ವೀಡಿಯೊ…| ಭಟ್ಕಳ : ಸಮುದ್ರಕ್ಕೆ ಜಿಗಿದು ಈಜಿದ ಸಚಿವ ಮಂಕಾಳ ವೈದ್ಯ…!

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಸಮೀಪ ಅರಬ್ಬಿ ಸಮುದ್ರದಲ್ಲಿ ಕೃತಕ ಬಂಡೆಸಾಲು ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ್ದ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಸಮುದ್ರದಲ್ಲಿ ಈಜಿ ಗಮನ ಸೆಳೆದಿದ್ದಾರೆ.
ಬೆಳಕೆಯ ಸಮುದ್ರ ತೀರದಲ್ಲಿ ಕೃತಕ ಬಂಡೆಗಳನ್ನು ಸ್ಥಾಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಮಂಕಾಳ ವೈದ್ಯ ಕೃತಕ ಬಂಡೆಗಳನ್ನು ಸಮುದ್ರದಲ್ಲಿ ಇಳಿಸಲು ಪ್ರವಾಸೀ ಬೋಟಿನಲ್ಲಿ ತೀರದಿಂದ ಸ್ವಲ್ಪದೂರ ಸಮುದ್ರಕ್ಕೆ ಅವರು ಅಧಿಕಾರಿಗಳು, ಮೀನುಗಾರರೊಂದಿಗೆ ತೆರಳಿದ್ದರು. ಚಾಲನೆ ನೀಡಲು ತೆರಳಿದ ಸಚಿವರು ಬೋಟಿನಲ್ಲಿ ಅಂಗಿಯನ್ನು ಕಳಚಿಟ್ಟು ಸಮುದ್ರಕ್ಕೆ ಜಿಗಿದರು.

ಒಮ್ಮೆ ಬೋಟಿನಲ್ಲಿದ್ದವರೆಲ್ಲರೂ ಅಚ್ಚರಿಯಲ್ಲಿರುವಾಗ ನೀರಿನಲ್ಲಿ ಮೇಲೆ ಬಂದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು. ನಂತರ ಈಜಾಡಿದ ಸಚಿವರು ನೀರಿನ ಮೇಲೆ ಶವಾಸನ ಮಾಡಿದರು. ಕೆಲಕಾಲ ಈಜಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ನಾನು ಚಿಕ್ಕಂದಿನಿಂದಲೇ ಸಮುದ್ರದಲ್ಲಿ ಈಜಿ, ದಡದಲ್ಲಿಯೇ ಮಲಗಿ, ಇಲ್ಲಿಯೇ ಬದುಕಿ ಜೀವನ ಸಾಗಿದವನು. ಆದರೆ ಕೆಲ ವರ್ಷಗಳಿಂದ ಈಜಿರಲಿಲ್ಲ. ಶನಿವಾರ ಸಾಂಪ್ರದಾಯಿಕ ಮೀನುಗಾರರಿಗೆ ಹೊಸ ಯೋಜನೆಗೆ ಚಾಲನೆ ನೀಡಲು ಬಂದಾಗ ಸಮುದ್ರದ ನೀರು ಕಂಡ ತಕ್ಷಣ ಹಿಂದಿನ ನೆನಪಾಯಿತು. ಈಜಿ ಸಂತಸಪಟ್ಟಿದ್ದೇನೆ ಎಂದರು.

ಪ್ರಮುಖ ಸುದ್ದಿ :-   ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement