ಮನೆಯಲ್ಲಿ ಮಗಳು-ಆಕೆಯ ಪ್ರಿಯಕರನನ್ನು ಒಟ್ಟಿಗೆ ನೋಡಿದ ನಂತರ ಮಗಳನ್ನೇ ಕೊಂದ ತಾಯಿ…!

ಹೈದರಾಬಾದ್‌ : ಆಘಾತಕಾರಿ ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ತನ್ನ 19 ವರ್ಷದ ಮಗಳನ್ನು ಆಕೆಯ ಪ್ರಿಯಕರನೊಂದಿಗೆ ತಮ್ಮ ಮನೆಯಲ್ಲಿ ಒಟ್ಟಾಗಿ ಇರುವುದನ್ನು ಕಂಡ ನಂತರ ಮಗಳನ್ನೇ ಹತ್ಯೆಗೈದ ಾರೋಪಿತ ಘಟನೆ ಹೈದರಾಬಾದ್‌ ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಆರೋಪಿಯನ್ನು ಜಂಗಮ್ಮ ಎಂದು ಗುರುತಿಸಲಾಗಿದ್ದು, ಬುಧವಾರ ಮಧ್ಯಾಹ್ನ ಕೆಲಸ ಮುಗಿಸಿ ಊಟಕ್ಕೆ ಮನೆಗೆ ಬಂದಿದ್ದಾಗ ಮಗಳು ಭಾರ್ಗವಿ ತನ್ನ ಪ್ರಿಯಕರನೊಂದಿಗೆ ಒಬ್ಬಳೇ ಮನೆಯಲ್ಲಿ ಇರುವುದನ್ನು ನೋಡಿದ್ದಾಳೆ. ವರದಿಯ ಪ್ರಕಾರ, ಇಬ್ರಾಹಿಂಪಟ್ಟಣಂನಲ್ಲಿರುವ ತಮ್ಮ ಮನೆಯಲ್ಲಿ ಜಂಗಮ್ಮ ತನ್ನ ಮಗಳನ್ನು ಕತ್ತು ಹಿಸುಕಿ ಕೊಂದಿದ್ದಾಳೆ ಎನ್ನಲಾಗಿದೆ.

ಅಲ್ಲಿ ಇಬ್ಬರನ್ನು ಕಂಡು ಆಕೆ ಕೋಪದಲ್ಲಿ ತನ್ನ ಮಗಳ ಗೆಳೆಯನನ್ನು ಮನೆಯಿಂದ ಹೊರಗೆ ಕಳುಹಿಸಿದಳು ಮತ್ತು ಕೋಪದ ಭರದಲ್ಲಿ ಸೀರೆಯನ್ನು ಕುತ್ತಿಗೆಗೆ ಬಿಗಿದು ಸಾಯಿಸುವ ಮೊದಲು ಮಗಳ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಯುವತಿ ತನ್ನ ತಾಯಿ, ತಂದೆ ಮಲ್ಲಯ್ಯ ಮತ್ತು ಸಹೋದರ ಚರಣ್ ಜೊತೆ ವಾಸಿಸುತ್ತಿದ್ದಳು.
ಎನ್‌ಡಿಟಿವಿಯೊಂದಿಗೆ ಮಾತನಾಡಿದ ಇಬ್ರಾಹಿಂಪಟ್ಟಣಂ ಪೊಲೀಸ್ ಅಧಿಕಾರಿ, ಕೊಲೆಗೆ ಪ್ರತ್ಯಕ್ಷದರ್ಶಿಯಾಗಿದ್ದ ಭಾರ್ಗವಿಯ ಅಪ್ರಾಪ್ತ ಸಹೋದರ ದೂರು ದಾಖಲಿಸಿದ್ದಾನೆ. ಸಹೋದರನು ತಾಯಿಯು ಸಹೋದರಿಯ ಮೇಲೆ ಹಲ್ಲೆ ಮಾಡುವುದನ್ನು ಕಿಟಕಿಯಿಂದ ನೋಡಿದ್ದಾನೆ ಎಂದು ಪೊಲೀಸರು ಸೇರಿಸಿದ್ದಾರೆ.
ಆರೋಪಿ ಜಂಗಮ್ಮ ಮಗಳನ್ನು ಮದುವೆ ಮಾಡಕೊಡಲು ವರನನ್ನು ಹುಡುಕುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement