ಆಂಧ್ರ ಚುನಾವಣೆ : ನಟ ಪವನ ಕಲ್ಯಾಣ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ ಸಿನಿ ನಿರ್ದೇಶಕ ರಾಮಗೋಪಾಲ ವರ್ಮಾ…!

ಹೈದರಾಬಾದ್‌ : ಚಿತ್ರ ನಿರ್ಮಾಪಕ ರಾಮಗೋಪಾಲ ವರ್ಮಾ ರಾಜಕೀಯಕ್ಕೆ ಪ್ರವೇಶ ಮಾಡುವುದಾಗಿ ಘೋಷಿಸಿದ್ದಾರೆ. ಮುಂಬರುವ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಿಠಾಪುರಂ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ.
ಈ ಬಗ್ಗೆ ಅವರು X ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದೇ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ನಟ ಪವನ ಕಲ್ಯಾಣ ಸಹ ಪ್ರಕಟಿಸಿದ್ದು, ಅದರ ಬೆನ್ನಿಗೇ ರಾಮಗೋಪಾಲ ವರ್ಮಾ ಅವರು ನಿರ್ಧಾರ ಹೊರಬಿದ್ದಿದೆ.
ಪವನ ಕಲ್ಯಾಣ ಅವರ ಜನಸೇನಾ ಪಕ್ಷವು ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಮತ್ತು ಬಿಜೆಪಿಯೊಂದಿಗೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಿಗೆ ಮೈತ್ರಿ ಮಾಡಿಕೊಂಡಿದೆ.

ಮಾರ್ಚ್ 14 ರಂದು ನಿರ್ದೇಶಕ ರಾಮಗೋಪಾಲ ವರ್ಮಾ ಎಕ್ಸ್‌ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಪ್ರಕಟಿಸಿ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದರು.”ನಾನು ಪಿತಾಪುರಂ ನಿಂದ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸುವ ಹಠಾತ್ ನಿರ್ಧಾರದಿಂದ ಸಂತೋಷವಾಗಿದೆ” ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.

ಆಂಧ್ರಪ್ರದೇಶದಲ್ಲಿ ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಬಿಜೆಪಿ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ) ಯೊಂದಿಗೆ ಅವರ ಪಕ್ಷವು ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದ ದಿನಗಳ ನಂತರ ಪವನ ಕಲ್ಯಾಣ ಅವರ ಘೋಷಣೆ ಬಂದಿದೆ.ಆಂಧ್ರಪ್ರದೇಶದ ಒಟ್ಟು ಒಟ್ಟು 175 ವಿಧಾನಸಭಾ ಕ್ಷೇತ್ರಗಳಲ್ಲಿ ನಟ ಪವನ ಕಲ್ಯಾಣ ಅವರ ಜನಸೇನಾ ಪಕ್ಷವು 21 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಬಿಜೆಪಿ 10 ಸ್ಥಾನಗಳಿಗೆ ಸ್ಪರ್ಧಿಸಲಿದೆ, ಆದರೆ ಟಿಡಿಪಿ 144 ಸ್ಥಾನಗಳಿಗೆ ಸ್ಪರ್ಧಿಸಲಿದೆ.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement