ಲೋಕಸಭೆ ಚುನಾವಣೆ 2024 : ಬಿಜೆಪಿಯಿಂದ 72 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ; ಸಂಪೂರ್ಣ ಪಟ್ಟಿ ಇಲ್ಲಿದೆ….

ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಲೋಕಸಭೆ ಚುನಾವಣೆಗೆ ತನ್ನ 72 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.
ಬಿಜೆಪಿ ತನ್ನ ಎರಡನೇ ಪಟ್ಟಿಯಲ್ಲಿ ಮಹಾರಾಷ್ಟ್ರ, ಕರ್ನಾಟಕ, ಉತ್ತರಾಖಂಡ, ಗುಜರಾತ್, ಹಿಮಾಚಲ ಪ್ರದೇಶ, ತ್ರಿಪುರ, ತೆಲಂಗಾಣ, ದೆಹಲಿ, ಹರಿಯಾಣ ಮತ್ತು ಮಧ್ಯಪ್ರದೇಶದಿಂದ ಅಭ್ಯರ್ಥಿಗಳನ್ನು ಘೋಷಿಸಿದೆ.
ಬಿಜೆಪಿಯು ಪಕ್ಷವು ನಾಗ್ಪುರದಿಂದ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಮುಂಬೈ ಉತ್ತರದಿಂದ ಪಿಯೂಷ್ ಗೋಯಲ್, ಕರ್ನಾಲ್‌ನಿಂದ ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ಅನೇಕ ಪ್ರಮುಖರನ್ನು ಕಣಕ್ಕಿಳಿಸಿದೆ.
ಕೆಲವು ಪ್ರಮುಖ ಅಭ್ಯರ್ಥಿಗಳೆಂದರೆ ನಾಗ್ಪುರ (ಮಹಾರಾಷ್ಟ್ರ), ಮುಂಬೈ ಉತ್ತರದಿಂದ ಪಿಯೂಷ್ ಗೋಯಲ್, ಪೂರ್ವ ದೆಹಲಿಯಿಂದ ಹರ್ಷ ಮಲ್ಹೋತ್ರಾ, ಗುರ್ಗಾಂವ್‌ನಿಂದ ರಾವ್ ಇಂದ್ರಜಿತ ಸಿಂಗ್, ಹಾವೇರಿಯಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೀಡ್‌ನಿಂದ ಪಂಕಜಾ ಮುಂಡೆ, ಗರ್ವಾಲ್-ಅನಿಲ್ ಬಲುನಿ, ಹರಿದ್ವಾರ- ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಧಾರವಾಡ-ಪ್ರಹ್ಲಾದ ಜೋಶಿ, ಹಮೀರಪುರ-ಅನುರಾಗ ಸಿಂಗ್ ಠಾಕೂರ್ ಮತ್ತು ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ ಕೂಡ ಪಟ್ಟಿಯಲ್ಲಿದ್ದಾರೆ.

ಬಿಜೆಪಿ ಎರಡನೇ ಪಟ್ಟಿಯಲ್ಲಿನ ಅಭ್ಯರ್ಥಿಗಳು…
ದೆಹಲಿ
ಪೂರ್ವ ದೆಹಲಿ: ಹರ್ಷ ಮಲ್ಹೋತ್ರಾ
ವಾಯುವ್ಯ ದೆಹಲಿ: ಯೋಗೇಂದ್ರ ಚಂದೋಲಿಯಾ
ಗುಜರಾತ್
ಸಬರಕಾಂತ: ಭಿಖಾಜಿ ದುಧಾಜಿ ಠಾಕೂರ್
ಅಹಮದಾಬಾದ್ ಪೂರ್ವ: ಹಷ್ಮುಖಭಾಯ್ ಪಟೇಲ್
ಭಾವನಗರ: ನಿಮುಬೆನ್ ಬಂಬಾನಿಯಾ
ವಡೋದರಾ: ರಂಜನಬೆನ್ ಧನಂಜಯ ಭಟ್
ಛೋಟಾ ಉದಯಪುರ: ಜಶುಭಾಯಿ ಭಿಲುಭಾಯಿ ರಥ್ವಾ
ಸೂರತ್: ಮುಖೇಶ ಭಾಯಿ ದಲಾಲ್
ವಲ್ಸಾದ್: ಧವಳ ಪಟೇಲ್
ಹರಿಯಾಣ
ಅಂಬಾಲಾ: ಬಂಟೊ ಕಟಾರಿಯಾ
ಸಿರ್ಸಾ: ಅಶೋಕ್ಕ ತನ್ವರ್
ಕರ್ನಾಲ್: ಮನೋಹರ ಲಾಲ ಖಟ್ಟರ್
ಭಿವಾನಿ: ಚೌಧರಿ ಧರಂಬೀರ್ ಸಿಂಗ್
ಗುರ್ಗಾಂವ್: ರಾವ್ ಇಂದರ್ಜಿತ ಸಿಂಗ್ ಯಾದವ್
ಫರಿದಾಬಾದ್: ಕ್ರಿಶನ್ ಪಾಲ್ ಗುರ್ಜರ್
ಹಿಮಾಚಲ ಪ್ರದೇಶ
ಹಮೀರ್ಪುರ್: ಅನುರಾಗ ಠಾಕೂರ್
ಶಿಮ್ಲಾ: ಸುರೇಶಕುಮಾರ ಕಶ್ಯಪ್

ಪ್ರಮುಖ ಸುದ್ದಿ :-   "ನೀವು ಮತವನ್ನೂ ಹಾಕಿಲ್ಲ...": ತಮ್ಮದೇ ಪಕ್ಷದ ಸಂಸದನಿಗೆ ಶೋಕಾಸ್ ನೋಟಿಸ್ ನೀಡಿದ ಬಿಜೆಪಿ..

ಕರ್ನಾಟಕ
ಚಿಕ್ಕೋಡಿ: ಅಣ್ಣಾಸಾಹೇಬ ಶಂಕರ ಜೊಲ್ಲೆ
ಬಾಗಲಕೋಟ: ಪಿ.ಸಿ.ಗದ್ದಿಗೌಡರ
ವಿಜಯಪುರ: ರಮೇಶ ಜಿಗಜಿಣಗಿ
ಕಲಬುರಗಿ: ಉಮೇಶ ಜಾಧವ
ಬೀದರ: ಭಗವಂತ ಖೂಬಾ
ಕೊಪ್ಪಳ: ಡಾ.ಬಸವರಾಜ ಕ್ಯಾವತೋರ್‌
ಬಳ್ಳಾರಿ: ಬಿ ಶ್ರೀರಾಮುಲು
ಹಾವೇರಿ: ಬಸವರಾಜ ಬೊಮ್ಮಾಯಿ
ಧಾರವಾಡ: ಪ್ರಹ್ಲಾದ ಜೋಶಿ
ದಾವಣಗೆರೆ: ಗಾಯತ್ರಿ ಸಿದ್ದೇಶ್ವರ
ಶಿವಮೊಗ್ಗ: ಬಿ.ವೈ. ರಾಘವೇಂದ್ರ
ಉಡುಪಿ-ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ
ದಕ್ಷಿಣ ಕನ್ನಡ: ಬ್ರಿಜೇಶ್ ಚೌಟ
ತುಮಕೂರು: ವಿ. ಸೋಮಣ್ಣ
ಮೈಸೂರು: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
ಚಾಮರಾಜನಗರ: ಎಸ್ ಬಾಲರಾಜ
ಬೆಂಗಳೂರು ಗ್ರಾಮಾಂತರ: ಡಾ. ಸಿ.ಎನ್.ಮಂಜುನಾಥ
ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ
ಬೆಂಗಳೂರು: ಕೇಂದ್ರ: ಪಿ.ಸಿ.ಮೋಹನ
ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ

ಮಧ್ಯಪ್ರದೇಶ
ಬಾಲಘಾಟ್: ಭಾರತಿ ಪಾರ್ಧಿ
ಛಿಂದ್ವಾರಾ: ವಿವೇಕ ಸಾಹು
ಉಜ್ಜಯಿನಿ: ಅನಿಲ ಫಿರೋಜಿಯಾ
ಧಾರ್: ಸಾವಿತ್ರಿ ಠಾಕೂರ್
ಇಂದೋರ: ಶಂಕರ ಲಾಲ್ವಾನಿ
ಮಹಾರಾಷ್ಟ್ರ
ನಂದೂರಬಾರ: ಹೀನಾ ವಿಜಯಕುಮಾರ ಗವಿತ್
ಧುಳೆ: ಸುಭಾಷ ರಾಮರಾವ್ ಭಾಮ್ರೆ
ಜಲಗಾಂವ್: ಸ್ಮಿತಾ ವಾಘ್
ರೇವರ್: ರಕ್ಷಾ ನಿಖಿಲ್ ಖಡಾಸೆ
ಅಕೋಲಾ: ಅನುಪ ಧೋತ್ರೆ
ವಾರ್ಧಾ: ರಾಮದಾಸ ಚಂದ್ರಭಾಂಜಿ ತಡಸ್
ನಾಗ್ಪುರ: ನಿತಿನ್ ಗಡ್ಕರಿ
ಚಂದ್ರಾಪುರ: ಸುಧೀರ ಮುಂಗಂಟಿವಾರ್
ನಾಂದೇಡ: ಪ್ರತಾಪ ರಾವ್‌ ಪಾಟೀಲ
ಜಲನಾ: ರಾವ್‌ ಸಾಹೇಬ್ಬ ದಾದಾರಾವ್ ದಾನ್ವೆ
ದಿಂಡೋರಿ: ಬರ್ತಿ ಪ್ರವೀಣ ಪವಾರ
ಭಿವಂಡಿ: ಕಪಿಲ ಮೋರೇಶ್ವರ ಪಾಟೀಲ
ಮುಂಬೈ ಉತ್ತರ: ಪಿಯೂಷ್ ಗೋಯಲ್
ಮುಂಬೈ ಈಶಾನ್ಯ: ಮಿಹಿರ್ ಕೊಟೆಚಾ
ಪುಣೆ: ಮುರಳೀಧರ ಕಿಸಾನ್
ಅಹಮದ್‌ನಗರ: ಸುಜಯ ರಾಧಾಕೃಷ್ಣ ವಿಖೆ ಪಾಟೀಲ
ಬೀಡ್‌: ಪಂಕಜಾ ಮುಂಡೆ
ಲಾತೂರ್: ಸುಧಾಕರ ತುಕಾರಾಂ ಶ್ರಂಗಾರೆ
ಮಾಢಾ: ರಂಜೀತಸಿಂಹ ಹಿಂದೂರಾವ್ ನಾಯಕ್
ಸಾಂಗ್ಲಿ : ಸಂಜಯ ಕಾಕಾ ಪಾಟೀಲ

ಪ್ರಮುಖ ಸುದ್ದಿ :-   ಬಾಲಕ ಚಲಾಯಿಸುತ್ತಿದ್ದ ಐಷಾರಾಮಿ ʼಪೋಷೆʼ ಕಾರು ಅಪಘಾತದಲ್ಲಿ ಇಬ್ಬರು ಸಾವು : ತಂದೆಯ ಬಂಧನ

ತೆಲಂಗಾಣ
ಆದಿಲಾಬಾದ್: ಗೊಡಂ ನಾಗೇಶ
ಪೆದ್ದಪಲ್ಲೆ: ಗೋಮಾಸ ಶ್ರೀನಿವಾಸ
ಮೇದಕ್: ಮಾದವನೇನಿ ರಘುನಂದನ ರಾವ್
ಮೆಹಬೂಬನಗರ: ಡಿ.ಕೆ. ಅರುಣಾ
ನಲ್ಗೊಂಡ: ಸೈದಾ ರೆಡ್ಡಿ
ಮಹಬೂಬಾಬಾದ್: ಅಜ್ಮೀರಾ ಸೀತಾರಾಮ್ ನಾಯ್ಕ
ತ್ರಿಪುರಾ
ತ್ರಿಪುರ ಪೂರ್ವ: ಮಹಾರಾಣಿ ಕೃತಿ ಸಿಂಗ್ ದೇಬ್‌ಬರ್ಮಾ
ಉತ್ತರಾಖಂಡ
ಗರ್ವಾಲ್: ಅನಿಲ್ ಬಲುನಿ
ಹರಿದ್ವಾರ: ತ್ರಿವೇಂದ್ರ ಸಿಂಗ್ ರಾವತ್
ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ತಲಾ 20 ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಮಹಾಯುತಿಯಲ್ಲಿ ಸೀಟು ಹಂಚಿಕೆ ಭಿನ್ನಾಭಿಪ್ರಾಯ ಇತ್ಯರ್ಥವಾಗಿದೆ ಎಂಬ ಸ್ಪಷ್ಟ ಸಂದೇಶ ನೀಡಿದೆ. ಮಾರ್ಚ್ 2 ರಂದು ಪಕ್ಷವು 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement