕಾರಿ (2009 ಮತ್ತು 2016 ರ ನಡುವೆ, ಅವರು ತೊರೆದಾಗ) ಗೆದ್ದಿದ್ದರು. ಅವರು ಬಿಜೆಪಿಗೆ ಪಕ್ಷಾಂತರಗೊಳ್ಳುವ ಮೊದಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬಲಗೈ ಬಂಟ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದರು.
ಮಂಗಳವಾರ ಮುಂಜಾನೆ ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಿದ್ದನ್ನು ದೃಢಪಡಿಸಿದರು, “ನಾನು ಸೌಜನ್ಯಯುತ ಭೇಟಿಗಾಗಿ ಮುಖ್ಯ ನ್ಯಾಯಾಧೀಶರನ್ನು ಭೇಟಿಯಾಗಲಿದ್ದೇನೆ. ನಾನು ಈಗಾಗಲೇ ನನ್ನ ರಾಜೀನಾಮೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದ್ದೇನೆ” ಎಂದು ಸುದ್ದಿಗಾರರಿಗೆ ತಿಳಿಸಿದರು.

ಭಾನುವಾರ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ತೃಣಮೂಲ ವಕ್ತಾರ ಕುನಾಲ್ ಘೋಷ್ ಅವರಿಂದ ರಾಜಕೀಯಕ್ಕೆ ಸೇರಲು ಆಹ್ವಾನವನ್ನು ಸ್ವೀಕರಿಸಿದ್ದರು. ರಾಜಕೀಯ ವಕ್ತಾರನಾಗಿ ಅವರು ನನ್ನ ವಿರುದ್ಧ ಸಾಕಷ್ಟು ವಿಷಯಗಳನ್ನು ಹೇಳಿದ್ದಾರೆ, ಆದರೆ ನಾನು ಅವರನ್ನು ಇಷ್ಟಪಡುತ್ತೇನೆ. ಅವರು ಒಳ್ಳೆಯ ಮನುಷ್ಯ ಎಂದು ಹೇಳಿದರು.
ಅವರು ವಿಚಾರಣೆ ನಡೆಸುತ್ತಿದ್ದ ಪ್ರಕರಣದ ಬಗ್ಗೆ ಸಂದರ್ಶನದ ನೀಡಿದ್ದರ ಹೊರತಾಗಿ – ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ಅವರು ” ಬಾಕಿ ಇರುವ ಪ್ರಕರಣದ ಬಗ್ಗೆ ನ್ಯಾಯಾಧೀಶರು ಸಂದರ್ಶನಗಳನ್ನು ನೀಡುವುದು ಸರಿಯಲ್ಲ” ಎಂದು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ | ತಿಂದ ಆಹಾರದ ಬಿಲ್‌ ಹಣ ಕೇಳಿದ ಹೊಟೇಲ್‌ ಮಾಣಿ ; ಆತನನ್ನು ಕಾರಿನಲ್ಲಿ 1 ಕಿಮೀ ಎಳೆದೊಯ್ದ ದುಷ್ಕರ್ಮಿಗಳು...!

ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಆಗಾಗ್ಗೆ ವಿವಿಧ ವಿಷಯಗಳ ತೀರ್ಪುಗಳೊಂದಿಗೆ ಹೆಡ್‌ಲೈನ್‌ ಸುದ್ದಿಯಾಗಿದ್ದರು. ಈ ವರ್ಷದ ಆರಂಭದಲ್ಲಿ ಅವರು ನ್ಯಾಯಮೂರ್ತಿ ಸೌಮೆನ್ ಸೇನ್ ಅವರು- ಕಾಲೇಜು ಅಕ್ರಮಗಳ ಕುರಿತು ಸಿಬಿಐ ತನಿಖೆಯ ಆದೇಶವನ್ನು ತಡೆಹಿಡಿದ ಕೋಲ್ಕತ್ತಾ ಹೈಕೋರ್ಟ್‌ ಪೀಠದ ನೇತೃತ್ವ ವಹಿಸಿದ್ದರು. ರಾಜಕೀಯ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನ್ಯಾಯಮೂರ್ತಿ ಗಂಗೋಪಾಧ್ಯಾಯ ಆರೋಪಿಸಿದ್ದರು.ಈ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement