ಲೋಕಸಭೆ ಚುನಾವಣೆ : ಬಿಹಾರದಲ್ಲಿ ಎನ್‌ ಡಿ ಎ ಸೀಟು ಹಂಚಿಕೆ ಅಂತಿಮ ; ಈ ಬಾರಿ ಬಿಜೆಪಿಯೇ ದೊಡ್ಡಣ್ಣ…ಆ ಸ್ಥಾನ ಬಿಟ್ಟುಕೊಟ್ಟ ಜೆಡಿಯು…!

ನವದೆಹಲಿ: ಎನ್‌ಡಿಎ ಸೋಮವಾರ ಸಂಜೆ ಬಿಹಾರದಲ್ಲಿ ತನ್ನ ಸೀಟು ಹಂಚಿಕೆ ಸೂತ್ರವನ್ನು ಔಪಚಾರಿಕವಾಗಿ ಪ್ರಕಟಿಸಿದ್ದು, ರಾಜ್ಯದಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಅದನ್ನು ‘ದೊಡ್ಡಣ್ಣ’ನ ಸ್ಥಾನದಲ್ಲಿ ಇರಿಸಿದೆ. ಬಿಹಾರದಲ್ಲಿ ಈ ಹಿಂದೆ ಮೈತ್ರಿಕೂಟದಲ್ಲಿ ದೊಡ್ಡಣ್ಣನ ಸ್ಥಾನ ಪಡೆದಿದ್ದ ಮುಖ್ಯಮಂತ್ರಿ ನಿತೀಶಕುಮಾರ ಅವರ ಜೆಡಿಯು ಪಕ್ಷವು 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಚಿರಾಗ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ ಐದು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಜಿತನ್ ರಾಮ ಮಾಂಝಿ ಅವರ ಹಿಂದೂಸ್ತಾನ್ ಅವಾಮ್ ಮೋರ್ಚಾ ಮತ್ತು ಉಪೇಂದ್ರ ಕುಶ್ವಾಹಾ ಅವರ ಆರ್‌ಎಲ್‌ಎಂ ಪಕ್ಷ ತಲಾ ಒಂದು ಸ್ಥಾನದಲ್ಲಿ ಸ್ಪರ್ಧಿಸಲಿದೆ.
ಮೂರು ವರ್ಷಗಳ ಹಿಂದೆ ಪಕ್ಷವನ್ನು ವಿಭಜಿಸಿ ಕ್ಯಾಬಿನೆಟ್ ಸ್ಥಾನವನ್ನು ಪಡೆದ ಚಿರಾಗ ಪಾಸ್ವಾನ್ ಅವರ ಚಿಕ್ಕಪ್ಪ ಪಶುಪತಿ ಪರಾಸ್ ನೇತೃತ್ವದ ಲೋಕ ಜನಶಕ್ತಿ ಪಕ್ಷವು ಎನ್‌ಡಿಎ ಮೈತ್ರಿಕೂಟದ ಭಾಗವಾಗಿಲ್ಲ. ಚಿರಾಗ್ ಪಾಸ್ವಾನ್ ಅವರ ಬಣವು ಪಾಸ್ವಾನ್ ಸಮುದಾಯದ ಮತದ ಮೇಲೆ ಸಂಪೂರ್ಣ ಹಿಡಿತವನ್ನು ಹೊಂದಿದೆ ಎಂದು ಸ್ಪಷ್ಟವಾದ ನಂತರ ಪರಾಸ್ ಅವರ ಬಣವನ್ನು ಕೈಬಿಡಲಾಯಿತು. ಪಾಸ್ವಾನ್‌ ಸಮುದಾಯವು ರಾಜ್ಯದ ಜನಸಂಖ್ಯೆಯ 6%ರಷ್ಟು ಆಗಿದೆ.

ಪ್ರಮುಖ ಸುದ್ದಿ :-   ಗರ್ಭಧಾರಣೆ ಕುರಿತ ಪುಸ್ತಕದಲ್ಲಿ 'ಬೈಬಲ್' ಪದ ಬಳಕೆ: ನಟಿ ಕರೀನಾ ಕಪೂರಗೆ ಮಧ್ಯಪ್ರದೇಶ ಹೈಕೋರ್ಟ್ ನೋಟಿಸ್

ಬಿಜೆಪಿಯು ಎಲ್‌ಜೆಪಿಯ ಭದ್ರಕೋಟೆಯಾದ ನಾವಡಾವನ್ನು ಪಡೆದುಕೊಂಡಿದೆ ಮತ್ತು ಗಯಾ ಮತ್ತು ಕರಕಟ್‌ನ ಕ್ಷೇತ್ರದ ಬದಲಿಗೆ ಜೆಡಿಯುಗೆ ಶಿಯೋಹರ್ ಕ್ಷೇತ್ರ ನೀಡಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸೋತಿದ್ದ ಕಿಶನ್‌ಗಂಜ್‌ ಕೂಡ ಜೆಡಿಯುಗೆ ನೀಡಲಾಗಿದೆ. ಮೂಲಗಳ ಪ್ರಕಾರ ನಿತೀಶಕುಮಾರ ಅವರು ಶಿಯೋಹರ್ ಸ್ಥಾನ ಪಡೆಯಲು ತೀವ್ರ ಲಾಬಿ ನಡೆಸಿದ್ದರು. ಅಲ್ಲಿಂದ ಭಾನುವಾರ ಸಂಜೆ ಪಕ್ಷಕ್ಕೆ ಸೇರ್ಪಡೆಗೊಂಡ ಲವ್ಲಿ ಆನಂದ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಲವ್ಲಿ ಆನಂದ ಅವರು ಮಾಜಿ ಸಂಸದ ಆನಂದ ಮೋಹನ ಅವರ ಪತ್ನಿ ಮತ್ತು ಚೇತನ ಆನಂದ ಅವರ ತಾಯಿ.

ಮಹಾಮೈತ್ರಿಕೂಟವನ್ನು ಎರಡನೇ ಬಾರಿಗೆ ಮುರಿದು ಈ ವರ್ಷದ ಆರಂಭದಲ್ಲಿ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಿರುವ ನಿತೀಶಕುಮಾರ ಅವರ ಜೆಡಿಯು ನಾಯಕ ಸಂಜಯ ಝಾ ಅವರು, “ಎನ್‌ಡಿಎ ಎಲ್ಲಾ 40 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ನಮಗೆ ವಿಶ್ವಾಸವಿದೆ” ಎಂದು ಹೇಳಿದ್ದಾರೆ.
2019 ರಲ್ಲಿ ಸಹ, ಎರಡು ಪಕ್ಷಗಳು, ಮೌನ ಮತ್ತು ಕಹಿ ಮುಖಾಮುಖಿಯ ನಂತರ, 50:50 ಸೂತ್ರವನ್ನು ನಿರ್ಧರಿಸಿ ಸಮಾನ ಸಂಖ್ಯೆಯ ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು.

ಪ್ರಮುಖ ಸುದ್ದಿ :-   ತಾಯಂದಿರ ದಿನದಂದು ಚುನಾವಣಾ ಸಮಾವೇಶದಲ್ಲಿ ಇಬ್ಬರಿಂದ ಅನಿರೀಕ್ಷಿತ ಉಡುಗೊರೆ ಪಡೆದ ಪ್ರಧಾನಿ ಮೋದಿ..| ವೀಕ್ಷಿಸಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement