58ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೂಸೆವಾಲಾ ತಾಯಿ

ಚಂಡೀಗಢ: ಎರಡು ವರ್ಷಗಳ ಹಿಂದೆ ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರ ತಾಯಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಸಿಧು ಮೂಸೆವಾಲಾ ಅವರ 58 ವರ್ಷದ ತಾಯಿ ಚರಣ್ ಕೌರ್ ಮತ್ತು 60 ವರ್ಷದ ತಂದೆ ಬಲ್ಕೌರ್ ಸಿಂಗ್ ಅವರು, ಕಳೆದುಕೊಂಡಿದ್ದ ಏಕೈಕ ಮಗನ ಸ್ಥಾನ ತುಂಬಲು ಮತ್ತೊಬ್ಬ ಮಗನನ್ನು ಪಡೆದಿದ್ದಾರೆ.
ಸಿಧು ಮೂಸೆವಾಲಾನಿಗೆ ತಮ್ಮ ಜನಿಸಿದ ಸಂಗತಿಯನ್ನು ಬಲ್ಕೌರ್ ಸಿಂಗ್ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಪುಟ್ಟ ಕಂದಮ್ಮನ ಚಿತ್ರವನ್ನು ಕೂಡ ಅವರು ಪೋಸ್ಟ್ ಮಾಡಿದ್ದಾರೆ.
ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಅನುಭವಿಸಿದ್ದ ಎರಡು ವರ್ಷಗಳ ನೋವನ್ನು ಪುಟ್ಟ ಮಗುವಿನ ಆಗಮನದಿಂದ ಮರೆಯಲು ಸಿಧು ಮೂಸೆವಾಲಾ ಪೋಷಕರು ಬಯಸಿದ್ದರು.

. “ಶುಬ್‌ದೀಪ್‌ನನ್ನು ಪ್ರೀತಿಸುವ ಲಕ್ಷಾಂತರ ಆತ್ಮಗಳ ಆಶೀರ್ವಾದದೊಂದಿಗೆ, ದೇವರು ಶುಭ್‌ನ ಪುಟ್ಟ ಸಹೋದರನನ್ನು ನಮ್ಮ ತೋಳುಗಳಿಗೆ ಕರುಣಿಸಿದ್ದಾನೆ. ವಾಹೆಗುರು ಅವರ ಆಶೀರ್ವಾದದೊಂದಿಗೆ ಕುಟುಂಬವು ಆರೋಗ್ಯಪೂರ್ಣವಾಗಿದೆ. ಎಲ್ಲಾ ಹಿತೈಷಿಗಳಿಗೂ ಅವರ ಅಪಾರ ಪ್ರೀತಿಗಾಗಿ ಧನ್ಯವಾದಗಳು” ಎಂದು ಮಗುವಿನ ಚಿತ್ರದೊಂದಿಗೆ ಬಲ್ಕೌರ್ ಸಿಂಗ್‌ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಸಿಧು ಅವರ ತಾಯಿ ಚರಣ್ ಕೌರ್ ಅವರು ಐವಿಎಫ್ ವಿಧಾನದ ಮೂಲಕ ಗರ್ಭಧರಿಸುವಲ್ಲಿ ಯಶಸ್ವಿಯಾಗಿದ್ದರು. 28 ವರ್ಷದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರನ್ನು 2022ರ ಮೇ 29ರಂದು ಮಾನ್ಸಾದಲ್ಲಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ದುಷ್ಕರ್ಮಿಗಳು ಅವರ ಮೇಲೆ 30 ಸುತ್ತು ಗುಂಡು ಹಾರಿಸಿದ್ದರು.

ಪ್ರಮುಖ ಸುದ್ದಿ :-   ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲಗೆ ಜಾಮೀನು

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement