ದಕ್ಷಿಣದ ಜನಪ್ರಿಯ ನಟ ಸಿದ್ಧಾರ್ಥ ಅವರು ನಟಿ ಅದಿತಿ ರಾವ್ ಹೈದರಿ ಅವರನ್ನು ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. ಮಂಗಳವಾರ ಪ್ರಣಯ ಪಕ್ಷಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನಟಿ ಅದಿತಿ ರಾವ್ ಹೈದರಿ ಮತ್ತು ನಟ ಸಿದ್ಧಾರ್ಥ ಅವರು ಮಾರ್ಚ್ 26, ಮಂಗಳವಾರದಂದು ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಅವರ ವಿವಾಹ ಸಮಾರಂಭವು ತೆಲಂಗಾಣದ ಶ್ರೀರಂಗಪುರದಲ್ಲಿರುವ ಶ್ರೀ ರಂಗನಾಯಕಸ್ವಾಮಿ ದೇವಸ್ಥಾನದ ಮಂಟಪದಲ್ಲಿ ನಡೆಯಿತು. ತೆಲಂಗಾಣದ ವನಪರ್ತಿ ಜಿಲ್ಲೆಯ ಶ್ರೀರಂಗಪುರದ ರಂಗನಾಥ ಸ್ವಾಮಿ ದೇವಸ್ಥಾನದ ಮಂಟಪದಲ್ಲಿ ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು. ವರದಿಗಳ ಪ್ರಕಾರ ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿದೆ. ತಮಿಳುನಾಡಿನ ಪುರೋಹಿತರನ್ನು ಅವರ ಮದುವೆಗೆ ಕರೆಸಲಾಗಿತ್ತು ಎಂದು ವರದಿಯಾಗಿದೆ. ಮದುವೆ ಬಗ್ಗೆ ದಂಪತಿ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ.
ಮದುವೆಗೆ ಆಯ್ಕೆಮಾಡಿದ ಸ್ಥಳವು ಅದಿತಿಯ ಕುಟುಂಬಕ್ಕೆ ಭಾವನಾತ್ಮಕ ಮೌಲ್ಯವನ್ನು ಹೊಂದಿದೆ, ಏಕೆಂದರೆ ಆಕೆಯ ತಾಯಿಯ ಅಜ್ಜ ವನಪರ್ತಿ ಸಂಸ್ಥಾನದ ಕೊನೆಯ ಆಡಳಿತಗಾರರಾಗಿದ್ದರು. ಅಧಿಕೃತ ಚಿತ್ರಗಳು ಮತ್ತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಸಿದ್ದಾರ್ಥ ಮತ್ತು ಅದಿತಿ ತಮ್ಮ ಪ್ರಣವನ್ನು ಎಂದಿಗೂ ಬಹಿರಂಗಗೊಳಿಸದಿದ್ದರೂ, ಅವರು ವಿವಿಧ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.
ತೆಲುಗಿನ “ಮಹಾ ಸಮುದ್ರಂ’ ಚಿತ್ರದ ಸೆಟ್‌ನಲ್ಲಿ ಸಿದ್ಧಾರ್ಥ ಅವರು ಅದಿತಿಯನ್ನು ಭೇಟಿಯಾದರು ಮತ್ತು ಚಿತ್ರದ ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಅರಳಿತು. ಟಾಲಿವುಡ್‌ನಲ್ಲಿ ಸಿದ್ಧಾರ್ಥನಂತೆಯೇ, ಅದಿತಿ ರಾವ್ ಕೂಡ ತೆಲುಗು ಅಭಿಮಾನಿಗಳಿಗೆ ಪರಿಚಿತ ಮುಖ.
ನಿಮ್ಮ ಕಾಮೆಂಟ್ ಬರೆಯಿರಿ