ಗೇಟ್‌ ಹಾಕಲು ಮರೆತಿದ್ದಕ್ಕೆ ಪಕ್ಕದ ಮನೆಯವನ ಕಿವಿ ಕಚ್ಚಿ ತುಂಡರಿಸಿ ನುಂಗಿದ ಮಹಿಳೆ…!

ಆಗ್ರಾ: ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರು ತಮ್ಮ ಪಕ್ಕದ ಮನೆಯಾತನ ಕಿವಿಯನ್ನು ಕಚ್ಚಿ ತುಂಡರಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದ ದೇವಿ ನಗರ ಪ್ರದೇಶದಲ್ಲಿ ಶನಿವಾರ ನಡೆದಿದೆ.
ರಾಮವೀರ ಬಘೇಲ್ ಎಂಬ ವ್ಯಕ್ತಿ ಈ ಬಗ್ಗೆ ನ್ಯೂ ಆಗ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಾಧ್ಯವಾಗದಂತೆ ಕತ್ತರಿಸಿದ ಕಿವಿಯನ್ನು ನುಂಗಿದ್ದಾಳೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. ದೂರಿನ ಆಧಾರದ ಮೇಲೆ ಆರೋಪಿ ರಾಖಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಮಾರ್ಚ್ 7 ರಂದು ಮುಖ್ಯ ಗೇಟಿಗೆ ಬೀಗ ಹಾಕುವ ವಿಚಾರದಲ್ಲಿ ರಾಮವೀರ ಮತ್ತು ರಾಖಿಯ ಪತಿ ಸಂಜೀವ ನಡುವೆ ಜಗಳ ನಡೆದ ನಂತರ ಈ ಘಟನೆ ನಡೆದಿದೆ. ರಾಮವೀರ ಮತ್ತು ಸಂಜೀವ ಇಬ್ಬರೂ ರವೀಂದ್ರ ಯಾದವ್ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದಾರೆ. ಗುರುವಾರ ಬೆಳಗ್ಗೆ ಇ-ರಿಕ್ಷಾ ಚಾಲಕ ರಾಮವೀರ ತನ್ನ ಮಗನನ್ನು ಪರೀಕ್ಷೆಗೆಂದು ಶಾಲೆಗೆ ಬಿಡಲು ಹೋದಾಗ ಕಟ್ಟಡದ ಮುಖ್ಯ ಗೇಟಿಗೆ ಬೀಗ ಹಾಕಲು ಮರೆತಿದ್ದ.

ಆತ ಮನೆಗೆ ಹಿಂದಿರುಗಿದ ನಂತರ, ಅವರ ಪಕ್ಕದ ಮನೆಯ ಸಂಜೀವ ಈ ಬಗ್ಗೆ ಅವರನ್ನು ಆಕ್ಷೇಪಿಸಿದ್ದಾನೆ, ಇದು ಮಾತಿನ ಚಕಮಕಿಗೆ ಕಾರಣವಾಯಿತು ಮತ್ತು ಶೀಘ್ರದಲ್ಲೇ ಅವರು ಪರಸ್ಪರ ಜಗಳವಾಡಿದರು. ಗಂಡನ ರಕ್ಷಣೆಗೆ ಮುಂದಾದ ಸಂಜೀವ ಪತ್ನಿ ರಾಖಿ ಆಕ್ರೋಶಗೊಂಡು ಹಿಂಬದಿಯಿಂದ ರಾಮವೀರನ ಕಿವಿ ಕಚ್ಚಿ ತುಂಡರಿಸಿದ್ದಾಳೆ. ಗಾಯವಾಗಿ ರಕ್ತ ಸೋರಿಕೆಯಾಗುತ್ತಿತ್ತು, ನಂತರ ಅಲ್ಲಿ ಸೇರಿದವರು ನನ್ನ ಕಿವಿಯ ತುಂಡಾದ ಭಾಗವನ್ನು ಉಗುಳುವಂತೆ ಹೇಳಿದಾಗ, ಅವಳು ಅದನ್ನು ನುಂಗಿದ್ದಾಳೆ” ಎಂದು ರಾಮವೀರ ದೂರಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ನ್ಯೂ ಆಗ್ರಾ ಪೊಲೀಸ್ ಠಾಣೆಯ ತಂಡವು ಸ್ಥಳಕ್ಕೆ ಆಗಮಿಸಿ ರಾಮವೀರ ಅವರಿಗಾದ ಗಾಯಗಳನ್ನು ನೋಡಿ ಒಮ್ಮೆ ಕಂಗಾಲಾದರು. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ನ್ಯೂ ಆಗ್ರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ಮದ್ಯ ನೀತಿ ಪ್ರಕರಣ : ಅರವಿಂದ ಕೇಜ್ರಿವಾಲಗೆ ದೊಡ್ಡ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement