ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ ಪವನ್‌ ಮೈಕ್ರೋಸಾಫ್ಟ್ ವಿಂಡೋಸ್ ನೂತನ ಮುಖ್ಯಸ್ಥ

ನವದೆಹಲಿ: ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್‌ನ ಹೊಸ ಮುಖ್ಯಸ್ಥರನ್ನು ನೇಮಕಾತಿ ಮಾಡಿರುವುದಾಗಿ ಮೈಕ್ರೋಸಾಫ್ಟ್ ಘೋಷಿಸಿದೆ. ಈ ಹಿಂದೆ ಇದನ್ನು ಮುನ್ನಡೆಸುತ್ತಿದ್ದ ಪನೋಸ್ ಪನಾಯ್ ಅವರ ನಿರ್ಗಮನದ ನಂತರ ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ ಪವನ್ ದಾವುಲೂರಿ ಅವರನ್ನು ಆ ಜಾಗದಲ್ಲಿ ನೇಮಿಸಲಾಗಿದೆ.
ಕಳೆದ ವರ್ಷ, ಪನಾಯ್ ಅವರು ಅಮೆಜಾನ್‌ಗೆ ಸೇರಲು ತನ್ನ ಸ್ಥಾನವನ್ನು ತೊರೆದಿದ್ದರು. ಮೈಕ್ರೋಸಾಫ್ಟ್ ಈ ಹಿಂದೆ ವಿಂಡೋಸ್ ಮತ್ತು ಸರ್ಫೇಸ್‌ಗೆ ಪ್ರತ್ಯೇಕ ಮುಖ್ಯಸ್ಥರನ್ನು ನೇಮಕ ಮಾಡಿತ್ತು. ಅವುಗಳಿಗೆ ಕ್ರಮವಾಗಿ ಮಿಖಾಯಿಲ್ ಪರಾಖಿನ್ ಮತ್ತು ಪವನ್ ದಾವುಲುರಿ ಅವರನ್ನು ನೇಮಿಸಲಾಗಿತ್ತು. ಈಗ, ಪವನ್ ಅವರು ವಿಂಡೋಸ್ ಮತ್ತು ಸರ್ಫೇಸ್ ಎರಡೂ ವಿಭಾಗಗಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಅವರು ಮೈಕ್ರೊಸಾಫ್ಟ್‌ (Microsoft)ನ ಎಕ್ಸ್‌ಪಿರಿಯನ್ಸ್‌ ಮತ್ತು ಡಿವೈಸ್‌ಗಳ ಮುಖ್ಯಸ್ಥರಾದ ರಾಜೇಶ್ ಝಾ ಅವರಿಗೆ ನೇರವಾಗಿ ವರದಿ ಮಾಡುತ್ತಾರೆ. ವಿಂಡೋಸ್ ಮತ್ತೊಮ್ಮೆ ತನ್ನ ವಿಂಡೋಸ್ ಮತ್ತು ಡಿವೈಸ್‌ಗಳ ತಂಡವನ್ನು ಸುವ್ಯವಸ್ಥಿತಗೊಳಿಸುತ್ತಿದೆ ಎಂದು ಝಾ ಮೆಮೊದಲ್ಲಿ ಹೇಳಿದ್ದಾರೆ. ದಿ ವರ್ಜ್ ವರದಿಯ ಪ್ರಕಾರ, “ಈ ಕೃತಕಬುದ್ಧಿಮತ್ತೆ (AI) ಯುಗಕ್ಕೆ ವಿಂಡೋಸ್ ಕ್ಲೈಂಟ್ ಮತ್ತು ಕ್ಲೌಡ್ ಅನ್ನು ವ್ಯಾಪಿಸಿರುವ ಸಿಲಿಕಾನ್, ಸಿಸ್ಟಮ್‌ಗಳು, ಎಕ್ಸ್‌ಪಿರಿಯನ್ಸ್‌ ಮತ್ತು ಡಿವೈಸ್‌ಗಳನ್ನು ನಿರ್ಮಿಸಲು ಸಮಗ್ರ ವಿಧಾನವನ್ನು ಅನುಸರಿಸಲು ಇದು ನಮಗೆ ಅನುವು ಮಾಡಿಕೊಡುತ್ತದೆ ಎಂದು ಮೆಮೊ ಓದಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಬಾಂಗ್ಲಾ ವಿರುದ್ಧದ ಟೆಸ್ಟ್‌ ನಲ್ಲಿ ಎಲ್‌ ಬಿಡಬ್ಲ್ಯು ತೀರ್ಪಿಗೆ ʼಡಿ ಆರ್‌ ಎಸ್ʼ ಮನವಿ ಮಾಡದೆ ವಿರಾಟ್‌ ಕೊಹ್ಲಿ ಪ್ರಮಾದ...!

ಪವನ್ ದಾವುಲೂರಿ ಬಗ್ಗೆ …
ಪವನ್ ದಾವುಲೂರಿ ಅವರು ಮದ್ರಾಸ್‌ನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಳೆಯ ವಿದ್ಯಾರ್ಥಿ. ಪದವಿಯ ನಂತರ, ಅವರು ಅಮೆರಿಕದ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ವಿಜ್ಞಾನದ ಸ್ನಾತಕೋತ್ತರ ಪದವಿ ಪಡೆದರು.
ದಾವುಲುರಿ ಅವರು 23 ವರ್ಷಗಳಿಂದ ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ವೃತ್ತಿಜೀವನವನ್ನು ರಿಲಾಯಾಬಿಲಿಟಿ ಕಾಂಪೊನೆಂಟ್ ಮ್ಯಾನೇಜರ್ (Reliability Component Manager) ಆಗಿ ಪ್ರಾರಂಭಿಸಿದರು. ಪನೋಸ್ ಪನಾಯ್ ಹುದ್ದೆ ತ್ಯಜಿಸಿ ಅಮೆಜಾನ್‌ಗೆ ಸೇರಿದ ನಂತರ ಪವನ್ ದಾವುಲೂರಿ ಅವರನ್ನು ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್‌ನ ನೂತನ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.

ನಾಯಕತ್ವದ ಪಾತ್ರಗಳು:
ಮೈಕ್ರೋಸಾಫ್ಟ್‌ನಲ್ಲಿ ತಮ್ಮ ವೃತ್ತಿಜೀವನದುದ್ದಕ್ಕೂ, ದಾವುಲುರಿ ಅವರು ತಮ್ಮ ಪ್ರಸ್ತುತ ಪಾತ್ರವನ್ನು ವಹಿಸಿಕೊಳ್ಳುವ ಮೊದಲು ವಿಂಡೋಸ್ ಸಿಲಿಕಾನ್ ಮತ್ತು ಸಿಸ್ಟಮ್ಸ್ ಇಂಟಿಗ್ರೇಷನ್ ಅನ್ನು ಮೇಲ್ವಿಚಾರಣೆ ಮಾಡಿದರು.
ದಾವುಲುರಿ ಅವರು ಸಿಲಿಕಾನ್ ವ್ಯಾಲಿಯ ಟೆಕ್ ದೈತ್ಯರನ್ನು ಮುನ್ನಡೆಸುವ ಭಾರತೀಯ ಅಮೆರಿಕನ್ನರ ಗಣ್ಯರ ಗುಂಪಿನಲ್ಲಿಯೂ ಇದ್ದಾರೆ. ಮಧುರೈನಲ್ಲಿ ಜನಿಸಿದ ಸುಂದರ್ ಪಿಚೈ, ಐಐಟಿ ಹಳೆಯ ವಿದ್ಯಾರ್ಥಿಯೂ ಆಗಿದ್ದು, ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ನ ಸಿಇಒ ಆಗಿದ್ದಾರೆ. ಸತ್ಯ ನಾದೆಲ್ಲಾ 2014 ರಿಂದ ಮೈಕ್ರೋಸಾಫ್ಟ್‌ನ ಸಿಇಒ ಆಗಿದ್ದಾರೆ. ಜಾಗತಿಕ ಟೆಕ್ ಕಂಪನಿಗಳ ಇತರ ಪ್ರಮುಖ ಭಾರತೀಯ ಮೂಲದ ಸಿಇಒಗಳಲ್ಲಿ ಕಾಗ್ನಿಜೆಂಟ್‌ನ ರವಿ ಕುಮಾರ ಎಸ್, ಐಬಿಎಂನ ಅರವಿಂದ ಕೃಷ್ಣ, ಪಾಲೊ ಆಲ್ಟೊ ನೆಟ್‌ವರ್ಕ್ಸ್‌ನ ನಿಕೇಶ ಅರೋರಾ, ಯೂಟ್ಯೂಬ್‌ನ ನೀಲ್ ಮೋಹನ ಮತ್ತು ಅಡೋಬ್‌ನ ಶಾಂತನು ನಾರಾಯಣ ಇವರಲ್ಲಿ ಸೇರಿದ್ದಾರೆ. .

ಪ್ರಮುಖ ಸುದ್ದಿ :-   ಮ್ಯಾನ್ಮಾರ್‌ನಿಂದ ಮಣಿಪುರ ಪ್ರವೇಶಿಸಿದ ಶಸ್ತ್ರಸಜ್ಜಿತ 900 ಕುಕಿ ಉಗ್ರಗಾಮಿಗಳು ; ಮಣಿಪುರ ಸರ್ಕಾರದ ಎಚ್ಚರಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement