ನೀರಿನ ಟ್ಯಾಂಕಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ : 3-4 ದಿನ ಅದೇ ನೀರು ಕುಡಿದ ಗ್ರಾಮಸ್ಥರು..

ಬೀದರ: ತಾಲೂಕಿನ ಅಣದೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬ ಓವರ್ ಹೆಡ್ ನೀರಿನ ಟ್ಯಾಂಕಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದ್ದು, ಅದೇ ಟ್ಯಾಂಕ್‌ ನೀರನ್ನು ಮೂರ್ನಾಲ್ಕು ದಿನಗಳಿಂದ ಗ್ರಾಮಸ್ಥರು ಕುಡಿದಿದ್ದಾರೆ…!
ಗ್ರಾಮದ ರಾಜಕುಮಾರ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಓವರ್ ಟ್ಯಾಂಕ್ ಏರಿ ಅದರೊಳಗಿನ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಮೂರು ದಿನಗಳ ಬಳಿಕ ಶವ ಪತ್ತೆಯಾಗಿದೆ. ನಲ್ಲಿಯಲ್ಲಿ ಕಲುಷಿತ ನೀರು ಬರುತ್ತಿತ್ತು. ನೀರಿನಿಂದ ವಾಸನೆ ಬರುತ್ತಿತ್ತು. ನಂತರನೀರು ವಿಪರೀತವಾಗಿ ವಾಸನೆ ಬರುತ್ತಿದೆ ಎಂಬುದಾಗಿ ಗ್ರಾಮಸ್ಥರು ದೂರು ನೀಡಿದ್ದಾರೆ. ನಂತರ ಕುಡಿಯುವ ನೀರಿನ ಪೈಪಿಗೆ ಚರಂಡಿ ನೀರು ಸೇರುತ್ತಿರಬೇಕು ಎಂದು ಹುಡುಕಾಡಿದ್ದಾರೆ. ಕೊನೆಗೆ ಸಿಗದ ಕಾರಣ ಅಂತಿಮವಾಗಿ ನೀರಿನ ಓವರ್ ಟ್ಯಾಂಕ್ ಮೇಲೆ ಹತ್ತಿ ನೋಡಿದ್ದಾರೆ. ಆಗ ಅದರಲ್ಲಿ ಶವ ಇರುವುದು ಬೆಳಕಿಗೆ ಬಂದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ಗ್ರಾಮಸ್ಥರ ನೆರವಿನೊಂದಿಗೆ ಶುಕ್ರವಾರ ಟ್ಯಾಂಕ್‍ನಿಂದ ಯುವಕನ ಶವ ಹೊರ ತೆಗೆಯಲಾಯಿತು. ಮೂರು ದಿನಗಳಿಂದ ನೀರು ಸೇವಿಸಿರುವ ಜನ ಈಗ ಆತಂಕ ಕೊಳಗಾಗಿದ್ದು ವೈದ್ಯರು ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. 1.5 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕರ್ ಇದಾಗಿದೆ. ಸುಮಾರು 300 ಜನ ಈ ನೀರು ಅವಲಂಬಿಸಿದ್ದಾರೆ.
ರಾಜಕುಮಾರ ಅವರಿಗೆ ಮದುವೆ ಆಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ತವರಿಗೆ ಹೋಗಿದ್ದ ಪತ್ನಿ ವಾಪಸ್ ಬಂದಿರಲಿಲ್ಲ. ಇದರಿಂದ ಮನ ನೊಂದು ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಪ್ರಮುಖ ಸುದ್ದಿ :-   ಕೃಷ್ಣಾ ನದಿಯಲ್ಲಿ ಮುಳುಗಿಸಿ ವ್ಯಕ್ತಿ ಕೊಲೆ ಪ್ರಕರಣವನ್ನು 1 ವರ್ಷದ ನಂತರ ಭೇದಿಸಿದ ಪೊಲೀಸರು : ಪತ್ನಿ ಸೇರಿ ಮೂವರು ಅರೆಸ್ಟ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement