ವೀಡಿಯೊ…| ದೇವಾಲಯದ ಕಾರ್ಯಕ್ರಮದ ವೇಳೆ ಮತ್ತೊಂದು ಆನೆಯ ಮೇಲೆ ದಾಳಿ ಮಾಡಿದ ದೇವರನ್ನು ಹೊತ್ತೊಯ್ಯುತ್ತಿದ್ದ ಆನೆ : ಹಲವರಿಗೆ ಗಾಯ

ತಿರುವನಂತಪುರಂ: ಕೇರಳದ ತರಕ್ಕಲ್‌ನಲ್ಲಿ ದೇವಸ್ಥಾನದ ಕಾರ್ಯಕ್ರಮದ ವೇಳೆ ದೇವರ ಮೂರ್ತಿಯನ್ನು ಹೊತ್ತ ಆನೆಯೊಂದು ಮತ್ತೊಂದು ಆನೆಯ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ. ಘಟನೆಯ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಶುಕ್ರವಾರ ರಾತ್ರಿ 10:30 ಕ್ಕೆ ಗುರುವಾಯೂರ್ ರವಿಕೃಷ್ಣನ್ ಎಂಬ ಆನೆ, ‘ಅಮ್ಮತಿರುವಾಡಿ’ ದೇವರನ್ನು ಹೊತ್ತೊಯ್ಯುತ್ತಿದ್ದಾಗ, ನಿಯಂತ್ರಣ ಕಳೆದುಕೊಂಡು ದೇವರಮೂರ್ತಿ ಹೊತ್ತೊಯ್ಯುತ್ತಿದ್ದ ಪುತ್ತುಪಲ್ಲಿ ಅರ್ಜುನನ್ ಎಂಬ ಆನೆ ಮೇಲೆ ದಾಳಿ ಮಾಡಿದೆ. ಅರ್ಜುನನ್‌ ಎಂಬ ಆನೆ ‘ಅರಟ್ಟುಪುಳ’ ದೇವರನ್ನು ಹೊತ್ತೊಕೊಂಡಿತ್ತು.
ವೀಡಿಯೋದಲ್ಲಿ, ಗುರುವಾಯೂರ್ ರವಿಕೃಷ್ಣನ್ ಎಂಬ ಆನೆಯು ಪುತ್ತುಪಲ್ಲಿ ಅರ್ಜುನನ್‌ ಎಂಬ ಆನೆಯನ್ನು ಸುಮಾರು ಒಂದು ಕಿಲೋಮೀಟರ್ ದೂರದ ವರೆಗೆ ಓಡಿಸಿಕೊಂಡು ಹೋಗಿದೆ.

ಅರ್ಜುನನ್‌ ಎಂಬ ಆನೆ ‘ಅರಟ್ಟುಪುಳ’ ದೇವರನ್ನು ಹೊತ್ತುಕೊಂಡು ಸುಮಾರು ಒಂದು ಕಿಮೀ ಓಡಿದೆ. ಅದೃಷ್ಟವಶಾತ್, ಕೋಪಗೊಂಡ ಆನೆ ಮೂರು ಬಾರಿ ದಾಳಿಗೆ ಯತ್ನಿಸಿದರೂ ಆನೆಯ ಮಾವುತ ಶ್ರೀಕುಮಾರ ಎಂಬವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಈ ದಾಳಿಯು ಭಕ್ತರಲ್ಲಿ ಭಯವನ್ನು ಉಂಟುಮಾಡಿತು ಮತ್ತು ಅನೇಕ ಜನರು ಗಾಯಗೊಂಡಿದ್ದಾರೆ. ಎರಡೂ ಆನೆಗಳು ಹೊತ್ತೊಯ್ದ ಜನರಿಗೆ ಗಾಯಗಳಾಗಿದ್ದು, ಆನೆಯ ಮೇಲೆ ಕುಳಿತವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಬಿದ್ದು ಗಾಯಗೊಂಡರು. ನಂತರ ಆನೆ ದಳದಿಂದ ಎರಡೂ ಆನೆಗಳನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ವರದಿಯಾಗಿದೆ.

ಮಾನವ-ಪ್ರಾಣಿ ಸಂಘರ್ಷದ ವಿಷಯ ಕೇರಳವನ್ನು ಕಾಡುತ್ತಿರುವಾಗಲೇ ಈ ಘಟನೆ ನಡೆದಿದೆ. ಕಾಡುಪ್ರಾಣಿಗಳ ದಾಳಿಗೆ ಕೇರಳದಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.
ಇತ್ತೀಚೆಗಷ್ಟೇ ಅತಿರಪಳ್ಳಿ ಸಮೀಪದ ಅರಣ್ಯ ಪ್ರದೇಶದಲ್ಲಿ 62 ವರ್ಷದ ಮಹಿಳೆಯೊಬ್ಬರು ಕಾಡಾನೆ ದಾಳಿ ನಡೆಸಿ ಸಾವಿಗೀಡಾಗಿದ್ದರು. ಫೆಬ್ರವರಿಯಲ್ಲಿ, ಮಾನಂತವಾಡ ಬಳಿಯ ಜನವಸತಿಗೆ ಬಂದಿದ್ದ ದಾರಿ ತಪ್ಪಿದ ಕಾಡು ಆನೆಯ ದಾಳಿಯಿಂದ 42 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದರು.

ಪ್ರಮುಖ ಸುದ್ದಿ :-   ಸಿಖ್ಖರ ಭಾವನೆಗಳಿಗೆ ಧಕ್ಕೆ ತಂದ ಆರೋಪ ; ರಾಹುಲ್‌ ಗಾಂಧಿ ವಿರುದ್ಧ 3 ಎಫ್‌ಐಆರ್‌ ದಾಖಲು

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement