ಕಾಜಿರಂಗ ಉದ್ಯಾನವನ(ಅಸ್ಸಾಂ); ಪ್ರಧಾನಿ ಮೋದಿ ಎರಡು ದಿನಗಳ ಅಸ್ಸಾಂ ಪ್ರವಾಸದಲ್ಲಿದ್ದು, ಈ ಸಂದರ್ಭದಲ್ಲಿ 18,000 ಕೋಟಿ ರೂ.ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳನ್ನು ಅಸ್ಸಾಂ ಮತ್ತು ಕೇಂದ್ರ ಸರ್ಕಾರಗಳು ಕೈಗೊಳ್ಳುತ್ತಿವೆ.
ಶನಿವಾರ ಬೆಳ್ಳಂಬೆಳಗ್ಗೆಯೇ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವ ಮೂಲಕ ತಮ್ಮ ಪ್ರವಾಸ ಆರಂಭಿಸಿದ ಪ್ರಧಾನಿ ಮೋದಿ, ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ ಮತ್ತು ಜೀಪು ಸಫಾರಿ ಮಾಡಿದ್ದಾರೆ.
ಶುಕ್ರವಾರ, ಅವರು ಮೊದಲು ತೇಜ್‌ಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದರು, ಅಲ್ಲಿ ಅವರನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸ್ವಾಗತಿಸಿದರು. ತೇಜ್‌ಪುರದಿಂದ ಕಾಜಿರಂಗ ಇರುವ ಗೋಲಾಘಾಟ್ ಜಿಲ್ಲೆಗೆ ಹೆಲಿಕಾಪ್ಟರ್ ಹತ್ತಿದ ಮೋದಿ, ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲಿ ರಾತ್ರಿ ಕಳೆದರು.
ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ ಮೋದಿ, ಉದ್ಯಾನವನದ ಸೆಂಟ್ರಲ್ ಕೊಹೊರಾ ಶ್ರೇಣಿಯ ಮಿಹಿಮುಖ್ ಪ್ರದೇಶದಲ್ಲಿ ಆನೆ ಸಫಾರಿ ಮಾಡಿದರು, ನಂತರ ಅದೇ ವ್ಯಾಪ್ತಿಯಲ್ಲಿ ಜೀಪ್ ಸಫಾರಿ ನಡೆಸಿದರು. ಉದ್ಯಾನದ ನಿರ್ದೇಶಕಿ ಸೋನಾಲಿ ಘೋಷ್ ಮತ್ತು ಇತರ ಹಿರಿಯ ಅರಣ್ಯ ಅಧಿಕಾರಿಗಳು ಪ್ರಧಾನಿ ಜೊತೆಗಿದ್ದರು.
ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ಯುನೆಸ್ಕೊ(UNESCO)ದ ವಿಶ್ವ ಪರಂಪರೆಯ ತಾಣ”ದ ಪಟ್ಟಿಯಲ್ಲಿದೆ.
ಇದು “ಒಂದು ಕೊಂಬಿನ ಘೇಂಡಾಮೃಗಗಳ ಜನಸಂಖ್ಯೆ”ಗೆ ಹೆಸರುವಾಸಿ, ಉದ್ಯಾನವನವು ಆನೆಗಳು, ಕಾಡು ನೀರಿನ ಎಮ್ಮೆ, ಜೌಗು ಜಿಂಕೆ ಮತ್ತು ಹುಲಿಗಳಿಗೆ ನೆಲೆಯಾಗಿದೆ. ಈ ಪ್ರಾಣಿಗಳಿಗೆ ಪ್ರಮುಖ ಸಂತಾನೋತ್ಪತ್ತಿ ಸ್ಥಳವಾಗಿದೆ. ಕೆಲ ವರ್ಷಗಳಲ್ಲಿ ಕಾಜಿರಂಗದಲ್ಲಿ ಹುಲಿಗಳ ಸಂಖ್ಯೆಯು ಹೆಚ್ಚಾಯಿತು, ಇದು 2006 ರಲ್ಲಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆಗೆ ಕಾರಣವಾಯಿತು.
ಬರ್ಡ್‌ಲೈಫ್ ಇಂಟರ್‌ನ್ಯಾಷನಲ್‌ನಿಂದ ಪ್ರಮುಖ ಪಕ್ಷಿ ಪ್ರದೇಶವೆಂದು ಗುರುತಿಸಲ್ಪಟ್ಟಿದೆ, ಈ ಉದ್ಯಾನವನವು ಪಕ್ಷಿ ಸಂಕುಲವನ್ನು ಸಂರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
.
ನಿಮ್ಮ ಕಾಮೆಂಟ್ ಬರೆಯಿರಿ