ವಿಶ್ವ ಸುಂದರಿ 2024 ಪ್ರಶಸ್ತಿ ಗೆದ್ದ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ

ಮುಂಬೈ: ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟೈನಾ ಪಿಸ್ಕೋವಾ ಅವರು ಶನಿವಾರ ಮಿಸ್‌ ವರ್ಲ್ಡ್ 2024 ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಮಿಸ್ ಲೆಬನಾನ್ ಯಾಸ್ಮಿನಾ ಜೈಟೌನ್ ಮೊದಲ ರನ್ನರ್ ಅಪ್ ಆದರು. ಇಲ್ಲಿ ನಡೆದ ಫೈನಲ್‌ನಲ್ಲಿ ಪೋಲೆಂಡ್‌ನ ವಿಶ್ವ ಸುಂದರಿ ಕರೋಲಿನಾ ಬಿಲಾವ್ಸ್ಕಾ ಅವರು ತಮ್ಮ ಉತ್ತರಾಧಿಕಾರಿಗೆ ಮಿಸ್‌ ವರ್ಲ್ಡ್‌ ಕಿರೀಟವನ್ನು ತೊಡಿಸಿದರು. 28 ವರ್ಷಗಳ ನಂತರ ಆತಿಥ್ಯ ವಹಿಸಿದ್ದ ಭಾರತವನ್ನು 22 ವರ್ಷದ ಸಿನಿ ಶೆಟ್ಟಿ ಪ್ರತಿನಿಧಿಸಿದ್ದರು. 2022 ರಲ್ಲಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟವನ್ನು ಪಡೆದ ಮುಂಬೈ ಮೂಲದ ಶೆಟ್ಟಿ ಅವರಿಗೆ ಸ್ಪರ್ಧೆಯಲ್ಲಿ ಅಗ್ರ 4 ರೊಳಗೆ ಬರಲು ಸಾಧ್ಯವಾಗಲಿಲ್ಲ.
ಭಾರತವು ಆರು ಬಾರಿ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿದೆ — ರೀಟಾ ಫರಿಯಾ (1966), ಐಶ್ವರ್ಯಾ ರೈ ಬಚ್ಚನ್ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ ಜೋನಾಸ್ (2000), ಮತ್ತು ಮಾನುಷಿ ಚಿಲ್ಲರ್ (2017)ರಲ್ಲಿ ಈ ಪ್ರಶಸ್ತಿ ಗೆದ್ದಿದ್ದಾರೆ.

ವಿಶ್ವದ 112 ದೇಶಗಳ ಸ್ಪರ್ಧಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾದ 71 ನೇ ವಿಶ್ವ ಸುಂದರಿ ಸ್ಪರ್ಧೆಯು ಬಿಕೆಸಿಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು.
ಅಂತಿಮ ಹಂತದ 12 ತೀರ್ಪುಗಾರರ ಸಮಿತಿಯ ಭಾಗವಾಗಿ ಚಲನಚಿತ್ರ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ; ನಟರಾದ ಕೃತಿ ಸನೋನ್, ಪೂಜಾ ಹೆಗ್ಡೆ; ಕ್ರಿಕೆಟಿಗ ಹರ್ಭಜನ್ ಸಿಂಗ್; ಪತ್ರಕರ್ತ ರಜತ ಶರ್ಮಾ, ಸಮಾಜ ಸೇವಕಿ ಅಮೃತಾ ಫಡ್ನವಿಸ್; ವಿನೀತ ಜೈನ್, ಬೆನೆಟ್, ಕೋಲ್ಮನ್ & ಕಂ ಲಿಮಿಟೆಡ್ನ MD; ಜೂಲಿಯಾ ಮೊರ್ಲಿ, ವಿಶ್ವ ಸುಂದರಿ ಸಂಸ್ಥೆಯ ಅಧ್ಯಕ್ಷೆ ಮತ್ತು ಸಿಇಒ (CEO); ಜಮಿಲ್ ಸೈದಿ, ಸ್ಟ್ರಾಟೆಜಿಕ್ ಪಾರ್ಟ್ನರ್ ಮತ್ತು ಹೋಸ್ಟ್ – ಮಿಸ್ ವರ್ಲ್ಡ್ ಇಂಡಿಯಾ ಚಿಲ್ಲರ್ ಸೇರಿದಂತೆ ಮೂರು ಮಾಜಿ ವಿಶ್ವ ಸುಂದರಿಯರು ಇದ್ದರು.

ಪ್ರಮುಖ ಸುದ್ದಿ :-   ಮುಂಬೈ: ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement